ಇಂದು ಸ್ಯಾಂಡಲ್ ವುಡ್ ಪ್ರಿನ್ಸ್ ಧ್ರುವ ಸರ್ಜಾರ 33ನೇ ಹುಟ್ಟು ಹಬ್ಬ. ಈ ದಿನ ಮಾರ್ಟಿನ್ ಚಿತ್ರ ತಂಡ ಧ್ರುವ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಕೊಡಲಿದೆ. ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಸಿನಿಮಾ ಮಾರ್ಟಿನ್ ಚಿತ್ರ ತಂಡದಿಂದ ಸ್ಪೆಷಲ್ ಬರ್ಥ್ ಡೇ ಪೋಸ್ಟರ್ ರಿಲೀಸ್ ಆಗಲಿದೆ.
ಈ ಚಿತ್ರಕ್ಕೆ ಉದಯ್ ಮೆಹ್ತಾ ಹಣಕಾಸು ವೆಚ್ಚ ನೋಡಿಕೊಳ್ಳುತ್ತಿದ್ದು, ಎ.ಪಿ. ಅರ್ಜುನ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಆರಂಭವಾಗಿದ್ದು, ಧ್ರುವ ಸಖತ್ ಬ್ಯುಸಿಯಾಗಿದ್ದಾರೆ. ಈ ಹಿಂದೆ ಇನ್ಸ್ಟಾಗ್ರಾಂನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದ ಧ್ರುವ ಸರ್ಜಾ, ನಾನೇನು ದೊಡ್ಡ ಸೆಲಬ್ರಿಟಿಯೇನಲ್ಲಿ . ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಕ್ಕೆ ಮನಸಿಲ್ಲ. ಒಂದು ಕೋರೋನಾ ಮತ್ತೊಂದು ಸಿನಿಮಾ ಚಿತ್ರೀಕರಣದ ನಿಮಿತ್ತ ವೈಜಾಕ್ ನಲ್ಲಿರುತ್ತೇನೆ. ನಿಮ್ಮ ಆಶೀರ್ವಾದ ಹಾಗೂ ಪ್ರೋತ್ಸಾಹವೇ ನನಗೆ ಶ್ರೀರಕ್ಷೆ ಎಂದು ಹೇಳುವ ಮೂಲಕ ಅದ್ಧೂರಿ ಆಚರಣೆಗೆ ಧ್ರುವ ಬ್ರೇಕ್ ಹಾಕಿದ್ದರು.