ಪ್ರಿಯಾಂಕಾ ಉಪೇಂದ್ರ ಅವರ ಹೊಸ ಸಿನಿಮಾ ಘೋಷಣೆ ಆಗಿದೆ. ಈ ಚಿತ್ರಕ್ಕಿನ್ನೂ ಶೀರ್ಷಿಕೆ ಫೈನಲ್ ಆಗಿಲ್ಲ. ಆದರೆ, ಪ್ರಿಯಾಂಕ ಉಪೇಂದ್ರ ಅವರ ಪಾತ್ರ ರಿವೀಲ್ ಆಗಿದೆ.
ತ್ರಿವಿಕ್ರಮ ರಘು ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ‘ಡಿಟೆಕ್ಟಿವ್ ತೀಕ್ಷ್ಣ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿರುವ ಈ ಚಿತ್ರದ ಪೋಸ್ಟರ್ನಲ್ಲಿ ಪ್ರಿಯಾಂಕಾ ಉಪೇಂದ್ರಗೆ ‘ಆಕ್ಷನ್ ಕ್ವೀನ್’ ಎಂಬ ಬಿರುದು ನೀಡಲಾಗಿದೆ. ಹೀಗಾಗಿ ‘ಡಿಟೆಕ್ಟಿವ್ ತೀಕ್ಷ್ಣ’ ಆಗಿ ಪ್ರಿಯಾಂಕಾ ಉಪೇಂದ್ರ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಆಕ್ಷನ್ ಮಾಡಬಹುದು ಎಂಬ ನಿರೀಕ್ಷೆ ಮೂಡಿದೆ.
ಗೌತಮ್ ಸಿನಿಮಾಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ಶ್ರೀದೇವಿ ಕ್ರಿಯೇಷನ್ ಬ್ಯಾನರ್ ಅಡಿ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ತಯಾರಾಗುತ್ತಿದೆ. ಮಹೂರ್ತದ ದಿನ ಚಿತ್ರದ ಶೀರ್ಷಿಕೆ ಪ್ರಕಟಿಸಲಾಗುವುದು. ಉಳಿದ ಕಲಾವಿದರ ಆಯ್ಕೆ ಮತ್ತು ಸಂಗೀತ ನಿರ್ದೇಶಕರ ಆಯ್ಕೆ ನಂತರ ಮಾಡಲಾಗುವುದು.
ಚಿತ್ರಕ್ಕೆ ಮನು ದಾಸಪ್ಪ ಛಾಯಾಗ್ರಹಣವಿದೆ. ಸೆಪ್ಟೆಂಬರ್ನಲ್ಲಿ ಈ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಮೂಡಿಗೆರೆ, ಚಿಕ್ಕಮಗಳೂರು ಮತ್ತು ಉಪ್ಪಿನಂಗಡಿ ಸುತ್ತಮುತ್ತ ಶೂಟಿಂಗ್ ನಡೆಯಲಿದೆ.
ನನ್ನ ಮಗ ಗಿರೀಶ್ ತಪ್ಪು ಮಾಡಿದ್ದಾನೆ. ಅವನಿಗೆ ಕೋರ್ಟ್ ಯಾವ ಶಿಕ್ಷೆ ಬೇಕಾದರು ಕೊಡಲಿ. ಅಂಜಲಿ ಮತ್ತು ಗಿರೀಶ್ ಪರಸ್ಪರ…
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರು ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ…
ಅತಿ ವೇಗವಾಗಿ ಬಂದ ಕಾರೊಂದು ಭಯಾನಕವಾಗಿ ಇನ್ನೊಂದು ಕಾರಿಗೆ ಡಿಕ್ಕಿಯಾಗಿ ಮತ್ತೆ ಮರಕ್ಕೆ ರಭಸದಿಂದ ಗುದ್ದಿದ್ದರಿಂದ ನಾಲ್ವರು ಕಾನೂನು ವಿದ್ಯಾರ್ಥಿಗಳು…
ಪಟ್ಟಣದಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಸ್ಥಳೀಯ ಆಡಳಿತದ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಬೇಸರಗೊಂಡಿದ್ದಾರೆ. ಪಟ್ಟಣದಲ್ಲಿ ಒಟ್ಟು 27 ವಾರ್ಡ್ಗಳು…
ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಮೇ.19 ರಂದು ಭಾನುವಾರ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ ಸಾಯಿಬಾಬಾ…
ಗಡಿಜಿಲ್ಲೆ ವರುಣಾರ್ಭಟ ಮುಂದುವರೆದಿದ್ದು ಶನಿವಾರ ಮಧ್ಯಾಹ್ನದ ಜಿಲ್ಲಾಕೇಂದ್ರದಲ್ಲಿ ಒಂದೂವರೆ ತಾಸು ಜೋರು ಮಳೆಯಾಯಿತು.