ಗೃಹ ಸಚಿವರಿಗೆ ದೂರು ನೀಡಿದ ಕೋಟಿಗೊಬ್ಬ – 3 ಚಿತ್ರತಂಡ

ಬೆಂಗಳೂರು : ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಕೋಟಿಗೊಬ್ಬ-3 ರಿಲೀಸ್‌ಗೂ ಮುನ್ನ ಸಿನಿಮಾಕ್ಕೆ ಪೈರಸಿ ಆತಂಕ ಶುರುವಾಗಿದ್ದು, ಈ ಬಗ್ಗೆ ಚಿತ್ರತಂಡ ಇಂದು  ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನ ಭೇಟಿ ಮಾಡಿ ದೂರು ನೀಡಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ  ಗೃಹ ಸಚಿವ ಆರಗ ಜ್ಞಾನೇಂದ್ರ ಕಷ್ಟಪಟ್ಟು ಕೋಟ್ಯಾಂತರ ಹಣ ಹಾಕಿ ನಿರ್ಮಿಸುವ ಸಿನಿಮಾವನ್ನು ಪೈರಸಿ ಮಾಡುವುದರಿಂದ ಚಿತ್ರರಂಗಕ್ಕೆ ದೊಡ್ಡ ಹೊಡೆತ ಬೀಳುತ್ತದೆ. ಪೈರಸಿ  ತಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಕೋಟಿಗೊಬ್ಬ 3 ಸಿನಿಮಾ ನಿರ್ಮಾಪಕರು ಮಧ್ಯಾಹ್ನ ಪೈರಸಿ ಕೃತ್ಯದ ಬಗ್ಗೆ ತಿಳಿಸಿ ಪೈರಸಿಯನ್ನು ನಿಲ್ಲಿಸುವಂತೆ ಮನವಿ ಕೊಟ್ಟಿದ್ದಾರೆ. ಇದೊಂದು ರೀತಿಯಲ್ಲಿ ಉದ್ದೇಶಿತ ಅಪರಾಧದಂತೆ ಭಾಸವಾಗುತ್ತದೆ. ಚಲನಚಿತ್ರರಂಗಕ್ಕೆ ಹೊಡೆತ ಕೊಡುವ ಪೈರಸಿಯನ್ನು ತಡೆಗಟ್ಟಲು ಎಲ್ಲ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ನಿರ್ಮಾಪಕರಾಗಿರುವ ಸೂರಪ್ಪ ಬಾಬು ಅವರೇ ಇದೀಗ ಗೃಹ ಸಚಿವರಿಗೇ ದೂರು ನೀಡಿದ್ದಾರೆ. ಕೋಟಿಗೊಬ್ಬ-3 ಸಿನಿಮಾ ಬಿಡುಗಡೆ ಮಾಡುವುದಕ್ಕೂ ಮುನ್ನವೇ, ಪೈರಸಿ ಮಾಡ್ತೀವಿ ಅಂತಾ ಕಿಡಿಗೇಡಿಗಳು ಅವರಿಗೆ ಬೆದರಿಕೆ ಹಾಕಿದ್ದಾರೆ ಅಂತೆ. ಟೆಲಿಗ್ರಾಂ ಆಯಪ್​ನಲ್ಲಿ ಸೂರಪ್ಪ ಬಾಬುಗೆ ಬೆದರಿಕೆ ಬಂದಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರಗೆ ಪತ್ರ ಬರೆದಿರುವ ಸೂರಪ್ಪ ಬಾಬು, ಭದ್ರತೆ ನೀಡುವಂತೆ ಕೋರಿದ್ದಾರೆ.

Raksha Deshpande

Recent Posts

ಮೈಸೂರು ಜಿಲ್ಲೆಯಲ್ಲಿ ಶೇ.75ರಷ್ಟು ಮಳೆ ಕೊರತೆ

ಈ ಬಾರಿ ಮುಂಗಾರು ಕೈಕೊಟ್ಟಿದ್ದರಿಂದ ಜಿಲ್ಲೆಯಲ್ಲಿ ಅಂತರ್ಜಲ ಕುಸಿದಿದ್ದು, ಬಿತ್ತನೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ವಾಡಿಕೆಯಷ್ಟು…

5 hours ago

ಮುರುಘಾ ಶರಣರಂತೆ ಪ್ರಜ್ವಲ್‌ ರೇವಣ್ಣನನ್ನು ಬಂಧಿಸಿ: ಮಾರಸಂದ್ರ ಮುನಿಯಪ್ಪ

'ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದಡಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಬಂಧಿಸಿರುವಂತೆ ಹಾಸನದ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ…

6 hours ago

ಯುವತಿಯ ಮೇಲೆ ಅತ್ಯಾಚಾರವೆಸಗಿ ವೀಡಿಯೋ ಹರಿಬಿಟ್ಟ ನಾಲ್ವರು ಅಪ್ರಾಪ್ತರ ಬಂಧನ

ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕೃತ್ಯವನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ  ಹರಿಬಿಟ್ಟ ಘಟನೆ ಏಪ್ರಿಲ್ 21 ರಂದು…

6 hours ago

ಸ್ವತಂತ್ರರಾಗಿ ಬದುಕಲು ಸ್ವತಂತ್ರ ಅಭ್ಯರ್ಥಿಯನ್ನು ಬೆಂಬಲಿಸಿ: ಕೆ. ಬುಕ್ಕಾ ಮನವಿ

ಜಿಲ್ಲೆಯ ಜ‌ನ ಸ್ವತಂತ್ರರಾಗಿ ಬದುಕಬೇಕಾದರೆ‌ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನಗೆ ಬೆಂಬಲಿಸಿ ಮತ ಹಾಕಬೇಕೆಂದು ಪಕ್ಷೇತರ ಅಭ್ಯರ್ಥಿ ಜೈರಾಜ ಕೆ.…

6 hours ago

ವಕೀಲರೊಬ್ಬರ ಮೇಲೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ

ವಕೀಲರೊಬ್ಬರ ಮೇಲೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.

6 hours ago

ಪಾದಯಾತ್ರೆ ನಡೆಸಿ ಮತಯಾಚಿಸಿದ ಶಾಸಕ ಅಶೋಕ್ ಮನಗೂಳಿ

ಭಾನುವಾರ ಸಂಜೆ ಅಲ್ಮೆಲ್ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಮತ್ತು ಶಾಸಕ ಅಶೋಕ ಮನಗೂಳಿಯವರು ಪಾದಯಾತ್ರೆ ನಡೆಸಿ ಮತಯಾಚಿಸಿದರು.

6 hours ago