‘ಗತವೈಭವ’ದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಯಾದ ದುಷ್ಯಂತ್ ..!

ಸಖತ್ ಸಕ್ಸಸ್ ಬಳಿಕ ಸಿಂಪಲ್ ಸುನಿ ‘ಗತವೈಭವ ಸಾರಲು ರೆಡಿಯಾಗಿದ್ದಾರೆ. ಅದು ಹೊಸ ನಾಯಕನನ್ನು ಪರಿಚಯಿಸೋದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಗತವೈಭವ’ದ ಮೂಲಕ ಶಾಸಕ ಎಸ್ ಆರ್ ಶ್ರೀನಿವಾಸ್ ಅವರ ಮಗ ದುಷ್ಯಂತ್    ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿದ್ದಾರೆ.

‘ಗತವೈಭವ’ ಪ್ಯಾಂಟಸಿ ಚಿತ್ರವಾಗಿ ಎಲ್ಲರಿಗೂ ಹೊಸ ಪ್ರಪಂಚವನ್ನೇ ತೋರಿಸಲು ಹೊರಟಿದೆ. ಬಜಾರ್ ಮೂಲಕ ಧನ್ವೀರ್ ಎಂಬ ಹೊಸ ಹೀರೋ ಪರಿಚಯಿಸಿದ ಸಿಂಪಲ್ ಸುನಿ ಇದೀಗ ಮತ್ತೆ ಹೊಸ ನಾಯಕನಿಗಾಗಿ ಅದ್ಭುತ ಕಥೆ ರೆಡಿ ಮಾಡಿದ್ದಾರೆ. ಪ್ರೇಮಕಥೆ, ಸೈಂಟಿಫಿಕ್ ಥ್ರಿಲ್ಲರ್ ಮಾದರಿಯ ಕಥೆಯನ್ನ ಹೆಣೆದಿದ್ದು, ದುಷ್ಯಂತ್ ಲವ್ವರ್ ಬಾಯ್ ಆಗಿ ಎಂಟ್ರಿ ಕೊಡ್ತಿದ್ದಾರೆ.

ದುಷ್ಯಂತ್ ಕೂಡ ಸಿನಿಮಾಗಾಗಿ ಸುಮಾರು ಮೂರು ವರ್ಷಗಳಿಂದಲೂ ತಯಾರಿ ಮಾಡಿಕೊಂಡಿದ್ದಾರೆ. ಹಲವು ಅಭಿನಯ ಶಾಲೆಗಳಲ್ಲಿ ನಟನೆಯ ತರಬೇತಿ ಪಡೆದಿದ್ದಾರೆ. ಟಗರು ರಾಜು, ಭೂಷಣ್ ಕುಮಾರ್ ಹೀಗೆ ಹಲವರ ಬಳಿ ಡಾನ್ಸ್ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಮಾರ್ಷಲ್ ಆರ್ಟ್ಸ್, ಜಿಮ್ನಾಸ್ಟಿಕ್ ಸೇರಿದಂತೆ ಒಬ್ಬ ನಾಯಕ ಏನೇನು ಕಲಿತಿರಬೇಕೋ ಅವೆಲ್ಲವನ್ನೂ ದುಷ್ಯಂತ್ ಕಲಿತಿದ್ದಾರೆ.

ಇನ್ನು ಸಿಂಪಲ್ ಸುನಿ ಬಗ್ಗೆ ಕೇಳ್ಬೇಕಾ, ಸಖತ್ ಸಕ್ಸಸ್, ಅವತಾರ ಪುರುಷನಿಗಿರುವ ಡಿಮ್ಯಾಂಡ್, ಬಜಾರ್ ಸಿನಿಮಾದ ಗತ್ತು. ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಿರ್ದೇಶಕರಲ್ಲಿ ಇವರು ಒಬ್ಬರು. ಇದೀಗ ದುಷ್ಯಂತ್ ಎಂಬ ಹೊಸ ನಟನಿಗೆ ಆಕ್ಷನ್ ಕಟ್ ಹೇಳಲು ಹೊರಟಿದ್ದಾರೆ. ಈ ಕಥೆ ದುಷ್ಯಂತ್ ಗಾಗಿಯೇ ಬರೆದಿದ್ದು ಎಂದು ಹೇಳುವ ಮೂಲಕ ಭರವಸೆ ನಟ ಆಗ್ತಾರೆ ಎಂಬ ಸೂಚನೆ ನೀಡಿದ್ದಾರೆ.

ಸಿನಿಮಾ ಕ್ಷೇತ್ರಕ್ಕೆ ಬರುತ್ತೇನೆ ಎಂದಾಗ ಮನೆಯಲ್ಲಿಅಂತಹ ಪ್ರೋತ್ಸಾಹವೇನೂ ಸಿಗಲಿಲ್ಲ. ನನ್ನ ತಯಾರಿ ಮತ್ತು ಕಿರುಚಿತ್ರಗಳನ್ನು ನೋಡಿದ ಮೇಲೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ. ನನ್ನನ್ನು ಶ್ರೀನಿವಾಸ್ ಅವರ ಪುತ್ರ ಎಂದು ನೋಡದೇ ಒಬ್ಬ ನಟ ಮತ್ತು ಹೊಸಬ ಇಂಡಸ್ಟ್ರಿಗೆ ಬಂದಿದ್ದಾನೆ ಎಂದು ಎಲ್ಲರೂ ನೋಡಿದರೆ ಸಾಕು. ರಾಜಕೀಯಕ್ಕಿಂತ ಇಲ್ಲೇನೋ ಮಾಡಬೇಕೆಂದುಕೊAಡು ಬಂದಿದ್ದೇನೆ ಎಂದಿದ್ದಾರೆ ದುಷ್ಯಂತ್.

ಇವತ್ತು ಹೀರೋ ಲಾಂಚಿAಗ್ ಟೀಸರ್ ಚಿತ್ರತಂಡ ರಿಲೀಸ್ ಮಾಡಿದ್ದಾರೆ. ಡಿಫ್ರೆಂಟ್ ಆಗಿ ಮೂಡಿ ಬಂದಿದೆ. ಹೀರೋನಲ್ಲಿ ಏನೆಲ್ಲಾ ಕಲೆ ಇರ್ಬೇಕು, ಏನೆಲ್ಲಾ ಎಕ್ಸ್ ಪೆಕ್ಟ್ ಮಾಡ್ತಿರೋ ಅದಿದೆ ಅನ್ನೋದನ್ನ ಟೀಸರ್ ತೋರಿಸಿದೆ. ಸಿನಿಮಾಗೆ ಶುಭಾಶಯಗಳ ಮಹಾಪೂರವೂ ಹರಿದು ಬರ್ತಿದೆ. ಸುನಿ ಸಿನಿಮಾಸ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿ ಬರ್ತಿದ್ದು ದೀಪಕ್ ತಿಮ್ಮಪ್ಪ ಹಾಗೂ ಸುನಿ ಇಬ್ಬರು ಸೇರಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.

Sneha Gowda

Recent Posts

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

13 mins ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

27 mins ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

40 mins ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

2 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

2 hours ago

ನಂಜನಗೂಡು ತಾಲ್ಲೂಕಿಗೆ ಶೇ.86.74 ರಷ್ಟು ಫಲಿತಾಂಶ: ವಿದ್ಯಾರ್ಥಿನಿ ಬಾಂಧವ್ಯ ತಾಲೂಕಿಗೆ ಪ್ರಥಮ ‌

ತಾಲ್ಲೂಕಿಗೆ ಶೇ.86.74 ರಷ್ಟು ಫಲಿತಾಂಶ ಬಂದಿದ್ದು, ನಂಜನಗೂಡಿನ ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿನಿ ಬಾಂಧವ್ಯ ತಾಲ್ಲೂಕಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ…

3 hours ago