ನಟ ಯಶ್ ನಟನೆಯ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಪಾರ್ಟ್ 2 ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ನಟಿ ರವೀನಾ ಟಂಡನ್ ಡಬ್ಬಿಂಗ್ ಮುಗಿಸಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡ ನಿರ್ದೇಶಕ ಪ್ರಶಾಂತ್ ನೀಲ್ ಕೂಲೆಸ್ಟ್ ಪ್ರಧಾನ ಮಂತ್ರಿ ತಮ್ಮ ಪಾತ್ರಕ್ಕೆ ಮಾಡಿರೋದಕ್ಕೆ ಧನ್ಯವಾದಗಳು ಎಂದಿದ್ದಾರೆ.
https://twitter.com/prashanth_neel/status/1490933142190170112?ref_src=twsrc%5Etfw%7Ctwcamp%5Etweetembed%7Ctwterm%5E1490933142190170112%7Ctwgr%5E%7Ctwcon%5Es1_c10&ref_url=https%3A%2F%2Fhosadigantha.com%2Fraveena-tandon-as-she-wraps-up-dubbing-for-yash-starrer-kgf-chapter-2%2F
ಈಗಾಗಲೇ ಕೆಜಿಎಫ್ 1 ಅದ್ಭುತ ಯಶಸ್ಸಿನ ನಂತರ ಅಭಿಮಾನಿಗಳು ಚಿತ್ರದ ಮತ್ತೊಂದು ಭಾಗಕ್ಕಾಗಿ ಕಾಯುತ್ತಿದ್ದಾರೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಕಥೆ ಬರೆದು ನಿರ್ದೇಶಿಸಿದ್ದು, ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಭಾರೀ ಮೊತ್ತದೊಂದಿಗೆ ಹೊಂಬಾಳೆ ಫಿಲಂ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ.
ಯಶ್ ಹಾಗೂ ಪ್ರಶಾಂತ್ ನೀಲ್ ಅವರ ಕಾಂಬಿನೇಷನ್ ನ ಈ ಚಿತ್ರ ಏ.14ಕ್ಕೆ ವಿಶ್ವದಾದ್ಯಂತ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದೆ.