ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿದ್ದ ‘ಲವ್ ಮಾಕ್ಟೇಲ್’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಮಾಯಿ ಮಾಡಿತ್ತು. ಇದೇ ಜೋಶ್ನಲ್ಲಿ ‘ಲವ್ ಮಾಕ್ಟೇಲ್ 2’ ಮಾಡಿದ್ದರು ಡಾರ್ಲಿಂಗ್ ಕೃಷ್ಣ. ಮೊದಲ ಪಾರ್ಟ್ಗೂ ಎರಡನೇ ಪಾರ್ಟ್ಗೂ ಲಿಂಕ್ ಕೊಟ್ಟು, ಸಾಕಷ್ಟು ನಗಿಸುವ ಪಂಚಿಂಗ್ ಡೈಲಾಗ್ಗಳನ್ನು ಇಟ್ಟಿದ್ದರು ನಿರ್ದೇಶಕ ಕೃಷ್ಣ. ಚಿತ್ರಮಂದಿರಗಳಲ್ಲಿ ಈ ಸಿನಿಮಾ ಒಳ್ಳೆಯ ಸದ್ದು ಮಾಡಿತ್ತು. ಈಗ ಒಟಿಟಿಯಲ್ಲೂ ‘ಲವ್ ಮಾಕ್ಟೇಲ್ 2’ ಹವಾ ಸೃಷ್ಟಿ ಮಾಡುತ್ತಿದೆ.
‘ಲವ್ ಮಾಕ್ಟೇಲ್’ ಚಿತ್ರದಲ್ಲಿ ಆದಿ (ಡಾರ್ಲಿಂಗ್ ಕೃಷ್ಣ) ಹಾಗೂ ನಿಧಿ (ಮಿಲನಾ ನಾಗರಾಜ್) ಮದುವೆ ಆಗಿತ್ತು. ಆದರೆ, ನಿಧಿ ಕ್ಯಾನ್ಸರ್ನಿಂದ ಸಾಯುತ್ತಾಳೆ. ಆ ಬಳಿಕ ಆದಿ ಒಂಟಿ ಆಗುತ್ತಾನೆ. ಆದಿಗೆ ಮದುವೆ ಮಾಡಿಸೋ ಪ್ರಯತ್ನವೇ ಪಾರ್ಟ್ ಎರಡರ ಹೈಲೈಟ್. ಈ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗೆ ಈ ಸಿನಿಮಾ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿದೆ. ಈ ಚಿತ್ರವನ್ನು ಸಿನಿಪ್ರಿಯರು ಒಟಿಟಿಯಲ್ಲೂ ಇಷ್ಟಪಟ್ಟಿದ್ದಾರೆ.
ಕೊವಿಡ್ ನಿಧಾನವಾಗಿ ಕಡಿಮೆ ಆಗಿದೆ. ಆದಾಗ್ಯೂ ಕೆಲ ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರಕ್ಕೆ ಹೆಜ್ಜೆ ಹಾಕೋಕೆ ಹಿಂಜರಿದಿದ್ದಾರೆ. ಚಿತ್ರಮಂದಿರದಲ್ಲಿ ಸಿನಿಮಾ ಮಿಸ್ ಮಾಡಿಕೊಂಡವರು ಈಗ ಒಟಿಟಿಯಲ್ಲಿ ಚಿತ್ರವನ್ನು ವೀಕ್ಷಣೆ ಮಾಡುತ್ತಿದ್ದಾರೆ. ಹೀಗಾಗಿ, ಅಮೇಜಾನ್ ಪ್ರೈಮ್ ವಿಡಿಯೋ ಟ್ರೆಂಡಿಂಗ್ ಲಿಸ್ಟ್ನಲ್ಲಿ ಈ ಸಿನಿಮಾ ಮೊದಲ ಸ್ಥಾನದಲ್ಲಿ ಇದೆ. ಇದು ಡಾರ್ಲಿಂಗ್ ಕೃಷ್ಣ ಹಾಗೂ ನಿರ್ಮಾಪಕಿ ಮಿಲನಾ ನಾಗರಾಜ್ ಖುಷಿಯನ್ನು ಹೆಚ್ಚಿಸಿದೆ.