‘ಅಪ್ಪು ನಮ್ಮ ಜತೆ ಇಲ್ಲವೆಂದು ನಾನು ಹೇಗೆ ಹೇಳಲಿ? ಎಲ್ಲಾ ಅಭಿಮಾನಿಗಳಲ್ಲಿ ನಾನು ಅಪ್ಪುವನ್ನು ಕಾಣುತ್ತಿದ್ದೇನೆ’ ಎಂದು ನಟ ರಾಘವೇಂದ್ರ ರಾಜ್ಕುಮಾರ್ ನುಡಿದಿದ್ದಾರೆ. ”ನನ್ನ ತಮ್ಮನ ನಿಮ್ಮಲ್ಲೇ ನೋಡುತ್ತೇನೆ. ಇನ್ಮುಂದೆ ಅಭಿಮಾನಿಗಳಲ್ಲಿ ಅಪ್ಪು ಕಾಣಿಸುತ್ತಾರೆ.
ಜೇಮ್ಸ್ ಚಿತ್ರದಲ್ಲೂ ಅಪ್ಪು ಜೀವಂತನೇ. ಇದು ಅಭಿಮಾನಿಗಳ ಅಪ್ಪು ಹಬ್ಬ” ಎಂದು ಭಾವುಕರಾಗಿ ಹೇಳಿದ್ದಾರೆ ರಾಘಣ್ಣ.ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋಗೆ ಭಾರಿ ಸಂಖ್ಯೆಯಲ್ಲಿ ಜನ ಆಗಮಿಸಿದ್ದಾರೆ. ಹೀಗಾಗಿ ಕಂಠೀರವ ಸ್ಟುಡಿಯೋದಲ್ಲಿ ಪೊಲೀಸ್ ಬಿಗಿಭದ್ರತೆ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.