News Karnataka Kannada
Wednesday, April 17 2024
Cricket
ಸಾಂಡಲ್ ವುಡ್

ಪುನೀತ್ ರಾಜಕುಮಾರ್ ಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ ಪ್ರದಾನ

ತಾಲೂಕಿನ ಜಾಗರ ಹೋಬಳಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಗಾಳಿಗುಡ್ಡೆ ಗ್ರಾಮದಲ್ಲಿ ಫೆ.೨೯ ರಂದು ಡಾ. ಪುನೀತ್‌ರಾಜ್‌ಕುಮಾರ್ ಅವರ ಪುತ್ಥಳಿ ಲೋಕಾರ್ಪಣೆ ಮಾಡಲಾಗುವುದು ಎಂದು ಕಸಾಪ ಹೋಬಳಿ ಅಧ್ಯಕ್ಷ ವಾಸುಪೂಜಾರಿ ಹೇಳಿದರು.
Photo Credit : IANS

ಚಿತ್ರದುರ್ಗ : ಪವರ್ ಸ್ಟಾರ್ ಡಾ.ಪುನೀತ್ ರಾಜಕುಮಾರ್ ಅವರಿಗೆ ಚಿತ್ರದುರ್ಗ ಮುರುಘಾ ಮಠದಿಂದ ಮರಣೋತ್ತರವಾಗಿ 2021ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮುರುಘಾರಾಜೇಂದ್ರ ಮಠದ ಅನುಭವ ಮಂಟಪದಲ್ಲಿ ಮಂಗಳವಾರ ಬಸವ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ದಿ.ಪುನೀತ್ ಅವರ ಪರವಾಗಿ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಪುರಸ್ಕಾರ ಸ್ವೀಕರಿಸಿದರು. ಬಸವಶ್ರೀ ಪ್ರಶಸ್ತಿ 5 ಲಕ್ಷ ರೂ. ನಗದು ಹಾಗೂ ಪಾರಿತೋಷಕವನ್ನು ಒಳಗೊಂಡಿದೆ. ಮುರುಘಾ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರು ಪ್ರದಾನ ಮಾಡಿದರು.

ಪ್ರಶಸ್ತಿ ಪ್ರದಾನ ಮಾಡಿದ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ನಟ ಪುನೀತ್ ಅವರಿಗೆ ಬಸವಶ್ರೀ ಪ್ರಶಸ್ತಿ ನೀಡುವ ಮೂಲಕ ಅವರ ಇಡೀ ಕುಟುಂಬಕ್ಕೆ ಮಧ್ಯ ಕರ್ನಾಟಕದಿಂದ ಗೌರವಿಸುವ ಕೆಲಸ ಮಾಡಲಾಗಿದೆ. ರಾಜಕುಮಾರ್ ಮುದ್ದಿನ ಮಗ ಪುನೀತ್. ಬೆಳ್ಳಿ ತೆರೆಯಲ್ಲಿ ನಟಿಸಿದ ಮಹಾನ್ ಪ್ರತಿಭಾವಂತ. ಅಭಿನಯ-ಅಭಿವ್ಯಕ್ತಿ-ಹಾಡುಗಾರಿಕೆಯಲ್ಲಿ ಅವರು ಪುನೀತ ಎಂದು ಬಣ್ಣಿಸಿದರು. ತಂದೆಯ ಸ್ಪೂರ್ತಿ ಇಟ್ಟುಕೊಂಡು ಆಕಾಶದೆತ್ತರಕ್ಕೆ ಬೆಳೆದವರು, ಇಂತಹ ಪ್ರತಿಭಾವಂತರನ್ನು ಪಡೆದ ಕನ್ನಡನಾಡು ಮಾನ್ಯ, ನಾವೆಲ್ಲರೂ ಧನ್ಯ ಎಂದರು.

ಸಾಹಿತಿ ಡಾ.ರಾಜಪ್ಪ ದಳವಾಯಿ ಮಾತನಾಡಿ, ಪುನೀತ್ ಅವರ ವಿಚಾರದಲ್ಲಿ ಈ ನಾಡು ಎಂದೂ ಅಭಿಮಾನ ಶೂನ್ಯ ಅಲ್ಲ ಎಂಬುದನ್ನು ತೋರಿಸಿದೆ. 25 ಲಕ್ಷಕ್ಕೂ ಹೆಚ್ಚು ಜನ ಅವರ ಸಾವಿನಿಂದ ದುಃಖಿತರಾಗಿದ್ದಾರೆ. ಕರ್ನಾಟಕದ ಮಠ ಪರಂಪರೆಯಲ್ಲಿ ಮುರುಘಾ ಮಠ ಎಷ್ಟು ಮುಖ್ಯವೋ, ಕನ್ನಡ ಚಿತ್ರರಂಗಕ್ಕೆ ಡಾ.ರಾಜ್ ಕುಟುಂಬ ಅಷ್ಟೇ ಮುಖ್ಯವಾಗಿದೆ ಎಂದು ಹೇಳಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ್, ಚಲನಚಿತ್ರ ನಿರ್ಮಾಪಕ ಚಿನ್ನೇಗೌಡ, ಸಾಹಿತಿ ರಾಜಪ್ಪ ದಳವಾಯಿ, ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಂಎಲ್ಸಿ ಕೆ.ಎಸ್.ನವೀನ್, ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಎಸ್ಪಿ ಕೆ‌.ಪರಶುರಾಮ್, ಜಿಪಂ ಸಿಇಒ ಡಾ.ನಂದಿನಿದೇವಿ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು