News Karnataka Kannada
Thursday, April 25 2024
ಸಾಂಡಲ್ ವುಡ್

ಇಂದು ವಿಶ್ವಾದ್ಯಂತ ಕೆಜಿಎಫ್-2 ಸಿನಿಮಾ ತೆರೆಗೆ: 5 ಭಾಷೆಗಳಲ್ಲಿಯೂ ಭರ್ಜರಿ ಓಪನಿಂಗ್

Kgf
Photo Credit :

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2(KGF-2) ಸಿನಿಮಾ ವಿಶ್ವಾದ್ಯಂತ ಇಂದು ಏಪ್ರಿಲ್ 14ಕ್ಕೆ ತೆರೆಗೆಬಂದಿದೆ. ಬೆಂಗಳೂರಿನಲ್ಲಿ ಮಧ್ಯರಾತ್ರಿಯೇ 5 ಕಡೆಗಳಲ್ಲಿ ಫಸ್ಟ್ ಶೋ ಆರಂಭವಾಗಿದ್ದು, ರಾಜ್ಯದ 550ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ತೆರೆಕಂಡಿದೆ, ಭಾರತದಾದ್ಯಂತ 6 ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಕೆಜಿಎಫ್-2 ಪ್ರದರ್ಶನವಾಗುತ್ತಿದೆ.

ಇಡೀ ವಿಶ್ವದ ಚಿತ್ರರಂಗ ತಿರುಗಿ ನೋಡುತ್ತಿರುವ ರೀತಿಯಲ್ಲಿ ಕನ್ನಡಿಗರು ತೆರೆಗೆ ತಂದಿರುವ ಚಿತ್ರಕ್ಕೆ ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲಿಯೂ ಭರ್ಜರಿ ಓಪನಿಂಗ್ ಸಿಕ್ಕಿರುವುದು ವಿಶೇಷ. ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲಯಾಳಂಗಳಲ್ಲಿ ಸಹ ಚಿತ್ರಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಮೊದಲ ದಿನವೇ ಚಿತ್ರ ಕೋಟಿ ಕೋಟಿ ರೂಪಾಯಿ ಗಳಿಸುವುದು ಖಚಿತವಾಗಿದೆ. ಇಂದು ಬೆಳಗ್ಗೆ ಮೊದ ಶೋ ನೋಡಿ ಬಂದವರು ರಾಕಿಬಾಯ್ ಯನ್ನು ಹೊಗಳುತ್ತಿದ್ದಾರೆ. ಅನೇಕ ಮಹಿಳಾ ಅಭಿಮಾನಿಗಳು, ಮಕ್ಕಳು ಫಿದಾ ಆಗಿರುವುದು ವಿಶೇಷ. 5 ಭಾಷೆಗಳಲ್ಲಿ 70 ದೇಶಗಳಲ್ಲಿ ಕೆಜಿಎಫ್-2 ಬಿಡುಗಡೆಯಾಗಿದೆ. ಉತ್ತರ ಭಾರತದಲ್ಲಿ ಕೂಡ ಕೆಜಿಎಫ್-2 ಹವಾ ಆರಂಭವಾಗಿದೆ. ಕರ್ನಾಟಕದಲ್ಲಿ ಎಲ್ಲಾ ಥಿಯೇಟರ್ ಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿದೆ.

ಕೋಲಾರದಲ್ಲಿ ಬಿಡುಗಡೆ ಆಗಿಲ್ಲ: ಚಿತ್ರ ವಿತರಣೆಗೆ ಸಂಬಂಧಪಟ್ಟಂತೆ ವಿತರಕರು ಮತ್ತು ಚಿತ್ರಮಂದಿರ ಮಾಲೀಕರ ಮಧ್ಯೆ ಹಣದ ವಿಚಾರವಾಗಿ ಭಿನ್ನಾಭಿಪ್ರಾಯ ಬಂದಿರುವುದರಿಂದ ಕೋಲಾರದಲ್ಲಿ ಕೆಜಿಎಫ್-2 ಬಿಡುಗಡೆಯಾಗಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು