News Karnataka Kannada
Thursday, April 25 2024
Cricket
ಸಾಂಡಲ್ ವುಡ್

‘ಅಪ್ಪು’ ಸಿನಿಮಾಗೆ 20 ವರ್ಷ : ಭಾವುಕ ಪೋಸ್ಟ್‌ ಹಂಚಿಕೊಂಡ ರಕ್ಷಿತಾ ಪ್ರೇಮ್

Appu
Photo Credit :

 ಸಾಂಡಲ್ ವುಡ್:  1976ರಲ್ಲಿ ತೆರೆಕಂಡ ‘ಪ್ರೇಮದ ಕಾಣಿಕೆ’ ಸಿನಿಮಾದಲ್ಲಿ ‘ಪವರ್ ಸ್ಟಾರ್’ ಕಾಣಿಸಿಕೊಂಡಾಗ, ಅವರಿಗಿನ್ನೂ ಆಗ ಆರು ತಿಂಗಳು! ಅನಂತರ ಬಾಲ ಕಲಾವಿದನಾಗಿ ಪುನೀತ್ ಸಾಕಷ್ಟು ಜನಪ್ರಿಯರಾದರು.

ವಯಸ್ಸು 10 ದಾಟುವುದರೊಳಗೆ ರಾಷ್ಟ್ರ, ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡರು. ‘ಪರಶುರಾಮ’ ಚಿತ್ರದ ನಂತರ ಪುನೀತ್ ನಟನೆಯಿಂದ ದೂರು ಉಳಿದರು. ಆನಂತರ ಅವರು 2002ರ ಏಪ್ರಿಲ್ 26ರಂದು ತೆರೆಕಂಡ ” ಚಿತ್ರದ ಮೂಲಕ ಹೀರೋ. ಇವತ್ತಿಗೆ ಆ ಸಿನಿಮಾ ತೆರೆಕಂಡು ಭರ್ತಿ 20 ವರ್ಷ ತುಂಬಿದೆ.

ದುರಾದೃಷ್ಟವೆಂದರೆ, ಈ ಸಂಭ್ರಮವನ್ನು ಆಚರಿಸಲು ಇಂದು ಪುನೀತ್ ನಮ್ಮೊಂದಿಗೆ ಇಲ್ಲ. ಅವರ ನೆನಪಿನಲ್ಲಿ, ‘ಅಪ್ಪು’ ಸಿನಿಮಾ 20 ವರ್ಷ ಪೂರೈಸಿದ್ದರ ಹಿನ್ನೆಲೆಯಲ್ಲಿ ಆ ಚಿತ್ರದಿಂದ ನಟಿಯಾಗಿ ಎಂಟ್ರಿ ರಕ್ಷಿತಾ ಪ್ರೇಮ್ ಒಂದು ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಮಿಸ್ ಯೂ ಪುನೀತ್   

‘ಅಪ್ಪು ಸಿನಿಮಾ ರಿಲೀಸ್ ಆಗಿ 20 ವರ್ಷ ಆಯ್ತು. ಎಂಥ ಸುಂದರ ಸಿನಿಮಾ ಮತ್ತು ಎಂಥ ಅದ್ಭುತವಾದ ಅನುಭವ. ನನಗೆ ಇಂದಿಗೂ ಸದಾ ಸ್ಪೂರ್ತಿಯಾಗಿರುವ ಸ್ಟ್ರಾಂಗ್ ಮಹಿಳೆ ಪಾರ್ವತಮ್ಮ ರಾಜ್‌ಕುಮಾರ್ ಅಮ್ಮ ಅವರನ್ನು ನಾನು ಅಂದು ಭೇಟಿಯಾಗಿದ್ದೆ.

ಅವರಿಲ್ಲದೇ ನಾನು ಇಂದು ಇಲ್ಲಿ ಇರುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಇವತ್ತು ಅಪ್ಪು ಅವರನ್ನು ನಾನು ಮಿಸ್ ಮಾಡ್ಕೋತಿನಿ. ಎಲ್ಲಕ್ಕಿಂತ ಹೆಚ್ಚಾಗಿ ಆ ನಗು… ಕೇವಲ ಆ ನಗುವನ್ನು ಮಿಸ್ ಮಾಡಿಕೊಳ್ಳುತ್ತೇನೆ. ನನ್ನ ಸ್ನೇಹಿತ ಪುನೀತ್ ರಾಜ್‌ಕುಮಾರ್, 20 ವರ್ಷಗಳಾಗಿವೆ. ಶುಭಾಶಯಗಳು ಮೈ ಡಿಯರ್ ಫ್ರೆಂಡ್. ನಾವೆಲ್ಲ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇವೆ’ ಎಂದು ಪೋಸ್ಟ್ ಹಾಕಿದ್ದಾರೆ ರಕ್ಷಿತಾ.

ಎಲ್ಲರಿಗೂ ಧನ್ಯವಾದಗಳು

‘ನನ್ನ ಗಾಡ್ ಫಾದರ್ ಪುರಿ ಜಗನ್ನಾಥ್ ಅವರಿಗೆ ಧನ್ಯವಾದಗಳು. ನಿರ್ದೇಶಕ ಮಹೇಶ್ ಬಾಬು ನೀವು ಆಗ ಸಹ ನಿರ್ದೇಶಕರಾಗಿದ್ದೀರಿ. ಕೊಂಚ ನನಗೆ ಹೇಳಿಕೊಟ್ಟಿದ್ದೀರಿ. ‘ಅಪ್ಪು’, ಈ ಸಿನಿಮಾ ನನ್ನ ಹೃದಯಕ್ಕೆ ತುಂಬ ಹತ್ತಿರವಾಗಿದೆ. ನನಗೆ ಇಂದು ಶುಭ ಕೋರಿದ ಎಲ್ಲರಿಗೂ ಧನ್ಯವಾದಗಳು.

ನಾನು ನನ್ನ ಜೀವನದ ಅರ್ಧಕ್ಕಿಂತ ಹೆಚ್ಚು ಸಮಯವನ್ನು ಇಲ್ಲಿ ಕಳೆದಿದ್ದೇನೆ. ಈ ಅನುಭವವನ್ನು ತುಂಬ ಸುಂದರವಾಗಿಸಿದ್ದಕ್ಕಾಗಿ ನನ್ನ ಎಲ್ಲಾ ಸ್ನೇಹಿತರು, ಕುಟುಂಬ ಮತ್ತು ಅಭಿಮಾನಿಗಳಿಗೆ ನಾನು ಕೃತಜ್ಞಳಾಗಿದ್ದೇನೆ’ ಎಂದಿದ್ದಾರೆ ರಕ್ಷಿತಾ.

ಅಂದಹಾಗೆ, 2002ರಲ್ಲಿ ತೆರೆಕಂಡ ‘ಅಪ್ಪು’ ಸಿನಿಮಾ ಹಲವು ದಾಖಲೆಗಳನ್ನು ಬರೆಯಿತು. ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಅಪ್ಪು’ ಸಿನಿಮಾ ನಂತರ ತೆಲುಗಿನಲ್ಲಿ ‘ಈಡಿಯಟ್’, ತಮಿಳಿನಲ್ಲಿ ‘ದಿಲ್’, ಬಂಗಾಳಿಯಲ್ಲಿ ‘ಹೀರೋ’ ಹಾಗೂ ಬಾಂಗ್ಲಾದೇಶಿ ಬಂಗಾಳಿ ಭಾಷೆಯಲ್ಲಿ ‘ಪ್ರಿಯಾ ಅಮರ್ ಪ್ರಿಯಾ’ ಹೆಸರಿನಲ್ಲಿ ರೀಮೇಕ್ ಆಗಿದೆ.

1986ರಲ್ಲಿ ತೆರೆಕಂಡ ‘ಅನುರಾಗ ಅರಳಿತು’ ಸಿನಿಮಾ ಬಳಿಕ ಬಾಂಗ್ಲಾದೇಶಿ ಬಂಗಾಳಿ ಭಾಷೆಗೆ ರೀಮೇಕ್ ಆದ ಎರಡನೇ ಸಿನಿಮಾ ಇದು. ಸ್ಕೂಲ್ ಮಾಸ್ಟರ್, ಅನುರಾಗ ಅರಳಿತು ಸಿನಿಮಾಗಳ ಬಳಿಕ ನಾಲ್ಕು ಭಾಷೆಗಳಿಗೆ ರಿಮೇಕ್ ಆದ ಮೂರನೇ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಅಪ್ಪು’ ಚಿತ್ರ ಪಾತ್ರವಾಗಿದೆ. ಈ ಚಿತ್ರದ ಅಂದು ಯಶಸ್ವಿಯಾಗಿ 200 ದಿನ ಪ್ರದರ್ಶನ ಕಂಡಿತ್ತು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು