News Karnataka Kannada
Monday, April 29 2024
ಸಾಂಡಲ್ ವುಡ್

ಮುಂಬೈ,: ಕನ್ನಡದ “ಕೆಡಿ” ಚಿತ್ರದಲ್ಲಿ ಶಿಲ್ಪಾ ನಟನೆ

Shilpa Shetty to star in Kannada film "KD"
Photo Credit : News Kannada

ಮುಂಬೈ,: ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಸುಮಾರು 18 ವರ್ಷಗಳ ನಂತರ ‘ಕೆಡಿ- ದಿ ಡೆವಿಲ್’ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಲು ಸಿದ್ಧರಾಗಿದ್ದಾರೆ. ಯುಗಾದಿಯಂದು ಶಿಲ್ಪಾ ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ.

ಕೆಡಿ ಚಿತ್ರದಲ್ಲಿ ಸತ್ಯವತಿಯಾಗಿ ಯುದ್ದಕ್ಕೆ ಪ್ರವೇಶಿಸುವ ಪಾತ್ರ ನಿರ್ವಹಿಸಲು ರೋಮಾಂಚನಗೊಂಡಿದ್ದೇನೆ ಎಂದು ತಿಳಿಸಿದ್ದಾರೆ. 1993 ರಲ್ಲಿ ಶಾರುಖ್ ಖಾನ್ ಅಭಿನಯದ ‘ಬಾಜಿಗರ್’ ಚಿತ್ರದ ಮೂಲಕ ಶಿಲ್ಪಾ ನಟನೆಗೆ ಪಾದಾರ್ಪಣೆ ಮಾಡಿದರು. ‘ಕರಿಯ’ ಖ್ಯಾತಿಯ ಪ್ರೇಮ್ ನಿರ್ದೇಶನದ ‘ಕೆಡಿ’ ಕನ್ನಡದಲ್ಲಿ ಮತ್ತೊಂದು ಅಲೆ ಸೃಷ್ಟಿಸುತ್ತದೆ ಎಂಬ ಭಾವನೆಯಿದೆ.

1970 ರ ದಶಕದಲ್ಲಿ ಬೆಂಗಳೂರಿನಲ್ಲಿ ನಡೆದ ಘಟನೆಗಳ ಆಧಾರದ ಮೇಲೆ ಆಕ್ಷನ್ ಚಿತ್ರ ನಿರ್ಮಾಣವಾಗಲಿದೆ. ಇದರಲ್ಲಿ ಧ್ರುವ ಸರ್ಜಾ, ವಿ ರವಿಚಂದ್ರನ್ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು