ಬೆಂಗಳೂರು: ನಟ ದುನಿಯಾ ವಿಜಯ್ ಅವರಿಗೆ ಇಂದು 50ನೇ ವರ್ಷದ ಜನ್ಮದಿನದ ಸಂಭ್ರಮ. ಅವರ ಬರ್ತ್ ಡೇ ಪ್ರಯುಕ್ತ ಈಗಾಗಲೇ ಭೀಮಾ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದ್ದು ಅಭಿಮಾನಿಗಳಿಂದ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ.
ಕಳೆದ ವರ್ಷದಂತೆ ಈ ವರ್ಷವೂ ಕೂಡ ವಿಜಯ್ ಅವರು ಆನೇಕಲ್ನಲ್ಲಿರುವ ಬಳಿಯ ಕುಂಬಾರನಹಳ್ಳಿಯಲ್ಲಿನ ತಮ್ಮ ಜಮೀನಿನಲ್ಲಿ ಅಪ್ಪ-ಅಮ್ಮನ ಸಮಾಧಿ ಮುಂದೆ ಬರ್ತ್ಡೇಯನ್ನು ಅಭಿಮಾನಿಗಳೊಟ್ಟಿಗೆ ಸೆಲೆಬ್ರೆಷನ್ ಮಾಡಿಕೊಂಡಿದ್ದಾರೆ.
ತಂದೆ-ತಾಯಿ ಸಮಾಧಿಯನ್ನ ದೇವಸ್ಥಾನದ ರೀತಿ ಕಟ್ಟಿಸಿ ವಿಶೇಷವಾಗಿ ಅಲಂಕಾರ ಮಾಡಿದ್ದರು. ಬಳಿಕ ಪೂಜೆ ಮಾಡಿ, ಬರೋ ಅಭಿಮಾನಿಗಳನ್ನು ಭೇಟಿ ಮಾಡಿ ಅವರೊಟ್ಟಿಗೆ ದಿನ ಪೂರ್ತಿ ಕಳೆಯಲಿದ್ದಾರೆ.
ರಾತ್ರಿಯಿಂದಲೇ ಬರ್ತ್ಡೇಗೆ ಎಲ್ಲ ಸಿದ್ಧತೆಗಳನ್ನು ಮಾಡಲಾಗಿತ್ತು. ಅಲ್ಲದೇ ಸಾಕಷ್ಟು ಅಭಿಮಾನಿಗಳು ರಾತ್ರಿಯೇ ಆಗಮಿಸಿ ವಿಶ್ ಮಾಡಿದ್ದರು. ಒಟ್ಟು 5 ಸಾವಿರ ಅಭಿಮಾನಿಗಳಿಗೆ ಊಟ, ತಿಂಡಿಯ ವ್ಯವಸ್ಥೆ ಮಾಡಲಾಗಿದೆ.