ಗಾಂಧಿನಗರ

ಬೆಳ್ತಂಗಡಿ: ಮಾ.17 ರಂದು ತೆರೆ ಕಾಣಲಿದೆ ಮಗಳು ಚಲನಚಿತ್ರ

ಬೆಳ್ತಂಗಡಿ: ‘ಗ್ರಾಮೀಣ ಭಾಗದ ಯುವ ಪ್ರತಿಭೆಗಳನ್ನೇ ಇಟ್ಟುಕೊಂಡು ರಚಿಸಲಾದ ಮಗಳು ಎಂಬ ಕನ್ನಡ ಚಲನಚಿತ್ರ ಮಾ.17 ರಂದು ರಾಜ್ಯಾದ್ಯಂತ ತೆರೆ ಕಾಣಲಿದ್ದು ಚಿತ್ರಮಂಡಳಿಯಿಂದ ಅತ್ಯುತ್ತಮ ಚಲನಚಿತ್ರವೆಂದು ಯು ಸರ್ಟಿಫಿಕೆಟ್ ಲಭಿಸಿದೆ’ ಎಂದು ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ತೋಮಸ್ ಎಂ.ಎಂ. ಹೇಳಿದರು.

ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜ. 10.ರಂದು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಚಿತ್ರದ ಧ್ವನಿಸುರುಳಿ ಬಿಡುಗಡೆಗೊಳಿಸಿದ್ದಾರೆ. ಇವತ್ತಿನ ಕಾಲಘಟ್ಟದಲ್ಲಿ ಮದ್ಯಪಾನ ಜೀವನದ ಅಂಗವಾಗಿ ಬಿಟ್ಟಿದೆ. ಮದ್ಯಪಾನ ಎಂಬ ಒಂದು ಕೆಟ್ಟ ಚಟದಿಂದ ಒಂದು ಕುಟುಂಬ ಹೇಗೆ ಬೀದಿಗೆ ಬೀಳುತ್ತದೆ. ಓರ್ವ ಕುಡುಕ ತಂದೆಯ ಜೀವನವನ್ನು ಮಗಳು ಯಾವ ರೀತಿ ಪರಿವರ್ತಿಸುತ್ತಾಳೆ, ಕುಡುಕನ ಕತ್ತಲ ಜೀವನಕ್ಕೆ ಮಗಳು ಯಾವ ರೀತಿ ಬೆಳಕು ಆಗುತ್ತಾಳೆ ಅನ್ನುವುದೇ ಕಥೆಯ ಆಸಕ್ತಿದಾಯಕ ವಿಷಯವಾಗಿದೆ ಎಂದರು.

ಗಾಡ್ ಗಿಫ್ಟ್ ಫ್ಯಾಮಿಲಿ ಫಿಲಂ ಬ್ಯಾನರ್‌ನಡಿ ನಿರ್ಮಾಣ ಆಗಿರುವ ಇದು ಸಮಾಜಕ್ಕೆ ಒಂದು ಭಾಂದವ್ಯದ ಸಂದೇಶ ಸಾರಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಪೋಣಿಸಲಾದ ಚಿತ್ರವಾಗಿದ್ದು, ಕುಟುಂಬ ಸಮೇತ ನೋಡಬಹುದಾದ ಚಲನಚಿತ್ರ ಇದಾಗಿದೆ.

ಚಿತ್ರದ ಮುಖ್ಯ ಭೂಮಿಕೆಯಲ್ಲಿ ಪ್ರಖ್ಯಾತ ತುಳು ಚಲನಚಿತ್ರ ನಟ ನವೀನ್ ಡಿ. ಪಡೀಲ್, ರಾಮು ಪಾತ್ರದಲ್ಲಿ ನಿರ್ದೇಶಕ ತೋಮಸ್‌ ಎಂ.ಎಂ. ಮಗಳ ಪಾತ್ರದಲ್ಲಿ ಭಾರ್ಗವಿ ಆರ್. ಶೇಟ್, ತಾಯಿ ಪಾತ್ರದಲ್ಲಿ ಸವಿತಾ ಪ್ಲಾವ್ಯಾ ನಟಿಸಿ ಚಿತ್ರಕ್ಕೆ ಜೀವ ತುಂಬಿದ್ದಾರೆ. ವಿವೇಕ್ ವಿನ್ಸೆಂಟ್ ಪಾಯಸ್, ಸುಂದರ ಹೆಗ್ಡೆ ಬಿ.ಇ., ಪಿ. ಧರಣೇಂದ್ರ ಕುಮಾರ್, ಶ್ರವಣ ಕುಮಾರಿ, ಅರ್ಪಿತಾ ಕೋಟ್ಯಾನ್ , ಶ್ರೀಮಾ ಉಜಿರೆ, ಶರಣ್ ಶೆಟ್ಟಿ ವೇಣೂರು, ಆನಂದ ಗಾಂಧಿನಗರ, ಬಿಜಿಲ್ ಮ್ಯಾಥ್ಯೂ, ತನಿಷಾ ಕಾರ್ಕಳ ಮುಂತಾದವರು ನಟಿಸಿದ್ದಾರೆ ಎಂದರು.

ಚಿತ್ರದ ಸಹ ನಿರ್ಮಾಪಕರಾಗಿ ಬಿಜಿಲ್‌ ಮ್ಯಾಥ್ಯೂ, ಲತಾ ಮಂಗಳೂರು ಹಾಗೂ ಅರುಣ್ ಬೆಳ್ತಂಗಡಿ ಸಹಕರಿಸಿದ್ದಾರೆ. ಸಹ ನಿರ್ದೇಶಕರಾಗಿ ಮಹಾಲಕ್ಷ್ಮೀ ಪೆರಾಡಿ ಮತ್ತು ಸಂದೇಶ ಬಡಕೋಡಿ ಕೆಲಸ ಮಾಡಿದ್ದಾರೆ. ಛಾಯಾಗ್ರಹಣ ಶಶಿಧರ ದೇವಾಡಿಗ ಉಡುಪಿ, ಸಂಗೀತಾ ಗುರುರಾಜ್ ಎಂ.ಬಿ., ನೃತ್ಯ ಸಂಯೋಜನೆ ಶ್ರವಣ ಕುಮಾರಿ ಮಾಡಿದ್ದಾರೆ. ಸಂಕಲನ ಹರೀಶ್ ಕೊಡ್ಪಾಡಿ ಮತ್ತು ಸುಶಾಂತ್ ಪೂಜಾರಿ ನಿರ್ವಹಿಸಿದ್ದಾರೆ.

ಚಿತ್ರದಲ್ಲಿ ಮನಸೆಳೆಯುವ ಮೂರು ಹಾಡುಗಳಿದ್ದು, ತೋಮಸ್ ಎಂ.ಎಂ. ಮತ್ತು ಸೀತಾ ಆರ್. ಶೇಟ್ ರಚಿಸಿದ್ದಾರೆ. ಸಂಗೀತಾ ಬಾಲಚಂದ್ರ ಮತ್ತು ಗುರುರಾಜ್ ಎಂ.ಬಿ. ಧ್ವನ್ವಿ ನೀಡಿದ್ದಾರೆ. ಪೋಸ್ಟಲ್ ಡಿಸೈನ್‌ ದಿನೇಶ್ ಗ್ಲೋಸಿಂಗ್ ಡಿಜಿಟಲ್ ಮೂಡಬಿದಿರೆ ನಿರ್ವಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಮಾರ್ಗದರ್ಶಕ ವಿವೇಕ್ ವಿನ್ಸೆಂಟ್ ಪಾಯಸ್, ಸಹ ನಿರ್ದೇಶಕ ಸಂದೇಶ ಬಡಕೋಡಿ, ಬಾಲ ನಟಿ ಶ್ರೀಮಾ ಉಜಿರೆ, ಚಂದ್ರ ಕೋಟ್ಯಾನ್, ರಾಘವೇಂದ್ರ ಅರ್ ಶೇಟ್ ಇದ್ದರು.

ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ತೋಮಸ್‌ ಎಂ.ಎಂ.ಮೂಲತಃ ಕೇರಳದ ಕಣ್ಣೂರಿನವರು. ಕಳೆದ 15 ವರ್ಷಗಳಿಂದ ವೇಣೂರಿನಲ್ಲಿ ಕುಟುಂಬ ಸಮೇತರಾಗಿ ನೆಲೆಸಿದ್ದಾರೆ. ಚಿತ್ರಕಲಾ ಶಿಕ್ಷಕರಾಗಿ ಮಕ್ಕಳ ಭಾವನೆಗಳನ್ನು, ಪೋಷಕರ ಸಮಸ್ಯೆಗಳನ್ನು ಬಹಳಷ್ಟು ಹತ್ತಿರದಿಂದ ಅರ್ಥೈಸಿಕೊಂಡವರು. ಮೂಲ ಕೇರಳವಾದರೂ ಕನ್ನಡ ಭಾಷೆಯ ಬಗ್ಗೆ ಅಪಾರ ಪ್ರೀತಿ ಬೆಳೆಸಿಕೊಂಡವರು. ಹಾಗಾಗಿಯೇ ತನ್ನ ನಿರ್ದೇಶನದ ಚಲನಚಿತ್ರ ಕನ್ನಡ ಭಾಷೆಯಲ್ಲಿ ಹೊರತರುವ ಪ್ರಯತ್ನ ಮಾಡಿದ್ದಾರೆ.

Ashika S

Recent Posts

ಎವರೆಸ್ಟ್​, ಎಂಡಿಎಚ್​ ಮಸಾಲೆಗಳ ಮಾರಾಟ ನಿಷೇಧ !

ಭಾರತದ ಎಂಡಿಎಚ್​ ಹಾಗೂ ಎವರೆಸ್ಟ್​ ಮಸಾಲೆ ಉತ್ಪನ್ನಗಳಲ್ಲಿ ವಿಷಕಾರಿ ಅಂಶ ಇರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ನೇಪಾಳವು…

45 mins ago

ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಮಳೆಯ ಅಬ್ಬರ

ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ,…

1 hour ago

ಮನೆಗೆ ನುಗ್ಗಿ ಅಂಜಲಿ ಕೊಲೆ ಮಾಡಿದ್ದ ಆರೋಪಿ ಅರೆಸ್ಟ್

ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಅಂಜಲಿ ಅಂಬಿಗೇರ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವಿಶ್ವ ಅಲಿಯಾಸ್ ಗಿರೀಶ್​ನನ್ನು ಪೊಲೀಸರು ಬಂಧಿಸಿದ್ದಾರೆ.…

2 hours ago

ಚಿತ್ರದುರ್ಗ: ಮನೆಯೊಂದರಲ್ಲಿ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

ನಗರದ ಜೈಲು ರಸ್ತೆಯ ಮನೆಯೊಂದರಲ್ಲಿ ಪತ್ತೆಯಾಗಿದ್ದ ಐದು ಅಸ್ಥಿಪಂಜರಗಳಿಗೆ ಸಂಬಂಧಿಸಿದ ಎಫ್‌ಎಸ್‌ಎಲ್‌ ಅಂತಿಮ ವರದಿ ಪೊಲೀಸರ ಕೈ ಸೇರಿದ್ದು, ಸಾವಿಗೆ…

2 hours ago

ಬಿರುಗಾಳಿ ಸಹಿತ ಮಳೆಗೆ ಕುಸಿದ ಮಹಾದ್ವಾರ

ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದ ಬಸವ ಮಹಾದ್ವಾರ ಗುರುವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ…

2 hours ago

ಮತ್ತೆ ಭರ್ಜರಿ ಏರಿಕೆ ಕಂಡ ‌ಚಿನ್ನದ ಬೆಲೆ !

ಜಾಗತಿಕವಾಗಿ ಚಿನ್ನಕ್ಕೆ ಈಗ ಸಖತ್ ಬೇಡಿಕೆ ಸೃಷ್ಟಿಯಾಗಿರುವುದು ಈ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ಒಂದು ತಿಂಗಳಿನಿಂದ ಚಿನ್ನದ ಬೆಲೆ…

2 hours ago