ರಕ್ಷಿತ್ ಶೆಟ್ಟಿ ನಟನೆಯ ‘ಚಾರ್ಲಿ 777’ ಟಾರ್ಚರ್ ಸಾಂಗ್ ಬಿಡುಗಡೆ

ಸ್ಯಾಂಡಲ್ ವುಡ್ : ತಮ್ಮ ಸಿಂಪಲ್ ಆಕ್ಟಿಂಟ್ ಮತ್ತೆ ಗುಣದಿಂದ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ನಟ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ನೊಬಿನ್‌ ಪೌಲ್‌ ಸಂಗೀತ ನಿರ್ದೇಶನದ ವಿಜಯ ಪ್ರಕಾಶ್‌ ಹಾಡಿರುವ ಈ ಹಾಡು ಮುಗಿದ ಬಳಿಕವೂ ಮನಸ್ಸಲ್ಲಿ ಉಳಿಯೋದು ‘ರಾಪಾಪಾಪಾ ರಾಪಾಪಪಾಪಾ..’ ಅನ್ನೋ ಮಕ್ಕಳ ಜೋಶ್‌ನ ದನಿ.

ಈ ಹಾಡಿಗೆ ಧ್ವನಿಯಾದ ಮಕ್ಕಳು ಆರ್ಣವ, ಅಜಿಂಕ್ಯ. ಮಕ್ಕಳ ಹಾಡಿನ ವೀಡಿಯೋವನ್ನು ನೋಡಿದ ಚಿತ್ರತಂಡ ಈ ಅವಕಾಶ ನೀಡಿತ್ತು. ಐದೂ ಭಾಷೆಯಲ್ಲೂ ಈ ಮಕ್ಕಳ ಧ್ವನಿ ಇರೋದು ವಿಶೇಷ. ಮೂರನೇ ಕ್ಲಾಸ್‌ ಓದುತ್ತಿರುವ ಅಜಿಂಕ್ಯ ಈ ಹಿಂದೆ ಕಾರ್ಟೂನ್‌ ಸಿನಿಮಾದ ಹೀರೋ ಪಾತ್ರಕ್ಕೆ ಡಬ್ಬಿಂಗ್‌ ಮಾಡಿದ ಪ್ರತಿಭೆ. ಇಬ್ಬರೂ ಸಹೋದರರಿಗೆ ತಾಯಿ, ಹಿರಿಯ ಗಾಯಕಿ ನಾಗಚಂದ್ರಿಕಾ ಭಟ್‌ ಸಂಗೀತ ಕಲಿಸುತ್ತಿದ್ದಾರೆ. ಇವರು ಕನ್ನಡಪ್ರಭ ಪತ್ರಿಕೆಯ ಅಸಿಸ್ಟೆಂಟ್‌ ಎಡಿಟರ್‌ ರವಿಶಂಕರ ಭಟ್‌ ಅವರ ಮಕ್ಕಳು.

ಚಾರ್ಲಿ ಚಿತ್ರದಲ್ಲಿ ಬಳಸಿರುವ ನಾಯಿ ಹಿಂದೆಯೂ ಒಂದು ಕಥೆ ಇದೆ. ಟೀಸರ್ ನೋಡಿದವರೆಲ್ಲ ಚಾರ್ಲಿ ನಾಯಿಯ ಫ್ಯಾನ್‌ಗಳಾಗಿದ್ದಾರೆ. ಈಗಾಗಲೇ ಈ‌ ನಾಯಿಯು ಕರ್ನಾಟಕ ಗಡಿ ದಾಟಿ ಎಲ್ಲೆಡೆ ಸಕತ್ ಫೇಮಸ್ ಆಗಿದೆ. ಕವಲು ದಾರಿ ಸಿನಿಮಾದಲ್ಲಿ ಅನಂತ್‌ನಾಗ್ ಅವರಿಗೂ ಒಂದು ನಾಯಿಯನ್ನು ಟ್ರೈನ್‌ ಮಾಡಿ ಕೊಟ್ಟಿರುತ್ತಾರೆ ಅದೇ ನಾಯಿ ಈ ಚಿತ್ರದಲ್ಲಿ ಬಳಸಲಾಗಿದೆ.

Swathi MG

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

33 mins ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

50 mins ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

1 hour ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

1 hour ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

3 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

3 hours ago