ಚೆನ್ನೈ: ತಮಿಳು ಸೂಪರ್ ಸ್ಟಾರ್ ನಟ ರಜನಿಕಾಂತ್ ಅಳಿಯ ನಟ ಧನುಷ್ಗೆ 48 ಗಂಟೆಗಳ ಒಳಗೆ ವಿದೇಶಿ ಕಾರಿನ ತೆರಿಗೆ ಪಾವತಿಸುವಂತೆ ಮದ್ರಾಸ್ ಹೈ ಕೋರ್ಟ್ ಆದೇಶಿಸಿದೆ.
ನಟ ದಳಪತಿ ವಿಜಯ್ ನಂತರ ಇದೀಗ ಧನುಷ್ಗೆ ಐಷಾರಾಮಿ ಕಾರುಗಳ ತೆರಿಗೆ ಪಾವತಿಸುವಂತೆ ಕೋರ್ಟ್ ಸೂಚಿಸಿದೆ. ಧನುಷ್ರವರು ಇಂಗ್ಲೆಂಡಿನಿಂದ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಆಮದು ಮಾಡಿಕೊಂಡಿದ್ದರು.
ಇದೀಗ ಈ ಕಾರಿಗೆ ಸಂಬಂಧಿಸಿದಂತೆ ಬಾಕಿ ಇರುವ 30,30,757(30.3 ಲಕ್ಷ) ರೂ. ತೆರಿಗೆ ಪಾವತಿಸುವಂತೆ ಮದ್ರಾಸ್ ಹೈಕೋರ್ಟ್ ತಿಳಿಸಿದೆ. ಈ ಮುನ್ನ 2018ರಲ್ಲಿ ಧನುಷ್ ರಿಟ್ ಅರ್ಜಿ ಸಲ್ಲಿಸಿ ತೆರಿಗೆ ವಿನಾಯ್ತಿ ಕೋರಿದ್ದರು.