ನಿಸರ್ಗದ ಮಡಿಲಲ್ಲಿ ಕುಣಿದು ಕುಪ್ಪಳಿಸಿದ ಯನಗುಂದಾದ ವಿದ್ಯಾರ್ಥಿಗಳು

ಔರಾದ : ನಿಸರ್ಗ ಮಡಿಲಲ್ಲಿ ಬೆರೆತಾಗ ಜೀವನಕ್ಕೆ ಹೊಸ ಚೈತನ್ಯ ದೊರೆಯುತ್ತದೆ, ನಿಸರ್ಗದಲ್ಲಿ ಹಸಿರು ಜೀವ ಸಂಕುಲದ ಉಸಿರಾಗಿದೆ. ನಿಸರ್ಗದ ಮಡಿಲಲ್ಲಿ ಇರುವ ಗಿಡ ಮರ ಹೂ ಬಳ್ಳಿ ಪ್ರಾಣಿ ಪಕ್ಷಿಗಳನ್ನು ಸೊಬಗು ನೋಡುವುದು ಕಣ್ಣಿಗೆ ಆನಂದ ಮನಸ್ಸಿಗೆ ಮುದ ನೀಡುತ್ತದೆಂದು ನಾಗಮಾರಪಳ್ಳಿ ಪ್ರೌಢ ಶಾಲೆಯ ಮುಖ್ಯಗುರು ತುಳಸಿರಾಮ ಬೇಂದ್ರೆ ಅವರು ನುಡಿದರು.
ಸರಕಾರಿ ಪ್ರೌಢ ಶಾಲೆ ಯನಗುಂದಾದಲ್ಲಿ ಸಂಭ್ರಮದ ಅಂಗವಾಗಿ ಹಮ್ಮಿಕೊಂಡಿರುವ “ನಮ್ಮ ನಡಿಗೆ ನಿಸರ್ಗದ ಕಡೆಗೆ” ಎನ್ನುವ ವಿನೂತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಿಸರ್ಗವೇ ನಮ್ಮೇಲ್ಲರ ಬದುಕು, ಅದರ ರಕ್ಷಣೆ ನಮ್ಮೇಲ್ಲರ ಹೊಣೆಯಾಗಿದೆ ಎಂದು ತಿಳಿಸಿದರು.

ಸುಂಧಾಳ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಪ್ರೀಯಂಕಾ ರಾವುಸಾಹೇಬ್ ಪಾಟೀಲ್ ಅವರು ಮಕ್ಕಳು ಅಂಕಗಳಿಸುವ ಯಂತ್ರಗಳಾಬಾರದು, ಅಂಕಗಳ ಬೆನ್ನು ಬಿದ್ದ ಪಾಲಕರು ಮಕ್ಕಳ ಬಾಲ್ಯವನ್ನೇ ಕಸಿದುಕೊಳ್ಳುತ್ತಿದ್ದಾರೆ. ಮಕ್ಕಳು ಮಾನಸಿಕ ಒತ್ತಡದಲ್ಲಿ ಬದುಕುತ್ತಿರುವುದು ನೋವಿನ ಸಂಗತಿ. ಕಲಿಕೆ ಸಂತಸವುಂಟು ಮಾಡಬೇಕು, ಮಕ್ಕಳಲ್ಲಿ ಸೃಜನಶೀಲತೆ, ಕ್ರೀಯಾಶಿಲತೆ ಬೆಳೆಸಲು ಪೂರಕವಾಗಬೇಕು. ಶಿಕ್ಷಣ ಬರಿ ಅಂಕಕ್ಕೆ ಸೀಮಿತವಾಗದೇ ಮಕ್ಕಳ ಸರ್ವಾಂಗೀನ ವಿಕಾಸಕ್ಕೆ ಪೂಕವಾಗಿರಬೇಕೆಂದು ತಿಳಿಸಿದರು. ಈ ನಿಟ್ಟಿನಲ್ಲಿ ಯನಗುಂದಾ ಪ್ರೌಢ ಶಾಲೆ ಮಕ್ಕಳಿಗೆ ರಚನಾತ್ಮಕ ಚಟುವಟಿಕೆಗಳ ಮೂಲಕ ಗುಣಾತ್ಮಕ ಶಿಕ್ಷಣ ಒದಗಿಸುತ್ತಿರುವುದು ಪ್ರಸಂಶನೀಯವಾಗಿದೆ ಎಂದು ತಿಳಿಸಿದರು.

ನಿಸರ್ಗದ ನಡಿಗೆ : ಯನಗುಂದಾದ ವಿದ್ಯಾರ್ಥಿಗಳು ಬೆಳಗ್ಗೆ ಹತ್ತು ಗಂಟೆಗೆ ಶಾಲಾ ಅವರಣದಿಂದ ನಿಸರ್ಗದ ಕಡೆಗೆ ತಮ್ಮ ನಡಿಗೆ ಪ್ರಾರಂಭಿಸಿದರು. ನಡೆಯಬೇಕಾದ ದಾರಿಯನ್ನು ಮೊದಲೇ ವನವಿದ್ಯಾ ಸಂಕೇತದ ಮೂಲಕ ಗುರುತಿಸಲಾಗಿತ್ತು. ವನವಿದ್ಯಾ ಸಂಕೇತಗಳನ್ನು ಹಿಂಬಾಲಿಸಿಕೊಂಡು ಮುನ್ನಡೆದ ಮಕ್ಕಳು ದಾರಿ ಮಧ್ಯದಲ್ಲಿ ಚಿಟಿಗಳನ್ನು ಹುಡುಕಾಡಿ ಚಿಟಿಯಲ್ಲಿ ಬರೆದಿರುವಂತೆ ಪ್ರಾರ್ಥನೆ, ವಚನ ಗಾಯನ, ಅಭಿನಯ ಗೀತೆ, ನಟನೆ, ನೃತ್ಯ, ಧ್ಯಾನ ಹೀಗೆ ವಿಧ ವಿಧದ ಚಟುವಟಿಕೆಗಳು ಮಾಡುತ್ತಾ ದಾರಿ ಉದ್ದಕ್ಕೂ ಮಹಾನ ವ್ಯಕ್ತಿಗಳಿಗೆ ಜೈಘೋಷ ಹಾಕುತ್ತಾ ಮಕ್ಕಳು ಗಿಡ ಗಂಟೆಗಳ ಮಧ್ಯ, ಕೀರಿದಾದ ದಾರಿ, ಹರಿಯುವ ನೀರು , ಹೊಲಗದ್ದೆಗಳು ದಾಟಿಕೊಂಡು 4 ಕಿ.ಮೀ ನಷ್ಟು ನಡೆದು ತೇಂಗಪೂರ ಕೆರೆಗೆ ಬಂದು ತಲುಪಿದರು.

ಗಿಡಮೂಲಿಕೆಗಳ ಪರಿಚಯ : ದಾರಿಯ ಮಧ್ಯದಲ್ಲಿ ನಾಟಿ ವೈದ್ಯ ಬಸವರಾಜ ಘೂಳೆ ಮಕ್ಕಳಿಗೆ ನಿಸರ್ಗದಲ್ಲಿ ದೊರೆಯಬಹುದಾದ ಗಿಡ-ಮರ, ಬಳ್ಳಿ, ಎಲೆ, ಹೂವು ಹಣ್ಣು ಗೆಡ್ಡೆ ಗೆಣಸುಗಳ ಪರಿಚಯ ಮಾಡುತ್ತಾ ಅವುಗಳ ಉಪಯುಕ್ತತೆಯ ಬಗ್ಗೆ ಮಾಹಿತಿ ಒದಗಿಸಿದರು. ಸುತ್ತಮುತ್ತಲು ನಡೆಯುವ ಕೃಷಿ ಚಟುವಟಿಕೆಗಳ ಬಗ್ಗೆ ಹಾಗೇ ಮೀನುಗಾರಿಕೆ ಬಗ್ಗೆಯು ವಿಶೇಷ ಅನುಭವ ಪಡೆದುಕೊಂಡರು.

ಗ್ರಾಮದ ಪ್ರಗತಿಪರ ರೈತರಾಗಿರುವ ಚನ್ನಪ್ಪಾ ಕೋರೆ ಅವರ ಹೊಲದಲ್ಲಿ ಮಕ್ಕಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು, ಊಟದ ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತೀಕ ಚಟುವಟಿಕೆಗಳು ಮೂಲಕ ಕುಣಿದು ಕುಪ್ಪಳಿಸಿ ಮನೋರಂಜನೆ ಮಾಡಿದರು.

ಕಾರ್ಯಕ್ರಮದಲ್ಲಿ ಸುಂಧಾಳ ಗ್ರಾಮ ಪಂಚಾಯತಿಯ ಅಭಿವೃದ್ದಿ ಅಧಿಕಾರಿ ಶರಣಪ್ಪಾ ಗಾದಗೆ, ವರದಿಗಾರ ಶರಣಪ್ಪಾ ಚೆಟಮೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಜಾನನ್ ಮಳ್ಳಾ, ಯುವ ಸಾಹಿತಿ ಬಾಲಾಜಿ ಕುಂಬಾರ, ಬಿ.ಎಂ ಅಮರವಾಡಿ, ಮುಖಂಡರಾದ ರಾವುಸಾಹೇಬ್ ಪಾಟೀಲ್, ಜಗದೀಶ ಪಾಟೀಲ್, ನಾಗಶೇನ ತಾರೆ, ರವಿ ಡೋಳೆ, ಎಸ್.ಡಿ.ಎಂ..ಸಿ ಅಧ್ಯಕ್ಷ ಶಿವರಾಜ ಶೆಟಕಾರ ಮುಂತಾದವರು ಭಾಗವಹಿಸಿದರು.

Sneha Gowda

Recent Posts

ನರೇಂದ್ರ ದಾಭೋಲ್ಕರ್​ ಹತ್ಯೆ ಕೇಸ್: ಇಬ್ಬರಿಗೆ ಜೀವಾವಧಿ ಶಿಕ್ಷೆ, ಮೂವರು ಖುಲಾಸೆ

ಸುಮಾರು 11 ವರ್ಷಗಳ ನಂತರ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪು ನೀಡಿದೆ. ನ್ಯಾಯಾಲಯ ಇಬ್ಬರು ಆರೋಪಿಗಳನ್ನು…

18 mins ago

ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕಾಗಿ ವ್ಯಕ್ತಿಯ ಹತ್ಯೆ

ನಗರದಲ್ಲಿ ರಾಜಕೀಯ ವೈಷಮ್ಯದ ಹಲ್ಲೆ ಹಾಗೂ ಹತ್ಯೆ ಪ್ರಕರಣಗಳು ಮುಂದುವರಿದಿವೆ. ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡಿದ್ದಕ್ಕಾಗಿ ಅಫಜಲಪುರ ತಾಲೂಕಿನ…

28 mins ago

ಬೀದರ್: ಸಂಭ್ರಮದಿಂದ ವಿಶ್ವಗುರು ಬಸವಣ್ಣನವರ ಜಯಂತಿ‌ ಆಚರಣೆ

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ‌ ನಗರದಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

60 mins ago

ಡಿ ಬಾಸ್ ದರ್ಶನ್ ಬಹು ನಿರೀಕ್ಷಿತ ಡೆವಿಲ್ ಚಿತ್ರದ ಮೇಕಿಂಗ್ ಔಟ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹು ನಿರೀಕ್ಷಿತ ಡೆವಿಲ್ ಚಿತ್ರದ ಮೇಕಿಂಗ್‌ ರಿಲೀಸ್ ಆಗಿದೆ. ಸಿನಿಮಾದ ತೆರೆ ಹಿಂದಿನ ಗ್ಲಿಂಪ್ಸ್ ಇದಾಗಿದೆ.…

1 hour ago

ಧಾರವಾಡದ ಪೇಡಾ ಈ ಬಾರಿ ಯಾರ ಬಾಯಿಗೆ ಬೀಳಲಿದೆ?; ಜೋಶಿ ವಿರುದ್ಧ ವಿನ್ ಆಗ್ತಾರಾ ವಿನೋದ್

ಕರ್ನಾಟಕದ ವಾಣಿಜ್ಯ ನಗರಿ ಎಂದೇ ಪ್ರಸಿದ್ಧಿ ಪಡೆದ ಜಿಲ್ಲೆ ಧಾರವಾಡ. ಬಾಯಿ ನೀರೂರಿಸುವ ಧಾರವಾಡ ಪೇಡಾಕ್ಕೆ ಧಾರವಾಡವಲ್ಲದೆ ಬೇರೆ ಸಾಟಿಯಿಲ್ಲ,…

1 hour ago

ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ 3 ವಾರಸುದಾರರಿಲ್ಲದ ಶವಗಳ ಅಂತ್ಯಸಂಸ್ಕಾರ

ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ ಮೂರು ಅಪರಿಚಿತ ವ್ಯಕ್ತಿಗಳ ಶವದ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆಯ ಹಿಂದು ರುದ್ರಭೂಮಿಯಲ್ಲಿ ಗೌರಯುತವಾಗಿ ನಡೆಸಲಾಯಿತು.

2 hours ago