Categories: ಪರಿಸರ

ಏಲಕ್ಕಿ ಬೆಳೆಯ ಕುರಿತು ಇಲ್ಲಿದೆ ಕೆಲವು ಮಾಹಿತಿ

“ಇಲೈಚಿ” ಎಂದು ಜನಪ್ರಿಯವಾಗಿ ಕರೆಯಲ್ಪಡುವ ಏಲಕ್ಕಿ ಶುಂಠಿಯ ರೀತಿಯೇ “ಜಿಂಗಿಬೆರೇಸಿ” ಕುಟುಂಬದ ಭಾಗವಾಗಿದೆ. ಭಾರತದಲ್ಲಿ ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಇದನ್ನು ಬೆಳೆಯಲಾಗುತ್ತದೆ. ಏಲಕ್ಕಿಯನ್ನು ಅತ್ಯಂತ ದುಬಾರಿ ಮಸಾಲೆಗಳಲ್ಲಿ ಒಂದಾಗಿದೆ.

ಹವಾಮಾನ: ಏಲಕ್ಕಿ ನೈಸರ್ಗಿಕವಾಗಿ ಪಶ್ಚಿಮ ಘಟ್ಟ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಕಂಡುಬರುತ್ತದೆ. ಈ ಬೆಳೆಗೆ ೧೦ ಡಿಗ್ರಿ ಯಿಂದ ೩೫ ಡಿಗ್ರಿ ಬೇಕಾಗುತ್ತದೆ. ವಾರ್ಷಿಕವಾಗಿ ೧,೫೦೦ ರಿಂದ ೪,೦೦೦ ಮಿ.ಮಿ ಮಳೆ ಬೀಳುವ ಮಳೆ ಪ್ರದೇಶಗಳು ಇವುಗಳ ಬೆಳೆಗೆ ಸೂಕ್ತವಾಗಿರುತ್ತದೆ.

ಮಣ್ಣಿನ ಅವಶ್ಯಕತೆ: ಏಲಕ್ಕಿ ಸಾಮಾನ್ಯವಾಗಿ ಸಾವಯವ ಮಣ್ಣಿನಲ್ಲಿ ಸಮೃದ್ದವಾಗಿ ಬೆಳೆಯುತ್ತದೆ. ಲೋಮಿ ಮಣ್ಣು ಏಲಕ್ಕಿ ಸಸ್ಯದ ಬೆಳವಣಿಗೆಗೆ ಉತ್ತಮವಾಗಿರುತ್ತದೆ.

ಏಪ್ರಿಲ್ ನಿಂದ ಮೇ ತಿಂಗಳಲ್ಲಿ 45: 45 ಸೆ. ಗಾತ್ರದ ಹೊಂಡಗಳನ್ನು ತೆಗೆದು ಕಾಂಪೋಸ್ಟ್ ಗೊಬ್ಬರವನ್ನು ತುಂಬಿಸಬೇಕು ಹಾಗು ಗೊಬ್ಬರ ಕೊಳೆಯಲು ಬಿಡಬೇಕು. ಜೂನ್ ನಿಂದ ಜುಲೈ ವರೆಗೆ ಏಲಕ್ಕಿಯನ್ನು ನಾಟಿ ಮಾಡಬಹುದಾಗಿದೆ.

ಬೇಸಿಗೆ ತಿಂಗಳಲ್ಲಿ ಏಲಕ್ಕಿ ಗಿಡಗಳಿಗೆ ಆಗ್ಗಾಗೆ ನೀರು ಹಾಕುತ್ತಿರಬೇಕು. ನಿಯಮಿತವಾಗಿ ನೀರು ಹಾಕುವುದು ಪ್ರಾರಂಭದಲ್ಲಿ ಸಸ್ಯಗಳಿಗೆ ಕಾಯಿ ಮತ್ತು ಹೂ ಬಿಡುವಿಕೆಗೆ ಸಹಾಯ ಮಾಡುತ್ತದೆ. ಏಲಕ್ಕಿ ಗಿಡಗಳನ್ನು ನೆಟ್ಟ ೨ ಅಥವಾ ೩ನೇ ವರ್ಷಕ್ಕೆ ಫಸಲು ನೀಡಲು ಪ್ರಾರಂಭಿಸುತ್ತದೆ.
ಕೊಯ್ಲಿನ ನಂತರ ಸೂರ್ಯನ ಬಿಸಿಲಿಗೆ ಒಣಗಿಸಲಾಗುತ್ತದೆ.

ಆರೋಗ್ಯ ಪ್ರಯೋಜನಗಳು:
• ಏಲಕ್ಕಿ ಆಮ್ಲಿಯತೆಯನ್ನು ನಿವಾರಿಸುತ್ತದೆ
• ಬಾಯಿಯ ದುರ್ವಾಸನೆಯನ್ನು ನಿವಾರಿಸುತ್ತದೆ
• ರಕ್ತಹೀನತೆಯ ವಿರುದ್ಧ ಹೋರಾಡುತ್ತದೆ.
• ಏಲಕ್ಕಿ ರಕ್ತ ಹೆಪ್ಪುಗಟ್ಟಿಸಲು ಸಾಹಾಯಮಾಡುತ್ತದೆ.

Ashika S

Recent Posts

ಚುನಾವಣಾ ಕರ್ತವ್ಯದಲ್ಲಿದ್ದ ಬಿಎಸ್‌ಎಫ್ ಯೋಧನಿಂದ ಲೈಂಗಿಕ ಕಿರುಕುಳ

ಪಶ್ಚಿಮ ಬಂಗಾಳದ ಉಲುಬೇರಿಯಾ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಬಿಎಸ್‌ಎಫ್ ಯೋಧನನ್ನು ಲೈಂಗಿಕ ಕಿರುಕುಳ ಆರೋಪ ಬಂದ ಹಿನ್ನೆಲೆಯಲ್ಲಿ…

3 mins ago

ಮೇಯುತ್ತಿದ್ದ ಕುರಿಗಳ ಮೇಲೆ ನಾಯಿಗಳ ದಾಳಿ : ಹತ್ತು ಕುರಿಗಳು ಬಲಿ

ಜಮೀನಿನಲ್ಲಿ ಮೇಯುತ್ತಿದ್ದ ಕುರಿಗಳ ಮೇಲೆ ಏಕಾಏಕಿ ದಾಳಿ ನಡೆಸಿದ ನಾಯಿಗಳ ಹಿಂಡು ಹತ್ತು ಕುರಿಗಳನ್ನ ಕೊಂದುಹಾಕಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ…

4 mins ago

ಹೆಲಿಕಾಪ್ಟರ್ ದುರಂತ : ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು

 ಇರಾನ್ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಭಾನುವಾರ ಪತನಗೊಂಡಿದ್ದು, ಇಬ್ರಾಹಿಂ ರೈಸಿ ಸಜೀವದಹನವಾಗಿರುವ ಮಾಹಿತಿ ಲಭ್ಯವಾಗಿದೆ. ಭಾನುವಾರದಿಂದ ನಡೆಯುತ್ತಿದ್ದ ಗಂಟೆಗಳ ಕಾರ್ಯಾಚರಣೆ…

29 mins ago

ಭಾರತದಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ ಅಕ್ಷಯ್‌ ಕುಮಾರ್‌

ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 49…

46 mins ago

ಕಾಶ್ಮೀರ ವಾಪಸ್ ಪಡೆದೇ ಪಡೆಯುತ್ತೇವೆ: ಗೃಹ ಸಚಿವ ಅಮಿತ್ ಶಾ

ಪಾಕಿಸ್ತಾನದ ಬಳಿ ಪರಮಾಣು ಬಾಂಬ್​ ಇದೆ ಹಾಗಾಗಿ ನಾವು ಅವರನ್ನು ಗೌರವಿಸಬೇಕಾಗುತ್ತದೆ ಎಂಬ ಕಾಂಗ್ರೆಸ್​ ನಾಯಕ ಮಣಿಶಂಕರ್​ ಐಯ್ಯರ್​ ಹೇಳಿಕೆಗೆ…

1 hour ago

ಖಾಸಗಿ ಶಾಲೆಗಳಲ್ಲಿ 30% ವರೆಗೆ ಶುಲ್ಕ ಏರಿಕೆ : ಕಂಗಾಲಾದ ಪೋಷಕರು

2024-25ನೇ ಸಾಲಿಗೆ ಶಾಲಾ ಪ್ರವೇಶ ಪ್ರಕ್ರಿಯೆ ನಡೆಸುತ್ತಿರುವ ಖಾಸಗಿ ಶಾಲೆಗಳು ಶೇ.20ರಿಂದ 30ರವರೆಗೆ ಶುಲ್ಕ ಹೆಚ್ಚಿಸುವ ಮೂಲಕ ಸುಲಿಗೆ ಪದ್ಧತಿ…

2 hours ago