News Karnataka Kannada
Tuesday, April 16 2024
Cricket
ನುಡಿಚಿತ್ರ

ಜುನಾಘಡದ ಮಹಬತ್‌ಗೆ ಭೇಟಿ ನೀಡಿದ ಅನುಭವ ವರ್ಣಿಸಲು ಅಸಾಧ್ಯ……

Photo Credit :

ಜುನಾಘಡದ ಮಹಬತ್‌ಗೆ ಭೇಟಿ ನೀಡಿದ ಅನುಭವ ವರ್ಣಿಸಲು ಅಸಾಧ್ಯ......

ಗುಜರಾತಿನ ರಾಜ್‍ಕೋಟ್‍ನಲ್ಲಿ ನಡೆದ ರಾಷ್ಟ್ರ ಕಥಾ ಶಿಬಿರದಲ್ಲಿ ಭಾಗವಹಿಸಲೆಂದು ನಮ್ಮ ಕಾಲೇಜಿನ ತಂಡದೊಂದಿಗೆ ಹೋದಾಗ ಜುನಾಘಡ್ ಎಂಬ ಪ್ರಸಿದ್ದ ಊರಿಗೆ ಬೇಟಿ ನೀಡುವ ಅವಕಾಶ ಸಿಕ್ಕಿತು.

ಜುನಾಘಡ್ ದೇಶದ ಪ್ರಾಚೀನ ನಗರಗಳಲ್ಲಿ ಒಂದಾಗಿದ್ದು, ಗುಜರಾತಿನ ಏಳನೇ ಅತಿ ದೊಡ್ಡ ಪಟ್ಟಣ ಇದಾಗಿದೆ. ಗುಜರಾತು ಹಿಂದು ಮುಸ್ಮಿಂ ರಾಜಮನೆತನಗಳ ಆಳ್ವಿಕೆಗೆ ಹೆಸರುವಾಸಿ. ಇತಿಹಾಸದ ಪ್ರಕಾರ ಮೌರ್ಯನ್ ರಾಜವಂಶದ ಪ್ರಮುಖ ದೊರೆ ಚಂದ್ರಗುಪ್ತ ಮೌರ್ಯ ಈ ನಗರವನ್ನ ಕ್ರಿಸ್ತ ಪೂರ್ವ 319ರಲ್ಲಿ ಸ್ಥಾಪಿಸಿದ್ದಾನೆ ಎಂದು ಹೇಳಲಾಗಿದೆ.

ನಂತರ ಈ ಪ್ರದೇಶ ಇಂಡೋ ಗ್ರೀಕ್ ಅಧೀನದಲ್ಲಿ ಇದ್ದ ಕಾರಣದಿಂದ ಯೋನಾಘಡ್ ಎಂಬುದಾಗಿ ಕರೆಯಲಾಗುತ್ತಿತ್ತು. ನಂತರದ ದಿನಗಳಲ್ಲಿ ಜುನಾಘಡ್ ಎಂದು ಕರೆಯಲಾಯಿತು ಎಂದು ಪ್ರತೀತಿ ಇದೆ.

ರಾಜಮನೆತನಗಳು ಆಳಿದ ಹಾಗೂ ಪುಸ್ತಕಗಳಲ್ಲಿ ಓದಿದ ಐತಿಹಾಸಿಕ ಸ್ಥಳಗಳಿಗೆ ಭೇಟಿನೀಡುವ ಸಂತಸ ಹೇಳಲಾಗದು. ಜುನಾಘಡ್ ಪ್ರದೇಶ ಹಳೇ ನಗರ ಎಂಬ ತನ್ನ ಗರಿಮೆಯನ್ನು ಇನ್ನೂ ಬಿಟ್ಟುಕೊಟ್ಟಿಲ್ಲ ಎಂದರೆ ತಪ್ಪಾಗಲಾರದು. ಹಳೆಯ ಕಟ್ಟಡಗಳು, ಸ್ಮಾರಕಗಳು, ಬೆಟ್ಟಗುಡ್ಡಗಳು ನಗರದ ಪ್ರಾಚೀನತೆಯನ್ನು ಎತ್ತಿಹಿಡಿಯುತ್ತದೆ.

ಜುನಾಘಡ್‍ನತ್ತ ನಮ್ಮ ಪಯಣ ಆರಂಭವಾದದ್ದು ಉಪ್ಲೇಟಾ ಎಂಬ ಸಣ್ಣ ನಗರದಿಂದ. ಇಲ್ಲಿಂದ ಸುಮಾರು ಎರಡು ತಾಸಿನ ಪ್ರಯಾಣ. ಜುನಾಘಡ್ ನಗರವು ಗಿರ್ನಾರ್ ಪರ್ವತದ ತಪ್ಪಲಿನಲ್ಲಿದ್ದು, ಇದನ್ನು ರೆವತಕ್ ಪರ್ವತ ಎಂದೂ ಕಲೆಯಲಾಗುತ್ತದೆ. ಈ ಪರ್ವತವು ಹಿಂದು ಮತ್ತು ಜೈನರಿಗೆ ಪಾವಿತ್ರವಾದ ಯಾತ್ರ ಸ್ಥಳವಾಗಿದೆ. ನಗರವನ್ನು ತಲುಪಲು ಈ ಪರ್ವತವನ್ನು ಸುತ್ತುವರಿದು ಸಾಗಬೇಕು. ಮೊದಲು ನಮ್ಮ ಬಲಬದಿಯಲ್ಲಿ ಕಾಣುವ ಬೆಟ್ಟ ಸಾಗುತ್ತಾ ಸಾಗುತ್ತಾ ನಗರವನ್ನು ತಲುಪುವಾಗ ನಮ್ಮ ಎಡಬದಿಗೆ ಬಂದಿತ್ತು.

ನಗರವನ್ನು ಪ್ರವೇಶಿಸುವಾಗಲೇ ಪಟ್ಟಣದ ವಾತಾವರಣದ ಅರಿವು ನಮಗಾಗುತ್ತದೆ. ನಗರ ದರ್ಶನಕ್ಕೆ ಸಮಯಾವಕಾಶದ ಅಭಾವದಿಂದ ಎರಡು ಪ್ರಮುಖ ಪ್ರೇಕ್ಷಣಿಯ ಸ್ಥಳಗಳನ್ನು ಆಯ್ಕೆ ಮಾಡಿಕೊಂಡೆವು. ಅವುಗಳೆಂದರೆ ಮಹಬತ್ ಮಕ್ಬಾರಾ ಪ್ಯಾಲೆಸ್ ಮತ್ತು ಸ್ವಾಮಿನಾರಾಯಣ ದೇವಾಲಯ.
ಮಹಬತ್ ಮಕ್ಬಾರ ಪ್ಯಾಲೆಸ್:

ಈ ಪ್ಯಾಲೆಸ್ ನವಾಬರ ವಾಸ್ತು ಶಿಲ್ಪ ಮತ್ತು ಅವರ ಆಲೋಚನೆಗಳಿಗೆ ಹಿಡಿದ ಕೈಗನ್ನಡಿಯಂತಿದೆ. ಇದು ನಗರದ ಮಧ್ಯಭಾಗದಲ್ಲಿ ಇದ್ದು ಇದರ ವಾಸ್ತುಶಿಲ್ಪ ಶೈಲಿ ಹಾಗು ಆಕಾರ ನೋಡುಗರನ್ನ ಒಮ್ಮೆ ರೋಮಾಂಚನಗೊಳಿಸುತ್ತದೆ. ಗೋತಿಕ್ ಮತ್ತು ಇಸ್ಲಾಮಿಕ್ ಶೈಲಿಯ ಒಂದು ಅಸಾಧಾರಣ ಕಟ್ಟಡ ಇದಾಗಿದ್ದು ಪಟ್ಟಣದ ಹಳೆಯ ಕಟ್ಟಡ ಎಂಬ ಹೆಗ್ಗಳಿಯೂ ಇದಕ್ಕೆ ಸಲ್ಲುತ್ತದೆ.

ಈ ಪ್ಯಾಲೆಸ್ ಅನ್ನು ನವಾಬ ಎರಡನೇ ಮಹಬತ್ ಖಾನ್ಜಿ 1878ರಲ್ಲಿ ಕಟ್ಟಲು ಪ್ರಾರಂಭಿಸಿ 1892ರಲ್ಲಿ ಅವನ ನಂತರದ ದೊರೆ ಬಹದ್ದೂರ್ ಖಾನ್ಜಿ ಮುಕ್ತಾಯ ಗೊಳಿಸಿದನೆಂದು ಹೇಳಲಾಗುತ್ತದೆ. ಒಳ ಹಾಗು ಹೊರ ಮೇಲ್ಮೈ ವಿಸ್ತಾರವದ ಶಿಲ್ಪಗಳ ಕೆತ್ತನೆ ಫ್ರೆಂಚ್ ಶೈಲಿಯ ಕಿಟಕಿಗಳು, ಬೆಳ್ಳಿಯಂತೆ ಕಂಗೊಳಿಸುವ ಬಾಗಿಲುಗಳು ನೋಡುಗರನ್ನ ನೆಬ್ಬೆರಗಾಗಿಸುತ್ತದೆ. ಅದರ ಎಡಕ್ಕೆ ಮತ್ತು ಬಲಕ್ಕೆ ಇರುವ ಮಸೀದಿ ಸ್ತಂಭಗೋಪುರವು ಅಂಕುಡೊಂಕದ ಮೆಟ್ಟಿಲಿನಿಂದ ಗೋಪುರದ ತುತ್ತ ತುದಿಯವರೆಗು ತಲುಪಿದೆ. ಮೆಟ್ಟಿಲುಗಳು ಇಂದಿಗೂ ಸುಸ್ಥಿತಿಯಲ್ಲಿದ್ದು ಗೋಪುರದ ತುದಿಗೆ ಏರಬಹುದು.

ಮೇಲ್ತುದಿಯಲ್ಲಿ ನಿಂತು ನೋಡಿದಾಗ ಜುನಾಘಡ್ ನಗರದ ಕಾಲು ಭಾಗ ದರ್ಶನವಾಗುತ್ತದೆ. ನಾವು ಭೇಟಿ ನೀಡುವಾಗ ಸಂಜೆಯಾಗಿದ್ದರಿಂದ ಸೂರ್ಯಾಸ್ತ ನೋಡಲು ಪ್ರಶಕ್ತ ಸ್ಥಳ ಎಂದನಿಸಿತು. ಈ ಮೆಟ್ಟಿಲೇರಿದಾಗ ಗಿರ್ನರ್ ಪರ್ವತಕ್ಕೆ ಮತ್ತಷ್ಟು ಹತ್ತಿರವಾದಂತೆ ಹಾಗು ಪರ್ವತದ ರಮಣೀಯ ನೋಟ ಪ್ರವಾಸಿಗರನ್ನ ಕೈ ಬೀಸಿ ಕರೆದಂತೆ ಭಾಸವಾಗುತ್ತದೆ.
ಈ ಪ್ಯಾಲೆಸ್‍ಗೆ ಭೇಟಿ ನೀಡಲು ಬಹಳ ಸುಲಭ. ಇದು ನಗರದ ಮಧ್ಯ ಭಾಗದಲ್ಲಿ ಇರುವುದರಿಂದ ಆಟೋದಲ್ಲಿ ಅಥವ ಸುಕುಡೋ ರಿಕ್ಷಾದಲ್ಲಿ ಒಬ್ಬರು ಹತ್ತು ರೂಗಳನ್ನು ನೀಡುವುದರ ಮೂಲಕ ಈ ಸ್ಥಳಕ್ಕೆ ಭೇಟಿ ನೀಡಬಹುದು.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
196
Keerthana Bhat

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು