Categories: ವಿಶೇಷ

ನವದೆಹಲಿ: ವಿಶ್ವದ ಮೊದಲ ಲಿಪ್‌ ಕಿಸ್‌ ಆಗಿದ್ದೆಲ್ಲಿ ಗೊತ್ತಾ, ತುಟಿ ಚುಂಬನ ಇತಿಹಾಸ ಹೀಗಿದೆ ನೋಡಿ

ನವದೆಹಲಿ: 4,500 ವರ್ಷಗಳ ಹಿಂದೆ ಪುರಾತನ ಮಧ್ಯಪ್ರಾಚ್ಯದ ಜನರು ಲಿಪ್ ಕಿಸ್ಸಿಂಗ್ ಅನ್ನು ಮಾಡುತ್ತಿದ್ದರು ಎಂದು ಸಂಶೋಧಕರು ಬಹಿರಂಗ ಮಾಡಿದ್ದಾರೆ . ಈ ಹಿಂದೆ ಲಿಪಿ ಕಿಸ್‌ (ತುಟಿಚುಂಬನ) ದ ಕುರಿತು 1ಸಾವಿರ ವರ್ಷಗಳ ದಾಖಲೆ ಇತ್ತು. ಆದರೆ ಇದೀಗ ಮಾನವ ತುಟಿ ಚುಂಬನದ ಆರಂಭಿಕ ಪುರಾವೆಗಳು 3,500 ವರ್ಷಗಳ ದಕ್ಷಿಣ ಏಷ್ಯಾದ ಒಂದು ನಿರ್ದಿಷ್ಟ ಭೌಗೋಳಿಕ ಸ್ಥಳದಲ್ಲಿ ದೊರೆತಿವೆ ಎಂದು ಸಂಶೋಧಕರು ಹೇಳಿದ್ದಾರೆ.

ಈಗ, ಕೋಪನ್ ಹ್ಯಾಗನ್ ವಿಶ್ವವಿದ್ಯಾನಿಲಯ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸಂಶೋಧಕರು, ಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಲೇಖನದಲ್ಲಿ, ಆರಂಭಿಕ ಮೆಸೊಪೊಟೊಮಿಯಾದ ಸಮಾಜಗಳ ಲಿಖಿತ ಮೂಲಗಳಿಂದ ಈ ಅಂಶಗಳನ್ನು ದೃಢೀಕರಿಸಿದ್ದು, 4,500 ವರ್ಷಗಳ ಹಿಂದೆಯೇ ಮಾನವರಲ್ಲಿ ತುಟಿ ಚುಂಬನ ಅಭ್ಯಾಸವಿತ್ತು ಎಂಬುದಕ್ಕೆ ದಾಖಲೆಗಳು ದೊರೆತಿವೆ ಎಂದಿದ್ದಾರೆ.

ಪ್ರಾಚೀನ ಮೆಸೊಪಟ್ಯಾಮಿಯಾ ಭಾಗವಾಗಿರುವ ಇಂದಿನ ಇರಾಕ್ ಮತ್ತು ಸಿರಿಯಾದಲ್ಲಿ ಯೂಫ್ರೇಟ್ಸ್ ಮತ್ತು ಟೈಗ್ರಿಸ್ ನದಿಗಳ ನಡುವೆ ಅಸ್ತಿತ್ವದಲ್ಲಿದ್ದ ಆರಂಭಿಕ ಮಾನವ ಸಂಸ್ಕೃತಿಗಳಲ್ಲಿ ಈ ಕುರಿತು ಮಣ್ಣಿನ ರಚನೆಗಳು ಇವೆ ಎಂಬುದು ತಿಳಿದುಬಂದಿದೆ. ಜನರು ಮಣ್ಣಿನ ರಚನೆಗಳ ಮೇಲೆ ಈ ತುಟಿಚುಂಬನವನ್ನು ದಾಖಲೂ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಇಂತಹ ಸಾವಿರಾರು ಜೇಡಿಮಣ್ಣಿನ ರಚನೆಗಳು ಇಂದಿಗೂ ಉಳಿದುಕೊಂಡಿವೆ ಎಂದು ಸಂಶೋಧಕ ಡಾ ಟ್ರೋಲ್ಸ್ ಪ್ಯಾಂಕ್ ಹೇಳಿದ್ದಾರೆ.

Umesha HS

Recent Posts

ಮದುವೆಯಾದ ನಾಲ್ಕೇ ವರ್ಷಕ್ಕೆ ವಿಚ್ಛೇದನ ಪಡೆದುಕೊಂಡ ಯಶ್‌ ಹೀರೋಯಿನ್‌!

ಸಿನಿಮಾ ರಂಗದಲ್ಲಿ ಮತ್ತೊಂದು ವಿಚ್ಛೇದನ ಖಚಿತವಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.

8 mins ago

ಐದು ಮಂದಿಗೆ ವೆಸ್ಟ್ ನೈಲ್ ಜ್ವರ ಪತ್ತೆ; ಅಲರ್ಟ್ ಆದ ಸರಕಾರ

ವೆಸ್ಟ್ ನೈಲ್ ಫೀವರ್ ನ ಐದು ಪ್ರಕರಣಗಳು ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಇದೀಗ ಆತಂಕಕ್ಕೆ ಕಾರಣವಾಗಿದೆ.

19 mins ago

ಆಂಬುಲೆನ್ಸ್ ನೌಕರರ ಮುಷ್ಕರ ತಾತ್ಕಾಲಿಕ ಮುಂದೂಡಿಕೆ

ಬಾಕಿ ಉಳಿಸಿಕೊಂಡಿರುವ ವೇತನ ಪಾವತಿಗೆ ಆಗ್ರಹಿಸಿ 108-ಆರೋಗ್ಯ ಕವಚ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ.

26 mins ago

ಬೆಂಗಳೂರಿನಲ್ಲಿ ರೌಡಿಶೀಟರ್​ ಕಾರ್ತಿಕೇಯನ್ ಬರ್ಬರ ಹತ್ಯೆ

ನಗರದ ಬಾಣಸವಾಡಿ ವ್ಯಾಪ್ತಿಯ ರಾಮಸ್ವಾಮಿ ಪಾಳ್ಯದಲ್ಲಿ ರೌಡಿಶೀಟರ್​ ಕಾರ್ತಿಕೇಯನ್(40) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಲಾಗಿದೆ.

1 hour ago

ಪಕ್ಷದ ಬ್ಯಾಡ್ಜ್ ಧರಿಸಿ ಮತದಾನ; ಖೂಬಾ ವಿರುದ್ಧ ಪ್ರಕರಣ ದಾಖಲು

ಬೀದರ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಅವರು ತಮ್ಮ ಅಂಗಿ ಮೇಲೆ ಪಕ್ಷದ ಚಿಹ್ನೆ…

1 hour ago

ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ

ಬೀದರ್ ಲೋಕಸಭಾ ಕ್ಷೇತ್ರದ ಒಟ್ಟು ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಮೇ 7 ರಂದು ಶಾಂತಿಯುತವಾಗಿ ಮತದಾನ ನಡೆಯಿತು.

2 hours ago