ಹೊಸ ವರ್ಷವನ್ನು ಹೊಸತನದೊಂದಿಗೆ ಸ್ವಾಗತಿಸೋಣ

ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ತಿರುಗಿ ನೋಡಿದರೆ ಒಂದು ವರ್ಷದ ಅಷ್ಟು ದಿನಗಳು ನಮ್ಮ ಕಣ್ಣಮುಂದೆ ಹಾದು ಹೋಗುತ್ತದೆ. ಹೊಸ ವರ್ಷವನ್ನು ನಾವೆಲ್ಲರೂ ಹೊಸತನಗಳೊಂದಿಗೆ ಬರಮಾಡಿಕೊಳ್ಳಲು ತಯಾರಾಗುತ್ತಿರುವ ಈ ಸಂದರ್ಭದಲ್ಲಿ ನಾವು ಸವೆಸಿದ ಹಳೆಯ ವರ್ಷದ ಹಾದಿಯತ್ತ ತಿರುಗಿ ನೋಡಿದರೆ ನಾವು ಬಿಟ್ಟು ಬಂದ ಒಂದಷ್ಟು ಮೈಲಿಗಲ್ಲುಗಳು ಕಾಣಿಸಬಹುದು.

ನಮ್ಮ ಬದುಕಿನಲ್ಲಿ ನಾವು ಸಾಗಿ ಬಂದ ಅಷ್ಟು ವರ್ಷಗಳು ಅಮೂಲ್ಯವೇ.. ಕೆಲವು ವರ್ಷಗಳು ತಮ್ಮ ವೈಯಕ್ತಿಕ ಬದುಕಿನಲ್ಲಿ ಅಚ್ಚಳಿಯದ ನೆನಪುಗಳನ್ನು ಹೊತ್ತು ಕೊಂಡೇ ನಿಂತಿರುತ್ತವೆ. ನೋವು, ಕಷ್ಟ, ಇದ್ದದ್ದೇ ಅದರ ನಡುವೆಯೂ ಒಂದಷ್ಟು ಸವಿನೆನಪುಗಳನ್ನು ಮೆಲುಕು ಹಾಕುತ್ತಾ ಹೋಗಬೇಕು. ಅದರಲ್ಲಿ ಖುಷಿ ಪಡಬೇಕು. ಕೊರೊನಾ ಆರಂಭದ ಎರಡು ವರ್ಷಗಳಲ್ಲಿ ಅನುಭವಿಸಿದ ಸಂಕಷ್ಟಗಳನ್ನು ನೆನಪಿಸಿಕೊಂಡರೆ 2022 ವರ್ಷ ನಮ್ಮೆಲ್ಲರೂ ಚೇತರಿಸಿಕೊಂಡ ವರ್ಷ ಎಂದರೆ ತಪ್ಪಾಗಲಾರದು. ಪ್ರಾಕೃತಿಕ ವಿಕೋಪಗಳು ನಮ್ಮನ್ನು ಕಾಡಿದರೂ ಅದೆಲ್ಲವನ್ನು ಮೆಟ್ಟಿ ನಿಂತು ಮುಂದೆ ಸಾಗಿ ಬಂದಿದ್ದೇವೆ ಎನ್ನುವುದು ಸಂತೋಷ ಪಡಬೇಕಾದ ವಿಚಾರವೇ.

ಹಾಗೆನೋಡಿದರೆ ನಾವೆಲ್ಲರೂ ಹೊಸ ವರ್ಷದಲ್ಲಿ ಏನಾದರೊಂದು ಸಾಧಿಸಬೇಕೆಂಬ ದೃಢ ಸಂಕಲ್ಪ ಮಾಡಿಕೊಂಡೇ ಹೊಸವರ್ಷಕ್ಕೆ ಕಾಲಿಡುತ್ತೇವೆ. ಆದರೆ ಆ ಸಂಕಲ್ಪಗಳು ಈಡೇರಿವೆಯಾ? ಅಥವಾ ಅದನ್ನು ಈಡೇರಿಸುವಲ್ಲಿ ನಾವು ಶ್ರಮಪಟ್ಟಿದ್ದೇವೆಯಾ? ಅದೆಲ್ಲವನ್ನು ವರ್ಷದ ಕೊನೆಯಲ್ಲಿ ನಿಂತು ಮೆಲುಕು ಹಾಕಿದರೆ ಈಡೇರದ ಬಯಕೆ ಬಗ್ಗೆ ವಿಷಾದ ಮೂಡುವುದು ಸಹಜವೇ.. ಆದರೂ ನಾವೆಲ್ಲರೂ ಅಬ್ದುಲ್ ಕಲಾಂ ಹೇಳಿದಂತೆ ನನಸಾಗುವ ಕನಸನ್ನೇ ಕಾಣಬೇಕು. ಮತ್ತು ಅದನ್ನು ನನಸು ಮಾಡಲು ಮುಂದಾಗಬೇಕು.

ನಮ್ಮ ವ್ಯಾಪ್ತಿಯಲ್ಲಿ ನಮ್ಮಿಂದ ಸಾಧ್ಯವಾಗಬಹುದಾದ ಯೋಜನೆಯನ್ನು ಹಾಕಿಕೊಂಡು ಅದನ್ನು ಅನುಷ್ಠಾನಗೊಳಿಸುವತ್ತ ಶ್ರಮಪಡೋಣ. ಪ್ರಯತ್ನವಿಲ್ಲದೆ ಏನನ್ನೂ ಸಾಧಿಸಲಾಗಲ್ಲ ಎಂಬುದು ನಮಗೆಲ್ಲರಿಗೂ ಗೊತ್ತಿಲ್ಲದ ವಿಚಾರವೇನಲ್ಲ. ಆದರೆ ಏನು ಶ್ರಮಪಡದೆ ಕಳೆದು ಹೋದ ವರ್ಷದ ಬಗ್ಗೆ ಹಿಡಿಶಾಪ ಹಾಕುವುದು ಸಮಂಜಸವಲ್ಲ. ಹೊಸ ವರ್ಷದ ಆಗಮನವಾಗುತ್ತಿದ್ದಂತೆಯೇ ನಮ್ಮಲ್ಲಿ ಹೊಸ, ಹೊಸ ಕನಸುಗಳು ಚಿಗುರುವುದು ಸಹಜ. ಜತೆಗೆ ಕಳೆದು ಹೋದ ವರ್ಷದಲ್ಲಿ ಅನುಭವಿಸಿದ ಕಷ್ಟ ಕಾರ್ಪಣ್ಯಗಳೆಲ್ಲಾ ಕೊನೆಯಾಗಿ ಹೊಸ ವರ್ಷದ ಸುಖ ಶಾಂತಿಗೆ ತವಕಿಸುವುದು ಸಹಜವೇ.

ಇದೆಲ್ಲದರ ನಡುವೆ ಹೊಸವರ್ಷದಲ್ಲಿ ನಾವೆಲ್ಲರೂ ನಮಗೆ, ನಮ್ಮ ಕುಟುಂಬಕ್ಕೆ, ಸಮಾಜಕ್ಕೆ ಒಳ್ಳೆದಾಗುವ ಯಾವುದಾದರು ಒಳ್ಳೆಯ ಕೆಲಸ ಮಾಡುವ ಬಗ್ಗೆ ನಿರ್ಧಾರ ಮಾಡೋಣ. ಅಷ್ಟೇ ಅಲ್ಲದೆ ಹೊಸವರ್ಷದಲ್ಲಿ ನಾವು ಕೂಡ ಹೊಸ ಮನುಷ್ಯರಾಗುವುದರೊಂದಿಗೆ ಕುಟುಂಬಕ್ಕೆ, ಸಮಾಜಕ್ಕೆ ಕೊಡುಗೆಯಾಗೋಣ. ದುಶ್ಚಟಗಳಿದ್ದರೆ ಅದಕ್ಕೆ ವಿದಾಯ ಹೇಳಿ ನಾವೂ ಹೊಸ ಮನುಷ್ಯರಾಗೋಣ. ಇದೆಲ್ಲದರ ಜತೆಗೆ ಹೊಸವರ್ಷಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ವರ್ಷಪೂರ್ತಿ ಹರ್ಷದ ಆಚರಣೆಯಾಗಲಿ.

Ashika S

Recent Posts

ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್‌ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂ‍ಸ್ಥೆಗಳ…

6 hours ago

ಜಿಯೋ ಬಂಪರ್‌ ಆಫರ್‌ : 15 ಒಟಿಟಿ ಆ್ಯಪ್ಲಿಕೇಷನ್‌ ಜೊತೆ ಅನ್‌ಲಿಮಿಟೆಡ್ ಡೇಟಾ ಪ್ಲಾನ್

ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…

6 hours ago

ಕಾರಿನಲ್ಲಿ ಆಕಸ್ಮಿಕ ಬೆಂಕಿ : ವ್ಯಕ್ತಿ ಸಜೀವ ದಹನ

ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…

7 hours ago

ವಿಧಾನಪರಿಷತ್ ಚುನಾವಣೆ : ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 6 ಕ್ಷೇತ್ರಗಳ…

7 hours ago

ಹಾಡಹಗಲೇ ಚಾಕುವಿನಿಂದ ಇರಿದು ಯುವಕನ ಭೀಕರ ಹತ್ಯೆ

ಚಾಕುವಿನಿಂದ ಇರಿದು ಹಾಡಹಗಲೇ ಯುವಕನ ಭೀಕರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ‌ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಪ್ರೀತಿ…

7 hours ago

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಬಿತ್ತು ಧರ್ಮದೇಟು

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ ಘಟನೆ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಇಂದು ಸಂಭವಿಸಿದೆ

7 hours ago