Categories: ಲೇಖನ

ಕೌಶಲತೆ ಹೆಚ್ಚಿಸಿಕೊಳ್ಳಬೇಕಿದೆ ಹೇರ್ ಡಿಸೈನರ್ಸ್.. ಏಕೆ ಗೊತ್ತಾ?

ಒಂದು ಕಾಲದಲ್ಲಿ ಬಟ್ಟೆ ಧರಿಸೋದು ಮಾನಮುಚ್ಚೋಕೆ ಎಂಬಂತೆ ಯಾವುದೋ ಪ್ಯಾಂಟ್ ಗೆ ಮತ್ಯಾವುದೋ ಶರ್ಟ್  ಹಾಕಿಕೊಳ್ಳುತ್ತಿದ್ದರು. ಡ್ರೆಸ್‌ಗೆ ಹೆಚ್ಚಿನ ಒತ್ತು ಕೊಡುತ್ತಿರಲಿಲ್ಲ. ಇನ್ನು ಕೂದಲಿನ ವಿಚಾರದಲ್ಲಿಯೂ ಅಷ್ಟೆ… ಈಗ ಹಾಗಿಲ್ಲ. ಕಾಲ ಬದಲಾಗಿದೆ. ತಮ್ಮ ಕೆಲಸ ಕಾರ್ಯಗಳಿಗೆ ಎಷ್ಟು ಒತ್ತು ಕೊಡುತ್ತೇವೆಯೋ ಹಾಗೆಯೇ ನಮ್ಮ ಬಟ್ಟೆ, ಕೂದಲು, ಸೌಂದರ್ಯಗಳ ಕಡೆಗೆ ಗಮನ ನೀಡುತ್ತಿದ್ದೇವೆ. ಜತೆಗೆ ಹೊಸ ಫ್ಯಾಷನ್ ಗಳಿಗೆ ಮಾರು ಹೋಗುತ್ತಿದ್ದೇವೆ.

ಈಗ  ಜನರ ನಡುವೆ ಆಕರ್ಷಕವಾಗಿ ಕಾಣಬೇಕೆಂಬುದು ಎಲ್ಲರ ಹಂಬಲವಾಗಿದೆ. ಇದಕ್ಕಿಂತ ಹೆಚ್ಚಾಗಿ ನಾವು  ಮಾಡಿದೆಲ್ಲವೂ ಫ್ಯಾಷನ್ ಎಂಬ ಮಟ್ಟಿಗೂ ಬಂದು ನಿಂತು ಬಿಟ್ಟಿದ್ದೇವೆ. ಸೆಲೆಬ್ರಿಟಿಗಳನ್ನು ನೋಡಿ ಅವರ ಬಟ್ಟೆ ಹೇರ್‌ ಸ್ಟೈಲ್‌ಗಳನ್ನು ಅನುಕರಣೆ ಮಾಡುವವರಿಗೇನು ಕೊರತೆಯಿಲ್ಲ. ಹೀಗಾಗಿ ಟೈಲರ್ ಮತ್ತು ಹೇರ್ ಕಟ್ಟಿಂಗ್ ಸೆಲೂನ್‌ಗಳಲ್ಲಿ ಕೆಲಸ ಮಾಡುವವರು ತಮ್ಮ ಕೆಲಸಗಳಲ್ಲಿ ಅಪಡೇಟ್ ಆಗಲೇ ಬೇಕು. ಇವತ್ತಿನ ವೇಗದ ಬದುಕಿನಲ್ಲಿ ತಮ್ಮ ವೃತ್ತಿ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವುದು ಅನಿವಾರ್ಯವಾಗಿದೆ.

ಇವತ್ತು ಕ್ರಿಕೆಟ್ ಆಟಗಾರರಿರಬಹುದು, ಸಿನಿಮಾ ನಟರಿರಬಹುದು ಅವರನ್ನೊಮ್ಮೆ ಗಮನಿಸಿ ನೋಡಿದರೆ ಅವರ ಡ್ರೆಸ್‌  ಗಿಂತ ಅವರ ಹೇರ್ ಸ್ಟೈಲ್‌ಗಳು ಗಮನಸೆಳೆಯುತ್ತವೆ. ಅವು ನೋಡೋದಕ್ಕೆ ಆಕರ್ಷವಾಗಿರುತ್ತವೆಯೋ ಎನ್ನುವುದು ಮುಖ್ಯವಲ್ಲ. ವಿಭಿನ್ನವಾಗಿರುತ್ತವೆ. ಹತ್ತು ಜನರ ನಡುವೆ ಮಾಮೂಲಿ ಜನರಿಗಿಂತ ಭಿನ್ನವಾಗಿದ್ದರೆ ತಾನೆ ಜನ ಅತ್ತ ದೃಷ್ಠಿ ಹಾಯಿಸೋದು. ಹೀಗಾಗಿಯೇ ಹೇರ್‌ಸ್ಟೈಲ್ ವಿಚಿತ್ರ ರೂಪಗಳಲ್ಲಿರುತ್ತವೆ. ಅವು ಯುವ ಸಮುದಾಯವನ್ನು ಅಷ್ಟೇ ವೇಗದಲ್ಲಿ ಸೆಳೆಯುತ್ತಿದೆ.

ಬಹಳಷ್ಟು ವಿದ್ಯಾರ್ಥಿಗಳು, ಯುವಕರು ಸೆಲೂನಿಗೆ ಬಂದು ನಾಯಕರ ಫೋಟೋ ತೋರಿಸಿ ಅವರಂತೆ ಕಟಿಂಗ್  ಮಾಡಿಕೊಡುವಂತೆ ಕೇಳುತ್ತಾರೆ. ಇಂತಹ ಕಟಿಂಗ್ ಮಾಡುವುದು ಎಲ್ಲರಿಗೂ ಸಾಧ್ಯವಿಲ್ಲ. ಹೀಗಾಗಿ ಬಹಳಷ್ಟು ಜನ ನಿರಾಸರಾಗಿ ಹಿಂತಿರುಗುತ್ತಾರೆ. ಇದು ಆಗಬಾರದೆಂದರೆ ಬರೀ ಕಟ್ಟಿಂಗ್ ಕೆಲಸ ಕಲಿತರೆ ಸಾಲದು ಅದರಲ್ಲಿ ನೈಪುಣ್ಯತೆ ಗಳಿಸಬೇಕು. ಫ್ಯಾಷನ್ ಗಳ ಬಗ್ಗೆ ತಿಳಿದುಕೊಳ್ಳಬೇಕು. ಅದನ್ನು ಮಾಡುವ ಬಗ್ಗೆಯೂ ಗಮನಹರಿಸಬೇಕಾಗುತ್ತದೆ.

ಈಗ ಹೇರ್ ಡಿಸೈ ನರ್ಸ್ ಸದಾ ಜಾಗೃತರಾಗಿರಬೇಕು. ಹೊಸತನದನ್ನು ಅಭ್ಯಸಿಸಬೇಕು. ಹೊಸ ಟ್ರೆಂಡ್ ಏನು  ಎಂಬುದನ್ನು ಅರಿತುಕೊಳ್ಳಬೇಕು. ಹೀಗಿದ್ದರೆ ಫ್ಯಾಷನ್ ಪ್ರಿಯ ಗ್ರಾಹಕರನ್ನು ಸೆಳೆಯಲು ಅನುಕೂಲವಾಗುತ್ತದೆ. ಇವತ್ತು ಪ್ರತಿಯೊಂದು ಕ್ಷೇತ್ರವೂ ಸ್ಪರ್ಧೆಯಿಂದ ಕೂಡಿದ್ದು ಇಲ್ಲಿ ಗಟ್ಟಿಯಾಗಿ ನೆಲೆಯೂರಬೇಕಾದರೆ ಪೈಪೋಟಿಗೆ ಇಳಿಯಲೇ ಬೇಕಾಗುತ್ತದೆ. ಅದರಲ್ಲಿ ಗೆಲವು ನಮ್ಮದಾಗಬೇಕಾದರೆ ಕೌಶಲತೆ ವೃದ್ಧಿಸಿ ಕೊಳ್ಳುವ ಜಾಣ್ಮೆ ನಮ್ಮಲ್ಲಿರಬೇಕಷ್ಟೆ.

Ashika S

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

5 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

5 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

6 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

6 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

7 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

7 hours ago