News Karnataka Kannada
Tuesday, April 16 2024
Cricket
ಲೇಖನ

ಮುಲ್ಕಿಯ ಮಸೀದಿ ಸೌಂದರ್ಯಕ್ಕೆ ಹರೀಶ್ ಆಚಾರ್ಯ ಕೈ ಚಳಕ

Masidi
Photo Credit :

ರಾಜ್ಯದಲ್ಲಿ ಧರ್ಮ ದಂಗಲ್ ಹೆಚ್ಚಾಗುತ್ತಿದೆ. ಹಿಜಾಬ್ ಗಲಾಟೆಯಿಂದ ಆರಂಭವಾದ ಕೋಮು ದ್ವೇಷ, ಹುಬ್ಬಳ್ಳಿ ಯ ಗಲಭೆಯವರೆಗೂ ಮುಂದುವರಿಯುತ್ತಲೇ ಇದೆ.

ಆದರೆ ಕೋಮುಸೂಕ್ಷ್ಮ ಪ್ರದೇಶ ಎಂಬ ಹಣೆಪಟ್ಟಿ ಧರಿಸಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮರಸ್ಯ ಮೇಳೈಸುತ್ತಿದೆ. ಮಸೀದಿಗೆ ಹಿಂದೂ ಕುಶಲಕರ್ಮಿ ಕಾಷ್ಠ ಶಿಲ್ಪ ಮಾಡುವ ಮೂಲಕ ದ್ವೇಷದ ಗೆರೆ ಅಳಿಸಿದ್ದಾರೆ.

ಹಿಜಾಬ್, ವ್ಯಾಪಾರ ಬಹಿಷ್ಕಾರ, ಹಲಾಲ್, ಸೇರಿದಂತೆ ಹಲವು ವಿಚಾರಗಳ ಮೂಲಕ ಧರ್ಮ ಸಂಘರ್ಷದ ಕಿಡಿ ರಾಜ್ಯದಲ್ಲಿ ಹಬ್ಬಿದೆ. ಕೋಮು ಕಿಡಿ ಜ್ವಾಲೆಯಾಗಿ ಹಬ್ಬುವ ಆತಂಕದ ನಡುವೆಯೂ ಅಲ್ಲಲ್ಲಿ ಕೋಮು ಸಾಮರಸ್ಯವನ್ನು ಸೃಷ್ಠಿಸುವ ಕೆಲಸ ನಡೆಯುತ್ತಿದೆ.

ಅದರಲ್ಲೂ ಕೋಮು ವಿಚಾರಕ್ಕೆ ಸೂಕ್ಷ್ಮ ಪ್ರದೇಶ ಎಂಬ ಹಣೆ ಪಟ್ಟಿ ಕಟ್ಟಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌಹಾರ್ದತೆ,ಸಹಬಾಳ್ವೆಯನ್ನು ಬೆಳಗಿಸುವಂತಹ ಕಾರ್ಯ ನಡೆದಿದೆ.

ಮಂಗಳೂರು ನಗರ ಹೊರವಲಯದ ಮುಲ್ಕಿಯ ಪಕ್ಷಿಕೆರೆಯ ನವೀಕೃತ ‌ಬದ್ರಿಯಾ ಜುಮ್ಮಾ ಮಸೀದಿಗೆ ಕಾಷ್ಠ ಶಿಲ್ಪವನ್ನು ಹಿಂದೂ ಕುಶಲಕರ್ಮಿ ಅತ್ಯದ್ಭುತ ವಾಗಿ ಮಾಡುವ ಮೂಲಕ ಸಾಮರಸ್ಯ ವನ್ನು ಸಾರಿದ್ದಾರೆ. ಮುಸ್ಲಿಮರು ಕೆತ್ತಿದ ಶಿಲ್ಪವನ್ನು ದೇವಳದಲ್ಲಿ ಪ್ರತಿಷ್ಠಾಪನೆ ಮಾಡಬಾರದು ಎಂಬ ಅಭಿಯಾನದ ನಡುವೆಯೂ ಹಿಂದೂ ಕುಶಲ ಕರ್ಮಿ ಹರೀಶ್ ಆಚಾರ್ಯ ನವೀಕೃತ ಮಸೀದಿಗೆ ಇಂಡೋ-ಇಸ್ಲಾಮಿಕ್ ಮಾದರಿಯಲ್ಲಿ ಅದ್ಭುತವಾಗಿ ಕಾಷ್ಠ ಶಿಲ್ಪ ಮಾಡಿದ್ದಾರೆ.

ಸುಮಾರು ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಮಸೀದಿ ನವೀಕರಣವಾಗಿದೆ. ಮಸೀದಿಯ ಮರದ ಕೆಲಸಕ್ಕೆ ಮಸೀದಿ ಆಡಳಿತ ಮಂಡಳಿ ಉತ್ತಮ ಕುಶಲಕರ್ಮಿಗಳನ್ನು ಹುಡುಕಾಟ ಮಾಡುತ್ತಿದ್ದ ಸಂಧರ್ಭದಲ್ಲಿ, ಕಾಪುವಿನ ಮಸೀದಿಯೊಂದಕ್ಕೆ ಕಾಷ್ಠ ಶಿಲ್ಪ ಮಾಡಿದ ಹರೀಶ್ ಆಚಾರ್ಯ ಅವರನ್ನು ಸಂಪರ್ಕಿಸಿ ಮಸೀದಿ ಕಾಷ್ಠ ಶಿಲ್ಪದ ಕೆಲಸವನ್ನು ಮಾಡಿ ಕೊಡುವಂತೆ ಭಿನ್ನಹಿಸಿಕೊಂಡಿದ್ದಾರೆ. ಮಸೀದಿ ಆಡಳಿತ ಮಂಡಳಿಯ ಕೋರಿಕೆಯಂತಢ ಹರೀಶ್ ಇದೀಗ ಮಸೀದಿಯಲ್ಲಿ ಒಂದುಸಾವಿರ ಚದರ ಅಡಿಯಲ್ಲಿ ಆಕರ್ಷಕ ವಾಗಿ ಮರದ ಕೆತ್ತನೆ ಕೆಲಸ ಮಾಡಿದ್ದಾರೆ.

ಹರೀಶ್ ಈವರೆಗೆ 25 ಕ್ಕೂ ಅಧಿಕ ದೇವಸ್ಥಾನಗಳ ಮರದ ಕೆತ್ತನೆಯನ್ನು ಮಾಡಿದ್ದಾರೆ. ಒಂದು ಮಸೀದಿ ಕೆತ್ತನೆ ಮಾಡಿದ ಅನುಭವೂ ಹರೀಶ್ ಗೆ ಇದೆ..ಹರೀಶ್ ಇಂಡೋ-ಇಸ್ಲಾಮಿಕ್ ಶೈಲಿಯ ಕಾಷ್ಠ ಶಿಲ್ಪವನ್ನು ಅಧ್ಯಯನ ಮಾಡಿ ಮಾಡಿದ್ದಾರೆ. ತನ್ನ ಸಹೋದರರ ಜೊತೆಗೂಡಿ ಹರೀಶ್ ಮರದ ಕೆತ್ತನೆಯ ಕೆಲಸ ವನ್ನು ಮಾಡುತ್ತಾರೆ.

ಮಸೀದಿಯಲ್ಲಿ ಮಾಡಿದ ಕಾಷ್ಠ ಶಿಲ್ಪದ ಬಗ್ಗೆ ಮಾತನಾಡಿದ ಕುಶಲಕರ್ಮಿ ಹರೀಶ್ ಆಚಾರ್ಯ, ನಾನು ಯಾವ ಸಮುದಾಯ ಅಂತಾ ನೋಡಿ ಕೆಲಸ ಮಾಡಿಲ್ಲ..ನಾನು ನನ್ನ ಕೆಲಸವನ್ನು ಮಾಡಿದ್ದೇನೆ..ಭಾರತೀಯ ಕಾಷ್ಠ ಶಿಲ್ಪ ಕ್ಕೂ ಇಸ್ಲಾಮಿಕ್ ಶೈಲಿಗೂ ಬಹಳ ವ್ಯತ್ಯಾಸ ಇದೆ. ಕಾಪುವಿನಲ್ಲಿ ಮೊದಲ ಮಸೀದಿಯ ಕೆಲಸ ಮಾಡುವಾಗ ಬಹಳ ಚಾಲೆಂಜಿಂಗ್ ಅಂತಾ ಅನಿಸಿತ್ತು. ಬಳಿಕ ಮುಲ್ಕಿ ಮಸೀದಿ ಕೆಲಸ ಮಾಡಲು ಇಸ್ಲಾಮಿಕ್ ಶೈಲಿಯ ಬಗ್ಗೆ ಅಧ್ಯಯನ ಮಾಡಿ ಕೆಲಸ ಮಾಡಿದ್ದೇನೆ ಅಂತಾ ಹೇಳಿದ್ದಾರೆ. -ಹರೀಶ್ ಆಚಾರ್ಯ ಕುಶಲಕರ್ಮಿ

ಇನ್ನು ಮಸೀದಿಯ ಆಡಳಿತ ಮಂಡಳಿಯ ಅಧ್ಯಕ್ಷ ಮಹಮ್ಮದ್ ಮಾತನಾಡಿ,ಪಕ್ಷಿಕೆರೆಯಲ್ಲಿ ಎಲ್ಲರೂ ಕೋಮುಸಾಮರಸ್ಯ, ಸಹಬಾಳ್ವೆಯೊಂದಿಗೆ ಜೀವನ ಮಾಡುತ್ತಿದ್ದೇವೆ..ಮಸೀದಿ ನವೀಕರಣ ಕ್ಕಾಗಿ ಕುಶಲಕರ್ಮಿಗಳನ್ನು ಹುಡುಕುತ್ತಿದ್ದಾಗ ಹರೀಶ್ ಅವರ ಸಂಪರ್ಕ ಆಯಿತು..ಹರೀಶ್ ಕೆಲಸ ಸಮುದಾಯದ ಎಲ್ಲರಿಗೂ ಇಷ್ಟವಾಗಿದೆ..ಹರೀಶ್ ಕೆಲಸ ನೋಡಲೆಂದೇ ಸಮುದಾಯದ ಯುವಕರು ಮಸೀದಿಯತ್ತ ಬರುತ್ತಿದ್ದಾರೆ ಅಂತಾ ಹೇಳಿದ್ದಾರೆ. -ಮಹಮ್ಮದ್ ಅಧ್ಯಕ್ಷರು, ಬದ್ರಿಯಾ ಜುಮ್ಮಾ ಮಸೀದಿ ಪಕ್ಷಿಕೆರೆ

ಒಟ್ಟಿನ್ನಲ್ಲಿ ಧರ್ಮ ಗಳ ನಡುವೆ ಕಿಡಿ ಹಚ್ಚುತ್ತಿರುವ ಈ ಸಂಧರ್ಭದಲ್ಲಿ ಮಸೀದಿಯ ಕಾಷ್ಠ ಶಿಲ್ಪವನ್ನು ಹಿಂದೂ ಕುಶಲಕರ್ಮಿ ಮಾಡುವ ಮೂಲಕ ಕೋಮು ದ್ವೇಷದ ಉರಿಯನ್ನು ತಣಿಸುವ ಕೆಲಸ ಮಾಡಿದ್ದಾರೆ.

ವರದಿ- ಪ್ರಣಾಮ್ ಕುಲಾಲ್ ಮಂಗಳೂರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು