News Karnataka Kannada
Monday, April 22 2024
Cricket
ಲೇಖನ

ಕೂಡು ಕುಟುಂಬದ ನೆನಪಿನ ಜೊತೆಗೆ ನನ್ನ ಪಯಣ

Untitled 5
Photo Credit :

‘ಅವಿಭಕ್ತ’ ಕುಟುಂಬ ಈ ಶಬ್ದಕ್ಕಿಂತಲೂ ‘ಕೂಡು ಕುಟುಂಬ’ ಎಂಬ ಶಬ್ದದಲ್ಲಿ ಹಿತವಿದೆ. ಆದರೆ ಇತ್ತೀಚಿನ ದಿಗಳಲ್ಲಿ ಇಂತಹ ಸಂಸಾರಗಳು ಕಾಣಸಿಗುವುದು ತುಂಬಾ ಕಡಿಮೆ. ಒಂದು ಪರಿಸರದಲ್ಲಿ ಅಲ್ಲೋ ಇಲ್ಲೋ ಎಂಬಂತೆ ಕೂಡು ಕುಟುಂಬಗಳು ಕಾಣಸಿಗುತ್ತವೆ. ‘ಕುಟುಂಬ’ ಇದೇ ಆಗಿನ ಕಾಲಕ್ಕೂ ಈಗಿನ ಕಾಲಕ್ಕೂ ಆಗಿರುವ ಒಂದು ಮುಖ್ಯವಾದ ಬದಲಾವಣೆ. ಆ ಕಾಲದ ಕೂಡು ಕುಟುಂಬಗಳು, ಮನೆ ತುಂಬಾ ಮಕ್ಕಳು, ಅಜ್ಜ, ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ ಚಿಕ್ಕಮ್ಮ, ಅತ್ತೆ, ಮಾವ ಹೀಗೆ ಸಂಬಂಧಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ತೋಟ, ಗದ್ದೆ, ನಾಟಿ, ಕೊಯ್ಲು, ಅಡಿಕೆಗೆ ಮದ್ದು ಬಿಡುವುದು, ಕೆಲಸದವರಿಗೆ ಕೂಲಿ, ಇದೆಲ್ಲಾ ಪುರುಷರ ಕೆಲಸವಾದರೆ ಮನೆ, ಮಕ್ಕಳು, ಅಡುಗೆ, ದನ ಕರು, ಎಂದು ಮನೆಯ ಹೆಂಗೆಳೆಯರ ಕೆಲಸ ನಡೀತಿತ್ತು. ಮನೆಗೆ ಹಿರಿ ಸೊಸೆ ಬಂದ ನಂತರ ಆ ಮನೆಯ ಹಿರಿ ಹೆಣ್ಣು ಜೀವ ತನ್ನ ಅಡುಗೆ, ದನ ಕರು ಇತ್ಯಾದಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ದೇವರ ಧ್ಯಾನದಲ್ಲಿ ಕೂತುಬಿಟ್ಟರೆ ಮುಗೀಯಿತು. ಹೊರಗೆ ದುಡಿದು, ದಣಿದು ಬಂದ ಜೀವಗಳಿಗೆ ಅಮೃತ ಎರೆಯುವ ಕೆಲಸ ಆ ಮನೆಯ ಹಿರಿ ಸೊಸೆಯದು. ಇನ್ನು ಬಾಕಿ ಉಳಿದ ಹೆಂಗೆಳೆಯರಿಗೆ/ ಸೊಸೆಯಂದಿರಿಗೆ ಹಿರಿಯವಳೆ ಲೀಡರ್, ಆಕೆ ಏನು ಹೇಳುತ್ತಾಳೋ ಅದನ್ನು ಮಾಡಬೇಕಾಗಿತ್ತು, ಹಾಗಂತ ಯಾವತ್ತು ಅಧಿಕಾರ ಚಲಾಯಿಸುತ್ತಿರಲಿಲ್ಲ ಯಾಕೆಂದರ ಎಲ್ಲರು ಅಕ್ಕ ತಂಗಿಯರಂತಿದ್ದರು. ಕಿರಿ ಸೊಸೆ ತಪ್ಪು ಮಾಡಿದಾಗ ಅದನ್ನು ತಿದ್ದುತ್ತಿದ್ದ ಹಿರಿ ಸೊಸೆ, ಮಾಡಿದ ಅಡುಗೆ ಹೆಚ್ಚು ಕಮ್ಮಿಯಾದಗ ಅದನ್ನು ತನ್ನ ಮೇಲೆ ಹಾಕಿಕೊಳ್ಳುತ್ತಿದ್ದ, ಇನ್ನೋಬ್ಬ ಸೊಸೆ, ಇಂತಹ ವಾತವರಣ ಇರಬೇಕಾದರೆ ಬೇರೆಯಾಗುವ ಮಾತೆಲ್ಲಿ ಬರುತ್ತಿತ್ತು ಹೇಳಿ. ಜೊತೆಗೆ ಮಕ್ಕಳ ತುಂಟಾಟಗಳು, ಹೆತ್ತವರ ಜೊತೆಗೆ ಮನೆಯ ಇತರ ಸದಸ್ಯರ ಮನವನ್ನು ಸಂತೋಷದಲ್ಲಿ ತೇಲಾಡಿಸುತ್ತಿದ್ದುದು ಇಂದು ಕಾಣಸಿಗಲಾರವು.

ಒಬ್ಬಂಟಿತನದಲ್ಲಿ ಬೆಳೆಯುವ ಇಂದಿನ ಮಕ್ಕಳೆಲ್ಲಿ, ಅಪ್ಪ, ಅಜ್ಜ, ಅಜ್ಜಿ, ಚಿಕ್ಕಪ್ಪನ ಜೊತೆ ಬೆಳೆದ ಆಗಿನ ಮಕ್ಕಳೆಲ್ಲಿ ಅಜ್ಜನಿಗೆ ಹೆದರುತ್ತಾ, ಅಪ್ಪನ ಜೊತೆ ಕೂಸು ಮರಿ ಆಡುತ್ತಾ, ದೊಡ್ಡಮ್ಮನ ಪ್ರೀತಿಯ ಕೈ ತುತ್ತು ತಿನ್ನುತ್ತಾ, ಅಜ್ಜಿಯ ಬಿಸಿ ನೀರಿನ ಎಣ್ಣೆ ಸ್ನಾನದ ಅನುಭವ ಯಾರಿಗುಂಟು ಯಾರಿಗಿಲ್ಲ, ಇದೆಲ್ಲ ಅದೃಷ್ಟಂತರಿಗೆ ಮಾತ್ರ. ಆ ಕಾಲಕ್ಕೆ ಕರೆಂಟ್ ಇಲ್ಲದ್ದು ಒಂದು ನೆಪ ಮಾತ್ರ ಚಿಮಿಣಿ ದೀಪ ಉರಿಸಿ ಒಟ್ಟಿಗೆ ಊಟ ಮಾಡುತ್ತಾ ಕಳೆದ ಸುಖ ಬೇರೆಲ್ಲಿಹುದು. ಮಕ್ಕಳಿಗೆ ಒಂದೇ ತಟ್ಟೆಯಲ್ಲಿ ಅಮ್ಮನೋ ಚಿಕ್ಕಮ್ಮನೋ, ದೊಡ್ಡಮ್ಮನೋ ತಿನ್ನಿಸುತ್ತಾ ಇಡೀ ಮನೆ ತುಂಬಾ ಓಡಾಡಿಸುತ್ತಾ ಇದ್ದರೂ, ಬಿಡದೆ ಒಂದೊಂದು ತುತ್ತುನ್ನು ಬಾಯಿಗಿಡುತ್ತಾ ಮುದ್ದು ಮಾಡುತ್ತಿದ್ದರು.

ನಾಟಿಯ ಸಮಯದಲ್ಲಂತು ಮಕ್ಕಳ ಆಟಗಳು ಹೇಳತೀರು. ಐದು ಆರು ವರ್ಷದವರೆಗೂ ಮನೆಯಲ್ಲೇ ಇರುತ್ತಿದ್ದ ಆಕಾಲದಲ್ಲಿ ಮಕ್ಕಳು ಗದ್ದೆಗೆ ಹೋಗುವುದೇನು ನಾಟಿ ಮಾಡುವುದೇನು ಅಬ್ಬಾ! ಆ ಮಕ್ಕಳಿಗೆ ನಾಟಿ ಕೇವಲ ನೆಪ ಮಾತ್ರ ಆಡಬೇಕಾದದ್ದು ಕೆಸರಿನಲ್ಲಿ. ಇತ್ತೀಚಿನ ದಿನಗಳ ಹಾಗೆ ಆ ಕಾಲದಲ್ಲಿ ‘ಕೆಸರ್‍ಡೊಂಜಿ ದಿನ’ ಅಂತ ಮಾಡುತ್ತಿರಲಿಲ್ಲ, ಮಕ್ಕಳ ಆಟವೇ ಕೆಸರ್‍ಡೊಂಜಿ ದಿ ಆಗಿತ್ತು, ಕುಣಿಯುವುದೇನು, ಗದ್ದೆಯ ಬದಿಯಲ್ಲಿ ಸಿಗುವ ನರ್ತೆ ಹಿಡಿಯುವ ಕೆಲಸದಲ್ಲಿ ತೊಡಗುವುದೇನು, ಕೆಲಸಕ್ಕೆ ಬರುವ ಬಾಗಿ, ಗಿರಿಜಕ್ಕ, ರಾಧಕ್ಕ, ಎಲ್ಲರೊಂದಿಗು ಎಂತಹ ಗೆಳೆತನ, ಮತ್ತೆ ಮನೆಗೆ ಬರುವಾಗ ಅಜ್ಜಿಯ ಪ್ರೀತಿಯ ಬೈಗುಳ ಮಕ್ಕಳಿಗಲ್ಲ, ಅಮ್ಮ ದೊಡ್ಡಮ್ಮನಿಗೆ. ಮತ್ತದೆ ಅಜ್ಜಿಯ ಬಿಸಿ ನೀರಿನ ಎಣ್ಣೆ ಸ್ನಾನ, ಕೈತುತ್ತು ಮತ್ತೆ ಅಪ್ಪನ ಎದೆಮೇಲೆ ಹಾಯಾದ ನಿದ್ರೆ.

ಇದೆಲ್ಲಾ ಈಗಿನ ಮಕ್ಕಳಿಗೆಲ್ಲಿ ಗೊತ್ತು, ಕುಟುಂಬ ಎಂದರೆ ಅಪ್ಪ ಅಮ್ಮ ಮಗು ಅಷ್ಟೆ ಎಂಬುದು ಅವರ ಅನಿಸಿಕೆ. ಅಪ್ಪ ಅಮ್ಮ ಕೆಲಸಕ್ಕೆ ಹೊರಟರೆ ಮಗು ಶಾಲೆಗೆ. ಬೆಳಗ್ಗೆ ಹೋದ ಅಪ್ಪ ಅಮ್ಮ ರಾತ್ರಿ ಮನೆಗೆ. ಮಾತಿಲ್ಲ ಕಥೆ ಇಲ್ಲ ಒಂದು ತರಹದ ಯಾಂತ್ರಿಕ ಬದುಕು. ಈಗಿನ ಮಕ್ಕಳಿಗೂ ಅವಿಭಕ್ತ ಕುಟುಂಬದ ಮಹತ್ವ ತಿಳಿಸಿ, ಸಾಧ್ಯವಾದಷ್ಟೂ ಅವಿಭಕ್ತ ಕುಟುಂದಲ್ಲಿ ಮಕ್ಕಳನ್ನು ಬೆಳೆಸಲು ಪ್ರಯತ್ನ ಪಡಬೇಕಾಗಿದೆ. ‘ಮಗ ಸಂಗೀತ ಕಲಿಯುತ್ತಿದ್ದಾನೆ,’ ‘ಮಗಳು ಸ್ಕೇಟಿಂಗ್ ಕಲಿಯುತ್ತಿದ್ದಾಳೆ’, ಇದೆಲ್ಲಾ ಕಲಿಸಿ, ಆದರೆ ಆ ಮಕ್ಕಳಿಗೂ ಅವರದ್ದೆ ಆಸೆಗಳಿರುತ್ತವೆ, ಅದನ್ನು ಕಟ್ಟಿಹಾಕುವುದು ಅವರಿಗೂ ಕಷ್ಟಕರ, ಮುಗ್ದ ಮನಸಿಗ್ಗೂ ಹಳ್ಳಿಯ ವತಾವರಣ, ಕುಟುಂಬದ ಮಹತ್ವ, ಶುದ್ದ ಪರಿಸರದ ಬಗ್ಗೆ ಅನುಭವ ಕೊಡಬೇಕಾಗಿದೆ. ಎಳೆಯ ಮನಸ್ಸುಗಳನ್ನು ಹೆತ್ತವರು ಅರ್ಥಮಾಡಿಕೊಳ್ಳಬೇಕಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು