Categories: ವಿಶೇಷ

ಕಾರವಾರ: ಮನುಷ್ಯರಂತೆ ಏಡಿಗೂ ಹೆಸರು ‘ಆರಾಧ್ಯ ಪ್ಲಾಸಿಡಾ’ ವಿಶೇಷವೇನು ಗೊತ್ತಾ

ಕಾರವಾರ: ಪಶ್ಚಿಮಘಟ್ಟದ ಭಾಗವಾಗಿರುವ ಜಿಲ್ಲೆಯಲ್ಲಿ ಏಡಿಯ ಹೊಸ ಹೊಸ ಪ್ರಭೇದವೊಂದು ಯಲ್ಲಾಪುರದಲ್ಲಿ ಪತ್ತೆಯಾಗಿದ್ದು, ಇದಕ್ಕೆ ‘ಆರಾಧ್ಯ ಪ್ಲಾಸಿಡಾ’ ಎಂದು ನಾಮಕರಣ ಮಾಡಲಾಗಿದೆ.

ಜಿಲ್ಲೆಯ ಪರಿಸರಾಸಕ್ತ ಜೋಡಿಗಳಾದ ನಿಸರ್ಗ ತಜ್ಞ ಗೋಪಾಲಕೃಷ್ಣ ಹೆಗಡೆ, ಅರಣ್ಯ ಇಲಾಖೆಯ ಸಿಬ್ಬಂದಿ ಪರಶುರಾಮ ಭಜಂತ್ರಿಯವರು ಪುಣೆಯ ಪ್ರಾಣಿ ಸರ್ವೇಕ್ಷಣಾಲಯದ ಡಾ. ಸಮೀರಕುಮಾರ ಪಾಟಿ ಅವರೊಂದಿಗೆ ಸೇರಿ ಈ ಹೊಸ ಕುಲದ ಏಡಿಯನ್ನ ಪತ್ತೆ ಮಾಡಿದ್ದಾರೆ.

ಸಿಹಿ ನೀರಿನ ಏಡಿಯ ಹೊಸ ಕುಲ ಪತ್ತೆ ಕಾರ್ಯ ನಡೆದಿರುವುದು ಕರ್ನಾಟಕದ ಮಟ್ಟಿಗೆ ಇದೇ ಮೊದಲು ಎನ್ನಲಾಗಿದೆ. ‘ಆರಾಧ್ಯ’ ಕುಲದ ಏಡಿಗಳು ಸಿಹಿ ನೀರಿನಲ್ಲಿ ಕಂಡುಬರುವ ಹಾಗೂ ಬಹಳ ಸೌಮ್ಯ ಸ್ವಭಾವದ್ದಾಗಿದೆ ಎಂದು ಸಂಶೋಧನೆಯಲ್ಲಿ ಕಂಡುಬಂದಿದೆ.

ಸಾಮಾನ್ಯವಾಗಿ ಯಾವುದೇ ಏಡಿಗಳನ್ನು ಒಂದು ಕಡೆಯಲ್ಲಿ ಗುಂಪಾಗಿಸಿಟ್ಟರೆ ಅವು ಕೊಂಬುಗಳನ್ನು ಮುರಿದು ಕೊಳ್ಳುವವರೆಗೂ ಹೊಡೆದಾಡಿಕೊಳ್ಳುತ್ತವೆ. ಆದರೆ ಈ ಏಡಿಗಳು ಮಾತ್ರ ಯಾವುದೇ ಆಕ್ರಮಣ ಮಾಡದೆ, ಒಂದು ಜಾಗದಲ್ಲಿ ನಿಶ್ಯಬ್ಧವಾಗಿ ಕುಳಿತುಕೊಂಡಿರುತ್ತವೆ ಎಂಬುದು ಸಂಶೋಧಕರಿಗೆ ತಿಳಿದುಬಂದಿದೆ.

ಮೂಲಗಳ ಪ್ರಕಾರ, ಗುಜರಾತ್ ನಿಂದ ತಮಿಳುನಾಡಿನವರೆಗೆ ಚಾಚಿರುವ ಪಶ್ಚಿಮ ಘಟ್ಟದಲ್ಲಿ ಈವರೆಗೆ 21 ಕುಲದ ಏಡಿಗಳನ್ನು ಪತ್ತೆ ಹಚ್ಚಲಾಗಿದ್ದು, ಯಲ್ಲಾಪುರದಲ್ಲಿ ಪತ್ತೆಯಾದ ‘ಆರಾಧ್ಯಾ ಪ್ಲಾಸಿಡಾ’ 22ನೆಯದ್ದಾಗಿದೆ. ಈವರೆಗೆ 76 ಪ್ರಭೇದದ ಏಡಿಗಳನ್ನ ಪಶ್ಚಿಮ ಘಟ್ಟದಲ್ಲಿ ಸಂಶೋಧನೆ ಮಾಡಲಾಗಿದೆ. ಭಾರತದ 75ನೇ ಏಡಿ ‘ಘಟಿಯಾನ ದ್ವಿ ವರ್ಣ’ದ ನಂತರ 76ನೇ ಪ್ರಭೇದ ‘ವೇಲಾ ಬಾಂಧವ್ಯ’ವನ್ನು ಕೂಡ ಗೋಪಾಲಕೃಷ್ಣ ಹಾಗೂ ಭಜಂತ್ರಿಯವರ ತಂಡ ಕಳೆದ ಎರಡು ವರ್ಷಗಳಲ್ಲಿ ಪತ್ತೆ ಮಾಡಿತ್ತು. ಇದೀಗ 77ನೇ ಹೊಸ ಕುಲ, ಹೊಸ ಪ್ರಭೇದದ ಏಡಿಯನ್ನೂ ಇದೇ ಜೋಡಿ ಪತ್ತೆ ಮಾಡಿರುವುದು ವಿಶೇಷವಾಗಿದೆ.

ಹೊಸ ಕುಲದ ಏಡಿಯ ಕುರಿತಾದ ಸಂಶೋಧನಾ ವರದಿಯು ಪ್ರಾಣಿ ವರ್ಗೀಕರಣ ಶಾಸ್ತ್ರಜ್ಞರಿಗಾಗಿಯೇ ಇರುವ ನ್ಯೂಜೆಲ್ಯಾಂಡ್ ನ ವೈಜ್ಞಾನಿಕ ಸಂಶೋಧನಾ ಜರ್ನಲ್ ‘ಝೂಟಾಕ್ಸಾ’ದಲ್ಲಿ ಪ್ರಕಟಗೊಂಡಿದೆ. ಈ ಕುಲದ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಆಗಬೇಕಿದೆ ಎನ್ನಲಾಗಿದೆ.

Sneha Gowda

Recent Posts

ಇಂದು ರಾಜ್ಯದ ವಿವಿಧೆಡೆ ಮಳೆ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ಚಿಕ್ಕಮಗಳೂರು, ಕೊಡಗು, ಮೈಸೂರು, ಮಂಡ್ಯ, ರಾಮನಗರ ಮತ್ತು ತುಮಕೂರು ಜಿಲ್ಲೆಗಳ ಕೆಲವೆಡೆ ಇಂದು ಮೇ 1ರಂದು ಹಗುರ ಮಳೆಯಾಗುವ…

3 mins ago

ಮುಂಗಾರು ಮಳೆ ಕೊರತೆ: ದುಬಾರಿಯಾದ ತರಕಾರಿ ಬೆಲೆ

ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನರು ಸೂರ್ಯನ ಶಾಖಕ್ಕೆ ತತ್ತರಿಸಿ ಹೋಗಿದ್ದಾರೆ. ಜಾನುವಾರುಗಳು ತತ್ತರಿಸಿದೆ. ಜನರ ಗಂಟಲು ಒಣಗುತ್ತಿದೆ.…

21 mins ago

ಜಮ್ಮು & ಕಾಶ್ಮೀರದ ಅನಂತ್‌ನಾಗ್‌-ರಾಜೌರಿ ಕ್ಷೇತ್ರದ ಮತದಾನ ಮುಂದೂಡಿಕೆ

ಲೋಕಸಭಾ ಚುನಾವಣೆ ಯ ಎರಡು ಹಂತದ ಮತದಾನ ಈಗಾಗಲೇ ಮುಗಿದಿದೆ. ಮೇ 7ರಂದು ಮೂರನೇ ಹಂತದ ಮತದಾನ ನಡೆಯಲಿದೆ. ಈ…

8 hours ago

ಮೇ 01 ರಂದು ಕರ್ನಾಟಕಕ್ಕೆ ಅಮಿತ್​ ಶಾ ಎಂಟ್ರಿ

ಲೋಕಸಭಾ ಚುನಾವಣಾ ಹಿನ್ನಲೆ ಮೊದಲ ಹಂತದ ಮತದಾನ ಈಗಾಗಲೇ ಮುಗಿದಿದ್ದು ಇದೀಗ 2ನೇ ಹಂತದ ಚುನಾವಣೆ ಪ್ರಚಾರ ಭರ್ಜರಿಯಾಗಿ ಸಾಗುತ್ತಿದೆ.ಪ್ರಧಾನಿ…

9 hours ago

ಆಂಪಿಯರ್ ಎಲೆಕ್ಟ್ರಿಕ್ ಕಂಪೆನಿ ಬಿಡುಗಡೆ ಮಾಡುತ್ತಿದೆ ನೆಕ್ಸಸ್ ಇವಿ ಸ್ಕೂಟರ್

ಗ್ರೀವ್ ಕಾಟನ್ ಮಾಲೀಕತ್ವದ ಆಂಪಿಯರ್ ಎಲೆಕ್ಟ್ರಿಕ್ ಕಂಪನಿ ತನ್ನ ಹೊಚ್ಚ ಹೊಸ ನೆಕ್ಸಸ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ…

9 hours ago

ಜೆಡಿಎಸ್ ತೊರೆದ ಮುಖಂಡರು ಕಾಂಗ್ರೆಸ್ ಸೇರ್ಪಡೆ

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಮಠಾಣ, ನಿಜಾಂಪುರ, ಕೊಳಾರ(ಕೆ), ಗೋರನಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಜೆಡಿಎಸ್ ಮುಖಂಡರು ಪಕ್ಷ…

9 hours ago