ವಿಶೇಷ

ಕಾಡ್ಗಿಚ್ಚು ತಡೆಗೆ ಬೆಂಕಿರೇಖೆ ಅಸ್ತ್ರ

ಬಂಡೀಪುರ, ಕುದುರೆಮುಖ, ಮುತ್ತೋಡಿ ಅರಣ್ಯ ಪ್ರದೇಶ ಸೇರಿದಂತೆ ರಾಜ್ಯದ ವಿವಿಧ ಅಭಯಾರಣ್ಯ, ಮೀಸಲು ಅರಣ್ಯಪ್ರದೇಶಗಳ‌ಲ್ಲಿ ಪ್ರತಿವರ್ಷ ಬೇಸಿಗೆ ಆರಂಭವಾದ ಕೂಡಲೇ ಕಾಡ್ಗಿಚ್ಚು ಹರಡಿ ಲಕ್ಷಾಂತರ ಸರಸೃಪಗಳು, ವಿವಿಧ ಸಸ್ತನಿಗಳು ಸೇರಿದಂತೆ ಮೂಕಪ್ರಾಣಿಗಳು ಪ್ರಾಣಕಳೆದುಕೊಳ್ಳುವ ಘಟನೆ ಪರಿಸರ ಪ್ರಿಯರು, ಅರಣ್ಯ ಇಲಾಖೆಗೆ ಚಿಂತೆಗೀಡು ಮಾಡುತ್ತಿತ್ತು. ಆದರೆ ಪ್ರಸಕ್ತ ವರ್ಷ ಡಿಸೆಂಬರ್‌, ಜನವರಿ ವೇಳೆ ಸುರಿದ ಮಳೆ, ಅರಣ್ಯ ಇಲಾಖೆಯ ಸಕಾಲಿಕ ಕ್ರಮದಿಂದ ಅರಣ್ಯ ಸೇರಿದಂತೆ ಅಪರೂಪದ ವನ್ಯ ಸಂಪತ್ತು ನಾಶವಾಗುವುದು ತಪ್ಪಿದೆ.

ಬೆಂಕಿ ರೇಖೆ ನಿರ್ಮಾಣ: ಅರಣ್ಯ ಪ್ರದೇಶದ ಬಂಡೆಗಳ ಮೇಲೆ ಗೊರಸು ಹೊಂದಿರುವ ಪ್ರಾಣಿಗಳು ಓಡಾಟ ನಡೆಸುವಾಗ ಕಿಡಿಗಳು ಉಂಟಾಗಿ ಕಾಡ್ಗಿಚ್ಚು ಉಂಟಾಗುವ ಸಂಭವ ಇರುತ್ತದೆ. ಈ ನಿಟ್ಟಿನಲ್ಲಿ ಬೆಳ್ತಂಗಡಿ ಸೇರಿದಂತೆ ರಾಜ್ಯದ ವಿವಿಧ ಅರಣ್ಯ ಪ್ರದೇಶದ ಸೂಕ್ಷ್ಮ ಸ್ಥಳಗಳಲ್ಲಿ ಫೈರ್‌ ಲೈನ್‌ ನಿರ್ಮಾಣ ಕಾರ್ಯ ನಡೆದಿದೆ. ಜನವರಿಯಿಂದ ಮುಂಗಾರು ಆರಂಭದವರೆಗೆ ಅರಣ್ಯದಲ್ಲಿ ಬೆಂಕಿ ಹರಡುವ ಅಪಾಯ ಹೆಚ್ಚಿರುತ್ತದೆ. ವನ್ಯಜೀವಿ ವಿಭಾಗವಲ್ಲದೆ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ರಸ್ತೆಗಳಾದ ಚಾರ್ಮಾಡಿ ಘಾಟಿ ರಸ್ತೆ, ನಿಡಿಗಲ್‌ ಮೊದಲಾದ ಪ್ರದೇಶಗಳಲ್ಲಿಯೂ ಬೆಂಕಿ ರೇಖೆ ನಿರ್ಮಾಣ ನಡೆದಿದೆ.

ಬೆಳ್ತಂಗಡಿ ಭಾಗದಲ್ಲಿ ಕಡಿರುದ್ಯಾವರ ಗ್ರಾಮದ ಬಂಡಾಜೆ ಫಾಲ್ಸ್‌ನಿಂದ ಬಲ್ಲಾಳರಾಯನ ದುರ್ಗ, ರಾಣಿಝರಿವರೆಗೆ ಬೆಂಕಿ ರೇಖೆ ನಿರ್ಮಾಣ ಮಾಡಲಾಗಿದೆ. ಮೊಬೈಲ್‌ ಸೇರಿದಂತೆ ಯಾವುದೇ ಸಂಪರ್ಕ ಸಾಧನ ಬಳಕೆಗೆ ಬರದ ಪ್ರದೇಶಗಳಲ್ಲಿಯೂ ಅರಣ್ಯ ಇಲಾಖೆ ಸಿಬ್ಬಂದಿ ಟೆಂಟ್‌ ನಿರ್ಮಾಣ ಮಾಡಿ ಕಾರ್ಯ ನಡೆಸಿದ್ದಾರೆ. ಅದೇ ಪ್ರಕಾರ ಎಳನೀರು, ದಿಡುಪೆಗಳಲ್ಲಿಯೂ ಬೆಂಕಿರೇಖೆ ನಿರ್ಮಾಣ ನಡೆದಿದೆ.

2019ರಲ್ಲಿ ಬಂಡೀಪುರದಲ್ಲಿ ಭೀಕರ ದುರಂತ: 2019 ಫೆಬ್ರವರಿಯಲ್ಲಿ ಹುಲಿ ಸಂರಕ್ಷಿತ ಅರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡು 4 ಸಾವಿರ ಹೆಕ್ಟೇರ್‌ ಅರಣ್ಯಪ್ರದೇಶ ನಾಶವಾಗಿತ್ತು. ಅಲ್ಲದೆ ಸಹಸ್ರಾರು ಅಪರೂಪದ ಸರಿಸೃಪ, ಪ್ರಾಣಿ ಪಕ್ಷಿಗಳು ಬೆಂಕಿಯಲ್ಲಿ ಬೆಂದುಹೋಗಿದ್ದವು.

ಶೇ 22ರಷ್ಟು ಅರಣ್ಯ: ಅರಣ್ಯ ಇಲಾಖೆಯ ಅಧಿಕೃತ ದಾಖಲೆ ಪ್ರಕಾರ ರಾಜ್ಯದಲ್ಲಿ ಒಟ್ಟು 43,356 ಚದರ ಕಿ. ಮೀ ವಿಸ್ತೀರ್ಣದಲ್ಲಿ ಅರಣ್ಯ ಪ್ರದೇಶ ಹರಡಿಕೊಂಡಿದೆ. ಅಂದರೆ ಇದು ಒಟ್ಟು ಭೌಗೋಳಿಕ ಪ್ರದೇಶದ ಶೇ 22ರಷ್ಟಿದೆ.

ಮುಂಗಾರು ಮಳೆ ಆರಂಭಗೊಳ್ಳುವ (ಮೇ ಕೊನೆಯವರೆಗೆ) ಅರಣ್ಯದಲ್ಲಿ ಕಾಡ್ಗಿಚ್ಚು ಹರಡಂತೆ ತಡೆಯುವುದು ಮಹತ್ತರ ಕಾರ್ಯ. ಇದಕ್ಕಾಗಿ ಅರ‌ಣ್ಯದಂಚಿನ ಪ್ರದೇಶ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಜಾಗೃತಿಗಾಗಿ ಬೀದಿ ನಾಟಕಗಳನ್ನು ಆಯೋಜಿಸಲಾಗುತ್ತಿದೆ. 8 ರೇಂಜಗಳಲ್ಲಿರುವ ರಸ್ತೆ, ಸೂಕ್ಷ್ಮ ಪ್ರದೇಶಗಳಲ್ಲಿ ಫೈರ್‌ಲೈನ್‌ ಹಾಕುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಕೆಲಸ ಪೂರ್ಣಗೊಂಡ ಬಳಿಕ ಮರುಪರಿಶೀಲನೆ ಆರಂಭಿಸಲಾಗುವುದು. ಡಿಸೆಂಬರ್‌ ಕೊನೆ ವಾರದಲ್ಲಿ ಮಳೆಯಾಗಿರುವುದು ಪ್ರಾಣಿ ಸಂಕುಲ ಸೇರಿದಂತೆ ಅರಣ್ಯ ರಕ್ಷಣೆಗೆ ನೆರವಾಗಿದೆ.
-ದಿನೇಶ್‌ ಡಿಸಿಎಫ್‌ ಮಂಗಳೂರು

ಉಪಗ್ರಹ ಮೂಲಕ ಕರ್ನಾಟಕದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಉಂಟಾಗುವ ಬೆಂಕಿ ಅವಘಡ ಮಾಹಿತಿ ಕಲೆಹಾಕುವ ವ್ಯವಸ್ಥೆ ಇದೆ. ಈ ಮೂಲಕ ಅರಣ್ಯದೊಳಗೆ ಬೆಂಕಿ, ಹೊಗೆ ಕಂಡುಬಂದ ತಕ್ಷಣ ಅರಣ್ಯ ಕಚೇರಿಗಳಿಗೆ ಮಾಹಿತಿ ರವಾನೆ ಆಗುತ್ತದೆ. ಅರಣ್ಯ ಇಲಾಖೆ ಬೆಂಕಿ ಅನಾಹುತ ಉಂಟಾಗುವ ಸಂಭಾವ್ಯ ಸ್ಥಳಗಳನ್ನು ಗುರುತಿಸಿದೆ. ಈ ಸ್ಥಳಗಳಲ್ಲಿ ಅಗ್ನಿ ಅವಘಡ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸುತ್ತದೆ. ಅಲ್ಲದೆ ವಿವಿಧ ತಂಡಗಳನ್ನು ರಚಿಸಿ ಬೆಂಕಿ ರೇಖೆ ನಿರ್ಮಾಣ ಮಾಡಿದೆ. ಅರಣ್ಯ ರಕ್ಷಣೆಗೆ ಕಾಡಂಚಿನ ಜನರ ಸಹಕಾರ ಅತೀ ಅಗತ್ಯ.
-ಸ್ವಾತಿ ‌ಆರ್‌ಎಫ್‌ಒ
ಕುದುರೆಮುಖ ವನ್ಯಜೀವ ವಿಭಾಗ ಬೆಳ್ತಂಗಡಿ ವಲಯ

Gayathri SG

Recent Posts

40 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟ ಗೆಲ್ಲಲಿದೆ: ಡಿ.ಕೆ.ಶಿವಕುಮಾರ್

ಉತ್ತರ ಪ್ರದೇಶದಲ್ಲಿ 40 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟ ಗೆಲ್ಲಲಿದೆ. ದೇಶದೆಲ್ಲೆಡೆ ಕಾಂಗ್ರೆಸ್ ಪಕ್ಷ ಹಾಗೂ ಇಂಡಿಯಾ ಮೈತ್ರಿಕೂಟದ…

7 mins ago

ಕೇಜ್ರಿವಾಲ್ ನಿವಾಸದಲ್ಲಿ ಸ್ವಾತಿ ಮಲಿವಾಲ್ ಜಗಳದ ವಿಡಿಯೋ ತುಣುಕು ವೈರಲ್

ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ನಗರದ ಸಿವಿಲ್ ಲೈನ್ಸ್‌ನಲ್ಲಿರುವ ದೆಹಲಿ…

17 mins ago

ಕೇಜ್ರಿವಾಲ್‌ ನಾಚಿಕೆಯಿಲ್ಲದೇ ಆರೋಪಿ ಬಿಭವ್‌ ಕುಮಾರ್‌ ಜೊತೆ ತಿರುಗಾಟ: ನಿರ್ಮಲಾ ಸೀತಾರಾಮನ್‌

ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆಯನ್ನು ಖಂಡಿಸಿ ಮಾತನಾಡದ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಕೇಂದ್ರ ಹಣಕಾಸು ಸಚಿವೆ…

18 mins ago

ಈಜಲು ಹೋಗಿ‌ದ್ದ ಮೂವರು ನೀರುಪಾಲು: 5 ಜನ ಪ್ರಾಣಾಪಾಯದಿಂದ ಪಾರು

ಈಜಲು ಹೋಗಿ‌ದ್ದ ಮೂವರು ನೀರುಪಾಲಾಗಿರುವ ಘಟನೆ ರಾಮನಗರ ತಾಲೂಕಿನ ಅಚ್ಚಲು ಗ್ರಾಮದ ಬಳಿ ನಡೆದಿದೆ.

41 mins ago

“ಪಟ್ಲ ಸಂಭ್ರಮ” ಯಶಸ್ವಿಗೊಳಿಸಲು ಪಟ್ಲ ಸತೀಶ್ ಶೆಟ್ಟಿ ಕರೆ

ಮೇ 26 ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯುವ "ಪಟ್ಲ ಸಂಭ್ರಮ" ನಮ್ಮೆಲ್ಲರ ಮನೆಯ ಕಾರ್ಯಕ್ರಮ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪಟ್ಲ…

51 mins ago

ಮಂಗಳೂರು: ಕರ್ತವ್ಯದಲ್ಲಿದ್ದ ವಾಹನದ ಬಗ್ಗೆ ಸುಳ್ಳು ಸಂದೇಶ ರವಾನಿಸಿದ ಸಾರ್ವಜನಿಕ

ಕಳೆದ ದಿನ (ಮೇ 16) ಸಂಜೆ ಮಂಗಳೂರು ನಗರದ ಕುಂಟಿಕಾನ ಬಳಿ ಕರ್ತವ್ಯದಲ್ಲಿದ್ದ ಕೆಎ-19-ಜಿ-1023 ನೊಂದಣೆ ಸಂಖ್ಯೆಯ ಹೆದ್ದಾರಿ ಗಸ್ತು…

56 mins ago