News Karnataka Kannada
Monday, April 22 2024
Cricket
ಅಂಕಣ

ಕಾಂತಿಯುತ ತ್ವಚೆ ಪಡೆಯಲು ಬಳಸಿ ನೆಲ್ಲಿಕಾಯಿ ಫೇಸ್ ಪ್ಯಾಕ್

Use amla face pack to get glowing skin
Photo Credit : Freepik

ಯುವತಿಯರು ತ್ವಚೆ ಸುಂದರವಾಗಿ ಕಾಣಬೇಕು ಎಂದು ಇಚ್ಛೆ ಪಡುವುದು ಸಾಮಾನ್ಯ ವಿಚಾರ. ಈ ಒಂದು ಆಲೋಚನೆಯಿಂದ ಕೆಲವು ಯುವತಿಯರು ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆಯ ಕ್ರೀಂಗಳನ್ನು ಬಳಕೆ ಮಾಡುತ್ತಾರೆ. ಇದು ಕೆಲವೊಮ್ಮೆ ಉತ್ತಮ ರಿಸಲ್ಟ್ ಕೊಡಬಹುದು. ಇನ್ನೂ ಕೆಲವೊಮ್ಮೆ ಅಡ್ಡ ಪರಿಣಾಮಗಳನ್ನು ಬೀರಬಹುದು. ಏಕೆಂದರೆ ಕೆಲವೊಂದು ಸ್ಕಿನ್ ಕ್ರೀಮ್ ಗಳು ಎಲ್ಲರ ತ್ವಚೆಗೆ ಧನಾತ್ಮಕ ಫಲಿತಾಂಶ ಕೊಡುವುದಿಲ್ಲ. ಕೆಲವರಿಗೆ ಋಣಾತ್ಮಕ ಫಲಿತಾಂಶನೂ ಕೊಡಬಹುದು. ಆದ್ದರಿಂದ ಇಂತಹ ಸಮಸ್ಯೆಗಳಿಂದ ದೂರ ಉಳಿಯಲು ಇಲ್ಲಿದೆ ಕೆಲವೊಂದು ಬ್ಯೂಟಿ ಟಿಪ್ಸ್. ತ್ವಚೆಯ ಅಂದ ಹೆಚ್ಚಿಸಿಕೊಳ್ಳಲು ಮತ್ತು ಕಾಂತಿಯುತವಾಗಿ ಹೊಳೆಯುವಂತೆ ಮಾಡಲು ನೆಲ್ಲಿಕಾಯಿ ಫೇಸ್ ಪ್ಯಾಕ್, ಫೇಸ್ ಸ್ಕ್ರಬ್ ಸಹಕಾರಿಯಾಗಿದೆ.

ನೆಲ್ಲಿಕಾಯಿ ಫೇಸ್ ಪ್ಯಾಕ್ ಮಾಡಲು ಮೊದಲಿಗೆ, ಸ್ವಲ್ಪ ಮೊಸರು, ನೆಲ್ಲಿಕಾಯಿಯ ತಿರುಳಿನ ಪೇಸ್ಟ್ ಮತ್ತು ಜೇನು ತುಪ್ಪ ಸೇರಿಸಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಹಾಗೆ ಒಣಗಲು ಬಿಡಿ ನಂತರ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ ಹೀಗೆ ಮಾಡುವುದರಿಂದ ಮುಖದ ಮೇಲಿನ ಕಲೆಗಳು ಮಾಯವಾಗುತ್ತವೆ.

ನೆಲ್ಲಿಕಾಯಿ ತಿರುಳನ್ನು ಗ್ರೈನ್ ಮಾಡಿ ಅಥವಾ ಚೆನ್ನಾಗಿ ಜಜ್ಜಿಕೊಳ್ಳಿ ಈಗ ತಯಾರಾದ ಪೇಸ್ಟ್’ಗೆ ಸಕ್ಕರೆ, ರೋಸ್ ವಾಟರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಮುಖಕ್ಕೆ ಹಚ್ಚಿಕೊಂಡು ಸ್ಮಬ್ ಮಾಡಿ. ನಂತರ ಸ್ವಲ್ಪ ಸಮಯ ಹಾಗೆ ಬಿಟ್ಟು ಶುದ್ಧ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಕಾಂತಿಯುತ ತ್ವಚೆ ಪಡೆಯಲು ಈ ಫೇಸ್ ಪ್ಯಾಕ್ ಟ್ರೈ ಮಾಡಿ, ಮೊದಲಿಗೆ ನೆಲ್ಲಿಕಾಯಿ ಅನ್ನು ಚೆನ್ನಾಗಿ ಜಜ್ಜಿ ರಸ ತೆಗೆದು ಅದಕ್ಕೆ ಪಪ್ಪಾಯಿ ಹಣ್ಣಿನ ಪೇಸ್ಟ್ ಮಿಶ್ರಣ ಮಾಡಿ ನಂತರ ಮುಖ ಮತ್ತು ಕುತ್ತಿಗೆಗೆ ಹಚ್ಚಿ ಸ್ವಲ್ಪ ಸಮಯದ ನಂತರ ತಣ್ಣೀರಿನಲ್ಲಿ ತೊಳೆದುಕೊಳ್ಳಿ.

ನೆಲ್ಲಿಕಾಯಿಯ ಹುಡಿಗೆ ಸಕ್ಕರೆ ಮತ್ತು ರೋಸ್ ವಾಟರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮುಖಕ್ಕೆ ಮತ್ತು ಕುತ್ತಿಗೆ ಭಾಗಕ್ಕೆ ಹಚ್ಚಿ ಸ್ಕ್ರಬ್ ಮಾಡಿ ನಂತರ ಸ್ವಲ್ಪ ಸಮಯ ಹಾಗೆ ಬಿಟ್ಟು ತಣ್ಣೀರಿನಿಂದ ಮುಖ ತೊಳೆಯಿರಿ. ಹೀಗೆ ಮಾಡುವುದರಿಂದ ಮುಖದ ಹೊಳಪು ಹೆಚ್ಚುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು