News Karnataka Kannada
Monday, April 29 2024
ಅಂಕಣ

ಸುಂದರ ಕಾಂತಿಯುತ ತ್ವಚೆಗಾಗಿ ಚೆಂಡು ಹೂವಿನ ಫೇಸ್ ಪ್ಯಾಕ್

marigold face pack for beautiful glowing skin
Photo Credit : Freepik

ಸುಂದರವಾಗಿ ಕಾಣಬೇಕು ಎಂದು ಸಾಮಾನ್ಯವಾಗಿ ಎಲ್ಲರು ಇಚ್ಛೆ ಪಡುವಂತಹ ವಿಚಾರ. ಅದಕ್ಕಾಗಿ ನಾವು ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆಯ ಸ್ಕಿನ್ ಕ್ರೀಂಗಳನ್ನು ಹಚ್ಚಿಕೊಳ್ಳುತ್ತಾ ಇದ್ದರೆ, ಅದರಿಂದ ಅಡ್ಡ ಪರಿಣಾಮವೇ ಜಾಸ್ತಿ. ಅದರ ಬದಲು ನಾವು ಚೆಂಡು ಹೂವಿನ ಫೇಸ್ ಪ್ಯಾಕ್ , ಫೇಸ್ ಮಾಸ್ಕ್ ನಿಂದ ನಮ್ಮ ಸೌಂದರ್ಯವನ್ನು ಹೆಚ್ಚಿಸ ಬಹುದು. ಹೇಗೆ ಎಂಬುದನ್ನು ತಿಳಿದುಕೊಳ್ಳೊಣ.

ಈ ಚೆಂಡು ಹೂವಿನ ಫೇಸ್ ಪ್ಯಾಕ್ ಮಾಡಲು, ಮೊದಲಿಗೆ ಚೆಂಡು ಹೂವಿನ ಎಸಳುಗಳನ್ನು ಗ್ರೈನ್ ಮಾಡಿ ಪೇಸ್ಟ್ ತಯಾರಿಸಿಕೊಂಡು ನಂತರ ಅದಕ್ಕೆ ಮೊಸರು, ಜೇನುತುಪ್ಪ, ಲಿಂಬೆರಸ, ಶ್ರೀಗಂಧದ ಹುಡಿ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ. ತದನಂತರ ನೀರಿನಿಂದ ಮುಖ ತೊಳೆದು, ಈ ಪ್ಯಾಕ್ ಅನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿ, ಸ್ವಲ್ಪ ಸಮಯ ಹಾಗೆ ಒಣಗಲು ಬಿಡಿ. ನಂತರ ಶುದ್ಧ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಹೀಗೆ ಕ್ರಮೇಣ ಮಾಡುವುದರಿಂದ ಉತ್ತಮ ರಿಸಲ್ಟ್ ಪಡೆಯಬಹುದು.

ಚೆಂಡು ಹೂವಿನ ಎಸಳುಗಳನ್ನು ಗ್ರೈನ್ ಮಾಡಿ ಅದಕ್ಕೆ ಮೊಸರು ಮತ್ತು ತುರಿದ ಕ್ಯಾರೆಟ್ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಕಾಂತಿ ಕ್ರಮೇಣ ಹೆಚ್ಚಾಗುತ್ತದೆ .

ಚೆಂಡು ಹೂವಿನ ಎಸಳುಗಳನ್ನು ಜಜ್ಜಿ ಪೇಸ್ಟ್‌ ಮಾಡಿಕೊಳ್ಳಿ, ನಂತರ ಅದಕ್ಕೆ ಮೊಸರು, ನಿಂಬೆ ರಸ, ರೋಸ್ ವಾಟರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ ಸ್ವಲ್ಪ ಸಮಯದ ಬಳಿಕ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ. ಎಣ್ಣೆ ಯುಕ್ತ ಚರ್ಮ ಇರುವವರು ಈ ಫೇಸ್ ಪ್ಯಾಕ್ ಟ್ರೈ ಮಾಡಿದರೆ ಉತ್ತಮ ರಿಸಲ್ಟ್ ಪಡೆಯಬಹುದು.

ಚೆಂಡು ಹೂವಿನ ಎಲೆಗಳನ್ನು ಪುಡಿಮಾಡಿ, ಪೇಸ್ಟ್ ತಯಾರಿಸಿಕೊಂಡು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯ ಹಾಗೆ ಬಿಟ್ಟು ನಂತರ ಶುದ್ಧ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.

ತ್ವಚೆ ಕಾಂತಿಯುತವಾಗಿ ಹೊಳೆಯುವಂತೆ ಮಾಡಲು ಈ ಫೇಸ್ ಪ್ಯಾಕ್ ಟ್ರೈ ಮಾಡಿ, ಮೊದಲಿಗೆ ಚೆಂಡು ಹೂವಿನ ಎಸಳುಗಳು, ರೋಸ್ ವಾಟರ್, ಸಿಪ್ಪೆ ತೆಗೆದ ಸೇಬಿನ ತುಂಡುಗಳನ್ನು ( ಅಂದಾಜು ಪ್ರಮಾಣದಲ್ಲಿ) ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಂತರ ತಯಾರಿಸಿದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಹಾಗೆ ಒಣಗಲು ಬಿಡಿ ನಂತರ ಚೆನ್ನಾಗಿ ಸ್ವಚ್ಛ ನೀರಿನಿಂದ ಮುಖ ತೊಳೆದುಕೊಳ್ಳಿ ಹೀಗೆ ಕ್ರಮೇಣ ಮಾಡಿದರೆ ಉತ್ತಮ ರಿಸಲ್ಟ್ ಪಡೆಯಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು