News Karnataka Kannada
Tuesday, April 30 2024
ಅಂಕಣ

ಟ್ರೆಂಡಿ ಲುಕ್ ಗಾಗಿ ಧರಿಸಿ ಕುರ್ತಿ

Kurti worn for a trendy look
Photo Credit :

ಬಟ್ಟೆಗಳ ಟ್ರೆಂಡ್ಗಳು ಬದಲಾಗುತ್ತಾ ಇರುತ್ತದೆ. ಅದಕ್ಕೆ ತಕ್ಕಂತೆ ಇಂದಿನ ಯುವ ಪೀಳಿಗೆ ಬದಲಾವಣೆಗೆ ಒಗ್ಗಿಕೊಂಡು ಮುಂದೆ ಸಾಗುತ್ತಾರೆ. ಆದರೆ ಎಲ್ಲಾ ಕಾಲಕ್ಕೂ ಸಲ್ಲುವಂತಹ ಒಂದು ಉಡುಪು ಅಂದ್ರೆ ಅದು ಕುರ್ತಿ. ಅದೆಷ್ಟೇ ಹೊಸ ಹೊಸ ಟ್ರೆಂಡ್‌ಗಳು ಬಂದರೂ, ಸೀರೆ ಹೇಗೆ ತನ್ನ ಸ್ಥಾನವನ್ನು ಬಿಟ್ಟು ಕೊಡಲಿಲ್ಲವೋ ಅದೇ ರೀತಿ, ಕುರ್ತಿಯು ಸರ್ವಕಾಲಕ್ಕೂ ಸೂಕ್ತವಾಗಿದೆ.

ಸಾಮಾನ್ಯವಾಗಿ ಕುರ್ತಾಗಳು ಮಹಿಳೆಯರು ಅತೀ ಹೆಚ್ಚು ಇಷ್ಟ ಪಡುವಂತಹ ಉಡುಗೆ. ಏಕೆಂದರೆ ಇದು ಎಲ್ಲಾ ಸಂದರ್ಭಗಳಲ್ಲಿ, ಎಲ್ಲಾ ಸಮಯದಲ್ಲೂ ಧರಿಸಲು ಸೂಕ್ತವಾಗಿದೆ.

ಕುರ್ತಿ ಪ್ಯಾಷನ್ ಗು ಸೈ ಸಂಪ್ರದಾಯಿಕವಾಗಿಯು ಸೈ ಎನಿಸಿ ಕೊಂಡಿದೆ. ಇನ್ನು ಕುರ್ತಿಗೆ ಸಾಂಪ್ರದಾಯಿಕ ಲುಕ್ ನೀಡಲು ಕುರ್ತಿಯ ಮೇಲೆ ಶ್ರಗ್ ಗಳನ್ನು ಧರಿಸಬಹುದು.

ಇನ್ನು ಕುರ್ತಿಯೊಂದಿಗೆ ಜಿನ್ಸ್ ಧರಿಸುವುದು ಎಲ್ಲಾ ಕಾಲಕ್ಕೂ ಹೊಂದುವಂತಹ ಸ್ಟೈಲ್ ಆಗಿದೆ. ಕುರ್ತಿ ಉದ್ದವಾಗಿದ್ದರೂ,‌ ಅಥವಾ ಚಿಕ್ಕದಾಗಿದ್ದರೂ ಉತ್ತಮವಾಗಿ ಕಾಣುವುದು. ಸಮಕಾಲೀನ ಶೈಲಿಗಾಗಿ, ಅನೇಕ ಯುವತಿಯರು ಕುರ್ತಿ ಯೊಂದಿಗೆ ಜೀನ್ಸ್ ಧರಿಸಲು ಬಯಸುತ್ತಾರೆ. ಈ ಸ್ಟೈಲ್ ಸಿನಿಮಾ ತಾರೆಯರು ಹೆಚ್ಚಾಗಿ ಫಾಲೋ ಮಾಡುತ್ತಾರೆ.

ನಿಮ್ಮ ಜೀನ್ಸ್ ಪ್ಯಾಂಟ್‌ನೊಂದಿಗೆ ಮ್ಯಾಚ್ ಮಾಡಲು, ಯಾವುದೇ ಬಣ್ಣದ ಕುರ್ತಿ ಆರಿಸಿ. ನಿಮ್ಮ ಪಾದದ ಬಳಿ ಪ್ಯಾಂಟ್ ಅನ್ನು ಮಡಚುದರಿಂದ ವೆಸ್ಟರ್ನ್ ವೇರ್ ನ ಟಚ್ ಕೊಡುತ್ತದೆ.

ಜೀನ್ಸ್ ಕೋಟ್ಗಳು ಈ ದಿನಗಳಲ್ಲಿ ಬಹಳ ಫ್ಯಾಶನ್ ಆಗಿದ್ದು, ಇದನ್ನು ವಿವಿಧ ರೀತಿಯಲ್ಲಿ ಧರಿಸಬಹುದು. ಇದರಿಂದ ನೀವು ಸಾಕಷ್ಟು ಟ್ರೆಂಡಿಯಾಗಿ ಕಾಣಲು ಚಿಕ್ಕ ಕುರ್ತಿಯೊಂದಿಗೆ ಧರಿಸಿ. ಜೀನ್ಸ್ ಕೋಟ್ಗಳು ಬಿಳಿ, ಕಪ್ಪು ಕುರ್ತಿಗೆ ಉತ್ತಮವಾಗಿ ಕಾಣುತ್ತದೆ.

ಇನ್ನು ಕುರ್ತಿಯೊಂದಿಗೆ ಶರಾರ ಪ್ಯಾಂಟ್ ಧರಿಸುವುದು ಮತ್ತು ಪ್ಲಾಜೋ ಪ್ಯಾಂಟ್ ಧರಿಸುವುದು ಕೂಡ ಟ್ರೆಂಡಿ ಲುಕ್ ನೀಡುತ್ತದೆ. ಇದನ್ನು ಸಾಮಾನ್ಯವಾಗಿ ಎಲ್ಲಾ ವಯಸ್ಸಿನ ಮಹಿಳೆಯರು ಧರಿಸುತ್ತಾರೆ ಮತ್ತು ಎಲ್ಲಾ ವಯೋಮಾನದ ಮಹಿಳೆಯರಿಗೂ ಸೂಕ್ತ ಎಂದೆನಿಸಿಕೊಂಡಿದೆ.

ಇನ್ನು ಕುರ್ತಿಯೊಂದಿಗೆ ಸ್ಕರ್ಟ್ ಗಳನ್ನು ಧರಿಸ ಬಹುದು. ಜೊತೆಗೆ ದುಪ್ಪಟ್ಟವನ್ನು ಧರಿಸಿದರೆ ಟ್ರೆಂಡಿ ಲುಕ್ ನೀಡುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು