News Karnataka Kannada
Monday, April 29 2024
ವಿಶೇಷ

ಬದನೆಕಾಯಿ ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

Here's some information about the eggplant crop
Photo Credit : Pixabay

ಬದನೆಕಾಯಿ ಒಂದು ಜನಪ್ರಿಯ ತರಕಾರಿಯಾಗಿದ್ದು, ಪ್ರಪಂಚದಾದ್ಯಂತ ಇದನ್ನ ವಿವಿಧ ರೀತಿಯ ಅಡುಗೆ ತಯಾರಿಸಲು ಬಳಸುತ್ತಾರೆ. ಆಂಗ್ಲ ಭಾಷೆಯಲ್ಲಿ ಇದನ್ನ ಬ್ರಿಂಜಾಲ್ ಅಥವಾ ಎಗ್ ಪ್ಲಾಂಟ್ ಎಂದು ಕರೆಯುವ ಬದನೆಕಾಯಿಯು ಸೋಲನೆಸಿ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ.

ಈ ಬದನೆ ಸಸ್ಯವು ಮೂಲವಾಗಿ ಭಾರತ ಮತ್ತು ಚೀನಾದಲ್ಲಿ ಬೆಳೆಯಲಾಗಿತ್ತು ಎನ್ನ ಲಾಗುತ್ತಿದೆ. ಅರಬ್ ವ್ಯಾಪಾರಿಗಳು ಬದನೆಕಾಯಿಯನ್ನು ಇರಾನ್ ಈಜಿಪ್ಟ್ ಹಾಗೂ ಆಫ್ರಿಕಾಕು ಕೊಂಡೊಯ್ದಿದ್ದರು.

ಬದನೆಕಾಯಿ ಗಿಡಗಳು ಸುಮಾರು 1 ರಿಂದ 2.5 ಮೀಟರ್ ಎತ್ತರ ಬೆಳೆಯುವ ವಾರ್ಷಿಕ ಸಸ್ಯವಾಗಿದ್ದು. ಬಹುಕಾಂಡದ ಸಸ್ಯವಾಗಿದೆ.

ಬದನೆ ಉತ್ಪಾದನೆ ಬೇಕಾದ ಹವಾಮಾನ : ಬದನೆಯು ಬೆಚ್ಚಗಿನ ಋತುವಿನ ಬೆಳೆಯಾಗಿದೆ. ಇದು ಹಿಮವನ್ನು ಸಹಿಸುವುದಿಲ್ಲ ಹೆಚ್ಚು ಉಷ್ಣತೆ ಇರುವ ದೀರ್ಘಾವಧಿಯ ದಿವಸಗಳಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ ಬದನೆ ಬೀಜ ಮೊಳೆಯಲು ಸುಮಾರು.250cm ಉಷ್ಣತೆ ಉತ್ತಮ. ಭಾರತದಲ್ಲಿ ಎಲ್ಲಾ ಹವಾಗುಣದಲ್ಲೂ ಇದರ ಬೇಸಾಯ ಉತ್ತಮವಾಗಿ ಮಾಡಬಹುದು. ಈ ಬದನೆಕಾಯಿ ಬೆಳೆಗೆ 13 ಡಿಗ್ರಿ ಸೆಲ್ಸಿಯಸ್ ನಿಂದ 21 ಡಿಗ್ರಿ ಸೆಲ್ಸಿಯಸ್ ವರೆಗಿನ ದೈನಂದಿನ ಸರಾಸರಿ ತಾಪಮಾನವು ಉತ್ತಮವಾಗಿರುತ್ತದೆ.

ಬದನೆ ಕೃಷಿಗೆ ಮಣ್ಣಿನ ಅವಶ್ಯಕತೆ: ಬದನೆ ಕೃಷಿಯನ್ನು ವಿವಿಧ ಮಣ್ಣಿನಲ್ಲಿ ಬೇಸಾಯ ಮಾಡಬಹುದು. ಆದರೆ ಇದು ಯಾವುದೇ ಹಂತದಲ್ಲಿ ಜೌಗು ಮಣ್ಣನ್ನು ಸಹಿಸುವುದಿಲ್ಲ. ಮುಖ್ಯವಾಗಿ ಬದನೆ ಗಿಡಗಳಿಗೆ ತಿಳಿ ಮರಳಿನಿಂದ ಭಾರವಾದ ಜೇಡಿ ಮಣ್ಣಿನವರೆಗೂ ಎಲ್ಲ ರೀತಿಯ ಮಣ್ಣಿನಲ್ಲಿ ಬೆಳೆಯಬಹುದು.

ಇನ್ನು ನಾಟಿ ಮಾಡುವ ಸಮಯದಲ್ಲಿ ಸಸಿಗಳನ್ನು ನಾಟಿ ಮಾಡುವ ಮೊದಲು ನಾಲ್ಕರಿಂದ ಐದು ಬಾರಿ ಉಳುಮೆ ಮಾಡುವ ಮೂಲಕ ಮಣ್ಣನ್ನ ಸಂಪೂರ್ಣವಾಗಿ ತಯಾರಿಸಬೇಕಾಗುತ್ತದೆ. ಬದನೆಕಾಯಿ ಇತರ ತರಕಾರಿಗಳಿಗಿಂತ ಹೆಚ್ಚು ಆಳವಾಗಿ ಬೇರು ಬಿಡುವುದರಿಂದ ಭೂಮಿಯನ್ನು ಹೆಚ್ಚು ಆಳವಾಗಿ ಉಳುಮೆ ಮಾಡಬೇಕಾಗುತ್ತದೆ.

ನಾಟಿ ಮಾಡಿದ 2 ತಿಂಗಳ ನಂತರ ಹೂವು ಅರಳಲು ಆರಂಭವಾಗುತ್ತದೆ. ಹೂ ಬಿಟ್ಟ 2 ರಿಂದ 3 ವಾರಗಳಲ್ಲಿ ಸಣ್ಣದಾಗಿ ಕಾಯಿ ಕಾಣಲು ಶುರುವಾಗುತ್ತದೆ. ಅದಾದ ಎರಡುವರೆ ತಿಂಗಳಲ್ಲಿ ಫಸಲು ಕೊಯ್ಲಿಗೆ ಸಿದ್ಧವಾಗುತ್ತದೆ.

ಬದನೆ ಕೃಷಿಗೆ ನೀರಿನ ಅವಶ್ಯಕತೆ : ಬೆಳೆ ಅಗತ್ಯಕ್ಕೆ ತಕ್ಕಂತೆ ಹೊಲಕ್ಕೆ ನೀರು ಹಾಕುವುದು ಉತ್ತಮ. ಉತ್ತಮ ಬೆಳವಣಿಗೆ ಹೂಡುವಿಕೆ ಹಣ್ಣುಗಳು ಮತ್ತು ಹಣ್ಣುಗಳ ಬೆಳವಣಿಗೆಗೆ ಸಕಾಲಿಕ ನೀರಾವರಿ ಸಾಕಷ್ಟು ಅವಶ್ಯಕತೆ ಆಗಿರುತ್ತದೆ. ಬಯಲು ಪ್ರದೇಶಗಳಲ್ಲಿ ಬಿಸಿ ವಾತಾವರಣದಲ್ಲಿ ಪ್ರತಿ 3ನೇ ದಿನದಿಂದ 4ನೇ ದಿನಕ್ಕೆ ಮತ್ತು ಚಳಿಗಾಲದಲ್ಲಿ ಪ್ರತಿ 7ರಿಂದ 12 ದಿನಗಳಿಗೊಮ್ಮೆ ನೀರಾವರಿ ಮಾಡಬೇಕು. ಅಥವಾ ನೀರನ್ನು ಹೆಚ್ಚಾಗಿ ಉಳಿತಾಯ ಮಾಡಲು ಬದನೆ ಗಿಡಗಳಿಗೆ ಹನಿ ನೀರಾವರಿ ಪದ್ಧತಿಯನ್ನು ಬಳಸಬಹುದು.

ಬದನೆಕಾಯಿ ಆರೋಗ್ಯ ಲಾಭಗಳು : ಬದನೆಕಾಯಿಯನ್ನು ಹೆಚ್ಚಿನವರು ತಿನ್ನಲು ಇಷ್ಟಪಡುವುದಿಲ್ಲ ಆದರೆ ಇದರ ಆರೋಗ್ಯಕಾರಿ ಪ್ರಯೋಜನಗಳನ್ನು ಒಮ್ಮೆ ತಿಳಿದುಕೊಂಡರೆ ಇದನ್ನು ಪ್ರತಿದಿನ ಸೇವಿಸುವುದಂತು ಖಂಡಿತ

# ಬದನೆಕಾಯಿ ಕೊಲೆಸ್ಟ್ರಾಲ್ ಮಟ್ಟವನ್ನ ಕಡಿಮೆ ಮಾಡುತ್ತದೆ

# ರಕ್ತದೊತ್ತಡವನ್ನು ನಿರ್ವಹಿಸಲು ಸಹಾಯ ಮಾಡಿ ಹೃದಯ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

# ಬದನೆಕಾಯಿಯಲ್ಲಿ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ವಿಟಮಿನ್ ಸಿ ಅಂಶ ಅಧಿಕ ಪ್ರಮಾಣದಲ್ಲಿದೆ

# ಬದನೆ ರೋಗನಿರೋಧಕ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

# ರುಚಿ ಹೊಳಪಿಗೆ ಅಗತ್ಯವಾಗಿರುವ ಖನಿಜ ಜೀವಸತ್ವಗಳು ಬದನೆಯಲ್ಲಿ ಇರುವುದರಿಂದ ತ್ವಚೆಯನ್ನು ಬಲವಾಗಿ ಹಾಗೂ ವಯಸ್ಸಿನ ಕಳೆಯನ್ನು ತೆಗೆಯಲು ಸಹಾಯ ಮಾಡುತ್ತದೆ.

# ಬದನೆ ಮೂಳೆ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ

# ಮೆದುಳಿನ ಕಾರ್ಯವನ್ನು ಹೆಚ್ಚಿಸುತ್ತದೆ

# ಬದನೆಕಾಯಿಯಲ್ಲಿ ಕಬ್ಬಿನಾಂಶ ಮತ್ತು ಹಿಮೋಗ್ಲೋಬಿನ್ ಇರುವುದರಿಂದ ರಕ್ತಹೀನತೆ ನಿವಾರಣೆಗೆ ಸಹಾಯಕಾರಿಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು