ಅಂಕಣ

ಬೇಬಿ ಕಾರ್ನ್ ಕೃಷಿಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

ಬೇಬಿಕಾರ್ನ್ ಅಥವಾ ಮೆಕ್ಕೆಜೋಳವು ಭಾರತ ಸೇರಿದಂತೆ ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸುತ್ತಿರುವ ಮೌಲ್ಯಯುತ ತರಕಾರಿಗಳಲ್ಲಿ ಒಂದಾಗಿದೆ.

ಈ ಬೇಬಿ ಕಾರ್ನ್ ಕೃಷಿ ಪದ್ಧತಿಯು ಅಥವಾ ವಿಧಾನಗಳು ಸಾಮಾನ್ಯವಾಗಿ ಮೆಕ್ಕೆಜೋಳದ ಕೃಷಿ ಪದ್ಧತಿಗಳನ್ನು ಹೋಲುತ್ತದೆ ಒಂದೇ ವ್ಯತ್ಯಾಸವೆಂದರೆ ಕೊಯ್ಲು ಅವಧಿ ಅಥವಾ ಬೆಳೆ ಅವಧಿ ಮಾತ್ರ.  ಬೇಬಿ ಕಾರ್ನ್ ಬೆಳೆಯ ಅವಧಿಯು ಸುಮಾರು ಎರಡು ತಿಂಗಳು ಆಗಿದ್ದರೆ, ಸಾಮಾನ್ಯ ಜೋಳ ಅಥವಾ ಮೆಕ್ಕೆಜೋಳದ ಅವಧಿ 4 ತಿಂಗಳಾಗಿರುತ್ತದೆ. ಈ ಬೇಬಿ ಕಾರ್ನ್ ಗಳಲ್ಲಿ ಉತ್ತಮ ಫೈಬರ್ ಮತ್ತು ಫಾಸ್ಫರಸ್ ನ ಅಂಶ ಹೆಚ್ಚಾಗಿದ್ದು ಇವು ಕಡಿಮೆ ಕ್ಯಾಲರಿ ಮತ್ತು ಉತ್ತಮ ಕಾಲೆಸ್ಟ್ರಾಲನ್ನು ಹೊಂದಿದೆ. ಬೇಬಿ ಕಾರ್ನ್  ಗಳನ್ನ ಹೆಚ್ಚಾಗಿ ಸಲಾಡ್ ಗಳು, ಕರಿ, ಸೂಪ್, ಪಲಾವ್, ಹಾಗೂ ತಾಜಾ ತರಕಾರಿಯಾಗಿ ಸೇವಿಸಲಾಗುತ್ತದೆ.

ಹವಾಮಾನದ ಅವಶ್ಯಕತೆ: ಬೇಬಿ ಕಾರ್ನ್ ಉತ್ತಮವಾದ ಬೆಳವಣಿಗೆಗೆ 22 ಡಿಗ್ರಿ ಸೆಲ್ಸಿಯಸ್ ನಿಂದ 28 ಡಿಗ್ರಿ ಸೆಲ್ಸಿ ತಾಪಮಾನದ ವ್ಯಾಪ್ತಿಯೊಂದಿಗೆ ಉತ್ತಮ ಸೂರ್ಯನ ಬೆಳಕು ಬೇಕಾಗುತ್ತದೆ. 30 ಡಿಗ್ರಿ ಸೆಲ್ಸಸ್ ಗಿಂತ ಹೆಚ್ಚಿನ ತಾಪಮಾನದ ವಾತಾವರಣಗಳಲ್ಲಿ ಇವು ಚೆನ್ನಾಗಿ ಬೆಳೆಯಲಾಗುವುದಿಲ್ಲ. ಅದಾಗಿಯೂ ಶೀತ ಪ್ರದೇಶಗಳಲ್ಲಿ ಬೆಳೆಯಬಹುದಾದಂತಹ ಬೇಬಿಕಾರ್ನ್ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಮಣ್ಣಿನ ಅವಶ್ಯಕತೆ: ಚೆನ್ನಾಗಿ ಬರಿದು ಹೋದ ಮರಳು ಮಿಶ್ರಿತ ಲೋಮ್ ಮಣ್ಣು ಬೇಬಿಕಾರ್ನ್ ಕೃಷಿಗೆ ಸೂಕ್ತವಾಗಿದೆ. ಈ ಬೆಳೆಯು ಹೆಚ್ಚಿನ ಆಮ್ಲೀಯ ಮಣ್ಣಿನಲ್ಲಿಯೂ ಸಹ ಬೆಳೆಯುತ್ತದೆ.

ಬೇಬಿ ಕಾರ್ನ್ ಬೆಳೆಯ ಬಿತ್ತನೆಯ ಕಾಲ: ಈ ಬೆಳೆಯನ್ನ ವರ್ಷವಿಡೀ ಬೆಳೆಸಬಹುದು ಹಾಗೂ ಜಮೀನಿನ ತೇವಾಂಶ ಮತ್ತು ನೀರಾವರಿ ಪರಿಸ್ಥಿತಿಗಳ ಆಧಾರದ ಮೇಲೆ ಇದನ್ನು ಜನವರಿಯಿಂದ ಅಕ್ಟೋಬರ್ ವರೆಗೆ ಬಿತ್ತಬಹುದು. ಮೇ 2ನೇ ವಾರದ ನಂತರ ಏಪ್ರಿಲ್ ನ 3ನೇ ವಾರದಲ್ಲಿ ಬಿತ್ತನೆ ಮಾಡುವುದರಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದು.

ನೀರಾವರಿ ಅವಶ್ಯಕತೆ: ಬೇಬಿ ಕಾರ್ನ್ ಬೆಳೆಗಳು ನೀರು ನಿಲ್ಲುವುದನ್ನು ಸಹಿಸುವುದಿಲ್ಲ. ಗಿಡಗಳ ಸುತ್ತಲೂ ನೀರು ನಿಂತರೆ ಗಿಡಗಳು ಕೊಳೆಯಲು ಪ್ರಾರಂಭಿಸಬಹುದ ಆದ್ದರಿಂದ ಗಿಡಗಳ ಸುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳುವುದು ತುಂಬಾ ಅವಶ್ಯಕ. ನೀರು 2 ರಿಂದ 4 ದಿನಗಳಿಗಿಂತಲೂ ಹೆಚ್ಚು ಕಾಲ ನಿಂತಿದ್ದರೆ ಗಿಡಗಳು ಹಾನಿಯಾಗುವುದು ಖಂಡಿತಾ.

ಬೇಬಿ ಕಾರ್ನ್ ಬೇಸಾಯದಲ್ಲಿ ಅಂತರ ಬೆಳೆ: ಈ ಬೆಳೆಯನ್ನ ಅಂತರ ಬೆಳೆಯೊಂದಿಗೆ ಕೃಷಿ ಮಾಡಿದರೆ ಉತ್ತಮ ಲಾಭ ಬರುತ್ತದೆ. ಮಣ್ಣಿನ ಫಲವತ್ತತೆಯನ್ನು ಸುಧಾರಿಸುವಲ್ಲಿ ಅಂತರ ಬೆಳೆ ಉತ್ತಮವಾಗಿದೆ. ಬೇಬಿ ಕಾರ್ನ್ ಅಂತರ ಬೆಳೆಯಲ್ಲಿ ಅಲ್ಪಾವಧಿಯ ಅಂತರ ಬೆಳೆಗಳನ್ನು ಶಿಫಾರಸ್ಸು ಮಾಡಲಾಗುತ್ತದೆ. ಮುಖ್ಯವಾಗಿ ಬೇಬಿಕಾರ್ನ್ ಜೊತೆ ಆಲೂಗೆಡ್ಡೆ, ಈರುಳ್ಳಿ, ಬೆಳ್ಳುಳ್ಳಿ, ಮೆಂತೆ ಸೊಪ್ಪು, ಕ್ಯಾರೆಟ್, ಕೊತ್ತಂಬರಿ ಸೊಪ್ಪು, ಪಾಲಕ್, ಬ್ರೊಕಲಿ ಮುಂತಾದ ಬೆಳೆಗಳನ್ನು ಅಂತರ ಬೆಳೆಯಾಗಿ ಬೆಳೆಯಬಹುದು .

ಬೇಬಿ ಕಾರ್ನ್ ಆರೋಗ್ಯ ಪ್ರಯೋಜನಗಳು: ಬೇಬಿ ಕಾರ್ನ್ ನಲ್ಲಿ ಕಡಿಮೆ ಕ್ಯಾಲರಿ ಇರುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.

# ಬೇಬಿ ಕಾರ್ನ್ ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ.

# ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

# ಕಣ್ಣಿನ ದೃಷ್ಟಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

# ಚರ್ಮವನ್ನು ಆರೋಗ್ಯಕರವಾಗಿರುತ್ತದೆ.

# ಕರುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ.

Ashika S

Recent Posts

ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮೂವರ ದುರ್ಮರಣ

ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೋಗುವಾಗ ​ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…

8 mins ago

ಬೀದರ್: ನರೇಗಾ ಕಾಮಗಾರಿ ಪರಿಶೀಲಿಸಿದ ಉಪ ಕಾರ್ಯದರ್ಶಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…

29 mins ago

ಮನಿ ಲಾಂಡರಿಂಗ್ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಲಂಗೀರ್ ಆಲಂ

ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್​ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…

42 mins ago

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲಕ್ಕೆ ಸಿಗದ ಔಷಧ: ಸಾರ್ವಜನಿಕರ ಆಕ್ರೋಶ

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…

58 mins ago

ಪದವೀಧರರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ: ಡಾ. ಶಿಂಧೆ

ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…

1 hour ago

ಬೀದರ್: ಸಾಯಿಜ್ಞಾನ ಪಬ್ಲಿಕ್ ಶಾಲೆಗೆ ಶೇ. 100 ಫಲಿತಾಂಶ

ಸಾಯಿಜ್ಞಾನ ಪಬ್ಲಿಕ್ ಶಾಲೆಯು ಪ್ರಸಕ್ತ ಸಾಲಿನ ಸಿಬಿಎಸ್‍ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ 100ಕ್ಕೆ 100 ರಷ್ಟು ಫಲಿತಾಂಶ ಪಡೆದಿದೆ.…

2 hours ago