News Karnataka Kannada
Monday, April 29 2024
ಅಂಕಣ

ಕೈಗಳ ಅಂದ ಹೆಚ್ಚಿಸಿಕೊಳ್ಳಲು ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್

enhance beauty of hands
Photo Credit : Freepik

ಚಳಿಗಾಲ ಆರಂಭ ಆಯಿತೆಂದರೆ ಸಾಕು ತುಟಿ ಹೊಡೆಯುವುದು, ಕೈ ಕಾಲುಗಳು ಹೊಡೆಯುವುದು ಹೀಗೆ ಹಲವಾರು ಸಮಸ್ಯೆಗಳು ಒಂದರ ಮೇಲೊಂದರಂತೆ ಬರುತ್ತಿರುತ್ತದೆ. ಇಂತಹ ಸಮಸ್ಯೆಯಿಂದ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿದುಕೊಳ್ಳೋಣ. ಇಂದು ಕೈ ಅಂದವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂದು ತಿಳಿದುಕೊಳ್ಳೋಣ. ಹಾಲಿನ ಕೆನೆಯೊಂದಿಗೆ ಅರಿಶಿಣ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಈ ಮಿಶ್ರಣವನ್ನು ಕೈಗೆ ಹಚ್ಚೋದರಿಂದ ಕೈಗಳ ಅಂದ ಹೆಚ್ಚಾಗುತ್ತದೆ ಮತ್ತು ಚರ್ಮದ ಕಾಂತಿಯೂ ಹೆಚ್ಚುತ್ತದೆ.

ಜೇನುತುಪ್ಪವು ಮುಖದ ಅಂದ ಹೆಚ್ಚಿಸುವಲ್ಲಿಯೂ ಸಹಕಾರಿ ಜೊತೆಗೆ ಕೈಗಳ ಅಂದ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಮೊದಲಿಗೆ ಜೇನುತುಪ್ಪವನ್ನು ತೆಗೆದುಕೊಳ್ಳಿ, ಅದಕ್ಕೆ ಅರಿಶಿನ ಸೇರಿಸಿ ಇದನ್ನು ನಿಮ್ಮ ಕೈಗಳಿಗೆ ಹಚ್ಚಿ ಸ್ವಲ್ಪ ಸಮಯ ಹಾಗೆ ಒಣಗಲು ಬಿಡಿ. ನಂತರ ಅದಾ ಬಿಸಿ ನೀರಿನಿಂದ ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ಉತ್ತಮ ರಿಸಲ್ಟ್ ಪಡೆಯಬಹುದು.

ಪ್ರತಿ ದಿನ ಕಡಲೆಹಿಟ್ಟಿನಿಂದ ಕೈಗಳನ್ನು ಸ್ಕ್ರಬ್ಬಿಂಗ್‌ ಮಾಡಿದರೇ ಅತೀ ಬೇಗನೆ ಕೈಗಳು ಮೃದುವಾಗಿ ಕಾಂತಿಯುತವಾಗಿ ಹೊಳೆಯುತ್ತದೆ. ಕೊಬ್ಬರಿ ಎಣ್ಣೆಯನ್ನು ಚರ್ಮಕ್ಕೆ ಹಚ್ಚಿ. ಮಸಾಜ್‌ ಮಾಡಿ. ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ ಇದರಿಂದ ಕೂಡ ಉತ್ತಮ ರಿಸಲ್ಟ್ ಪಡೆಯಬಹುದು.

ಸ್ಲೀವ್ ಲೆಸ್ ಟಾಪ್ ಗಳನ್ನು ಧರಿಸಿ ಬಿಸಿಲಿಗೆ ಹೋದಾಗ ಬಿಸಿಲಿನ ಉರಿಗೆ ಚರ್ಮ ಕಾಂತಿಯನ್ನ ಕಳೆದುಕೊಳ್ಳುತ್ತದೆ. ಇಂತಹ ಸಮಸ್ಯೆಯಿಂದ ದೂರ ಉಳಿಯಲು ಆದಷ್ಟು ಫುಲ್ ಸ್ಲೀವ್ ಬಟ್ಟೆ ಧರಿಸಿದರೆ ಉತ್ತಮ. ಆಗ ನಮ್ಮ ಚರ್ಮದ ಕಾಂತಿಯನ್ನು ಬಿಸಿಲಿನಿಂದ ಕಾಪಾಡಿಕೊಳ್ಳಬಹುದು. ಆದಷ್ಟು ಬಿಸಿಲಿನ ಸಮಯದಲ್ಲಿ ಹೊರಗಡೆ ಹೋಗುವಾಗ ಕೈಯಲ್ಲಿ ಒಂದು ದುಪ್ಪಟ್ಟ ಇದ್ದರೆ ಒಳ್ಳೆಯದು ಅದರಿಂದ ನಿಮ್ಮ ಮುಖ ಕೈಗಳನ್ನ ಬಿಸಿಲಿನಿಂದ ರಕ್ಷಿಸಿಕೊಳ್ಳಬಹುದು.

ಅಡುಗೆ ಸೋಡಾವನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಅದನ್ನು ಕೈಗಳಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಕೈಗಳ ಅಂದ ಹೆಚ್ಚಿಸಿಕೊಳ್ಳಬಹುದು. ಜೊತೆಗೆ ಬಾದಾಮಿ ಎಣ್ಣೆಯೂ ಕೈಗಳ ಅಂದ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಈ ಬಾದಾಮಿ ಎಣ್ಣೆಯನ್ನು ಕೈಗಳಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಕೈಗಳ ಅಂದ ಕ್ರಮೇಣ ಹೆಚ್ಚಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು