News Karnataka Kannada
Monday, April 29 2024
ಅಂಕಣ

ಪಾದದ ಅಂದ ಹೆಚ್ಚಿಸುತ್ತದೆ ಬಾಳೆಹಣ್ಣಿನ ಸಿಪ್ಪೆ

Banana peel enhances the beauty of the feet
Photo Credit : Freepik

ಬಾಳೆಹಣ್ಣಿನ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಜೊತೆಗೆ ಬಾಳೆಹಣ್ಣು ಸೇವನೆಯೂ ಮಾಡಿರುತ್ತಾರೆ. ಬಾಳೆಹಣ್ಣು ಸೇವನೆಯಿಂದ ಆರೋಗ್ಯಕ್ಕೂ ಒಳ್ಳೆಯದು, ಜೊತೆಗೆ ಇದು ಬೇರೆ ಹಲವಾರು ರೀತಿಯಲ್ಲಿ ಸಹಕಾರಿಯಾಗಿದೆ. ಬಾಳೆಹಣ್ಣು ಮಾತ್ರವಲ್ಲದೆ ಬಾಳೆಹಣ್ಣಿನ ಸಿಪ್ಪೆಯೂ ಉಪಯೋಗಕಾರಿಯಾಗಿದೆ. ಇಂದು ನಾವು ಈ ಬಾಳೆಹಣ್ಣಿನ ಸಿಪ್ಪೆ ಹೇಗೆಲ್ಲಾ ಸಹಾಯ ಮಾಡುತ್ತದೆ ಎಂದು ತಿಳಿದುಕೊಳ್ಳೋಣ.

ಬಾಳೆಹಣ್ಣಿನ ಸಿಪ್ಪೆಯು ನಿಮ್ಮ ತ್ವಚೆಯ ಸೌಂದರ್ಯ ಹೆಚ್ಚಿಸುವುದು ಮಾತ್ರವಲ್ಲದೆ, ಕೈ-ಕಾಲುಗಳ ತ್ವಚೆಯನ್ನು ಆರೋಗ್ಯವಾಗಿಡುತ್ತದೆ. ಬಾಳೆಹಣ್ಣಿನ ಸಿಪ್ಪೆಯ ಟಿಪ್ಸ್ ಟ್ರೈ ಮಾಡಲು, ಮೊದಲಿಗೆ ಪಾದಗಳನ್ನು ಸ್ವಚ್ಛ ಮಾಡಿ ನಂತರ ಬಾಳೆಹಣ್ಣಿನ ಸಿಪ್ಪೆಯಿಂದ ಪಾದಗಳ ಚರ್ಮವನ್ನು ಚೆನ್ನಾಗಿ ಉಜ್ಜಿ. ಹೀಗೆ ಕ್ರಮೇಣ ಮಾಡುವುದರಿಂದ ಪಾದಗಳು ಸ್ವಚ್ಛವಾಗುತ್ತದೆ ಜೊತೆಗೆ ಅಂದ ಹೆಚ್ಚುತ್ತದೆ.

ಸಕ್ಕರೆ ಹಾಗೂ ವ್ಯಾಸಲೀನ್‌ ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ಪಾದಗಳಿಗೆ ಹಚ್ಚಿಕೊಳ್ಳುವುದರಿಂದ ಪಾದ ಮೃದುವಾಗಿ ಅಂದವಾಗಿ ಕಾಣುತ್ತದೆ.

ಕೊಬ್ಬರಿ ಎಣ್ಣೆಗೆ ಸ್ವಲ್ಪ ಬೇಕಿಂಗ್ ಸೋಡಾ ಹಾಕಿ ಪೇಸ್ಟ್ ಮಾಡಿಕೊಳ್ಳಿ. ನಂತರ ಹತ್ತಿಯ ತುಂಡಿನಿಂದ ಪಾದಗಳಿಗೆ ನಯವಾಗಿ ಸವರಿ ಒಣಗಿದ ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಹೀಗೆ ಕ್ರಮೇಣ ಮಾಡಿ ಅತೀ ಶೀಘ್ರದಲ್ಲೇ ಉತ್ತಮ ರಿಸಲ್ಟ್ ಪಡೆಯುತ್ತೀರ.

ಇನ್ನು ಚಳಿಗಾಲದಲ್ಲಿ ಪಾದದ ಬಿರುಕು ಬಿಡುವ ಸಮಸ್ಯೆ ಇರುತ್ತದೆ. ಅಂಥವರು ಈ ಬಾಳೆಹಣ್ಣಿನ ಸಿಪ್ಪೆಯನ್ನು ಹೊಡೆದ ಭಾಗಕ್ಕೆ ಉಜ್ಜಿ ಸ್ವಲ್ಪ ಹೊತ್ತು ಬಿಡಿ. ನಂತರ ಪಾದವನ್ನು ನೀರಿನಿಂದ ಸ್ವಚ್ಛಗೊಳಿಸಿ. ಹೀಗೆ ಕ್ರಮೇಣ ಮಾಡುವುದರಿಂದ ಉತ್ತಮ ರಿಸಲ್ಟ್ ಪಡೆಯಬಹುದು.

ಬಾಳೆಹಣ್ಣಿನ ಸಿಪ್ಪೆ, ಮೊಸರು, ಜೇನುತುಪ್ಪವನ್ನು ಚೆನ್ನಾಗಿ ಗ್ರೈನ್ ಮಾಡಿ ನಂತರ ತಯಾರಾದ ಪೇಸ್ಟ್ ಅನ್ನು ಪಾದಗಳಿಗೆ ಹಚ್ಚಿ ಸ್ವಲ್ಪ ಹೊತ್ತು ಬಿಡಿ. ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು