News Karnataka Kannada
Monday, April 29 2024
ಅಂಕಣ

ಬಾದಾಮಿ ಎಣ್ಣೆಯಲ್ಲಿದೆ ಸೌಂದರ್ಯ ವೃದ್ಧಿಸುವ ಗುಣ

ಮುಖದ ಕಾಂತಿ ಹೆಚ್ಚಿಸಲು ಮತ್ತು ಮುಖದ ಹಲವಾರು ರೀತಿಯ ಸಮಸ್ಯೆಗಳನ್ನು ದೂರ ಮಾಡಿ ಮುಖದ ಅಂದ ಹೆಚ್ಚಿಸಲು ಬಾದಾಮಿ ಎಣ್ಣೆ ಸಹಕಾರಿಯಾಗಿದೆ. ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಮುಖದ ಕಾಂತಿ ಹೆಚ್ಚಿಸಲು ಬಾದಾಮಿ ಎಣ್ಣೆಗೆ ಸ್ವಲ್ಪ ಸಕ್ಕರೆ ಹಾಕಿ, ಮಿಶ್ರ ಮಾಡಿ. ನಂತರ ಅದನ್ನು ಮುಖಕ್ಕೆ ಹಚ್ಚಿ ಸ್ಕ್ರಬ್‌ ಮಾಡಿ ಹೀಗೆ ಕ್ರಮೇಣ ಮಾಡುವುದರಿಂದ ಉತ್ತಮ ರಿಸಲ್ಟ್ ಪಡೆಯಬಹುದು.
Photo Credit : Freepik

ಡಾರ್ಕ್ ಸರ್ಕಲ್ ಸಮಸ್ಯೆ ಸಾಮಾನ್ಯವಾಗಿ ಇಂದು ಹೆಚ್ಚಿನವರನ್ನು ಕಾಡುತ್ತಿರುತ್ತದೆ. ಈ ಸಮಸ್ಯೆಯಿಂದ ದೂರ ಆಗಲು ರಾತ್ರಿ ಮಲಗುವ ಮುನ್ನ ಬಾದಾಮಿ ಎಣ್ಣೆಯನ್ನು ಕಣ್ಣಿನ ಸುತ್ತ ಹಚ್ಚಿ. ಇನ್ನೂ ಬಾದಾಮಿ ಎಣ್ಣೆಯನ್ನು ಮುಖಕ್ಕೆ ಲೇಪಿಸುವುದರಿಂದ ಅಕಾಲಿಕ ನೆರಿಗೆ ಉಂಟಾಗುವ ಸಮಸ್ಯೆಯಿಂದ ಪಾರಾಗಬಹುದು.

ಬಾದಾಮಿಯ ಪೇಸ್ಟ್‌ ಚರ್ಮಕ್ಕೆ ಹಚ್ಚೋದರಿಂದ ಚರ್ಮದ ಬಣ್ಣವು ಬಿಳಿಯಾಗಿ ಹೊಳೆಯುವುದು. ಅದೇ ರೀತಿ ಬಾದಾಮಿ ಎಣ್ಣೆ ಹಚ್ಚೋದರಿಂದಲೂ ಮುಖ ಕಾಂತಿ ಹೆಚ್ಚಿಸಿಕೊಳ್ಳಬಹುದು.

ಬಾದಾಮಿ ಎಣ್ಣೆಯು ಮೊಡವೆಗಳ ವಿರುದ್ಧ ಹೋರಾಡುವುದರ ಜೊತೆಗೆ ಚರ್ಮದ ಮೇಲಿರುವ ಕಲೆಗಳು ಮತ್ತು ಸುಕ್ಕುಗಳನ್ನು ಕೂಡ ತೆಗೆದು ಹಾಕುತ್ತದೆ. ಟ್ಯಾನ್ ಅಥವಾ ಕಲೆಗಳ ಮೇಲೆ ಈ ಬಾದಾಮಿ ಎಣ್ಣೆಯನ್ನು ಹಚ್ಚೋದರಿಂದ ಕಲೆಯನ್ನು ತೆಗೆದು ಹಾಕಿ ಮುಖದ ಅಂದ ಹೆಚ್ಚು ಮಾಡುತ್ತದೆ.

ಬಾದಾಮಿ ಎಣ್ಣೆಯನ್ನು ಮೇಕಪ್ ರಿಮೂವರ್ ಆಗಿ ಬಳಸಬಹುದು. ಇದಕ್ಕೆ ನೀವು ನಿಮ್ಮ ಅಂಗೈಗೆ ಕೆಲವೇ ಹನಿ ಎಣ್ಣೆ ಹಾಕಿ, ನಂತರ ಮೇಕಪ್ ತೆಗೆಯುವ ಜಾಗಕ್ಕೆ ಎಣ್ಣೆಯನ್ನು ನಿಧಾನವಾಗಿ ಅನ್ವಯಿಸಿ. ನಂತರ ಹತ್ತಿ ಅಥವಾ ಬೆಚ್ಚಗಿನ ನೀರನ್ನು ಬಳಸಿ ಮುಖವನ್ನು ತೊಳೆದುಕೊಳ್ಳಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು