News Karnataka Kannada
Sunday, April 14 2024
Cricket
ಅಂಕಣ

 ಮುಖದ ಅಂದ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸಿಂಪಲ್ ಮೇಕಪ್ ಟಿಪ್ಸ್

Make Up
Photo Credit :

ಅಂದವಾಗಿ ಕಾಣಬೇಕು ಎಂಬುದು ಪ್ರತಿಯೊಬ್ಬ ಹೆಣ್ಣಿನ ಬಯಕೆಯಾಗಿರುತ್ತದೆ. ಅದರಲ್ಲೂ ಹೆಂಗಳೆಯರಿಗೆ ಮೇಕಪ್ ಮೇಲಿನ ಆಸಕ್ತಿ ಹೆಚ್ಚೇ ಇರುತ್ತದೆ. ಅದರಲ್ಲೂ ಮದುವೆ, ಸಮಾರಂಭ, ಇನ್ನಿತರ ಕಾರ್ಯಕ್ರಮಗಳಲ್ಲಿ ತಮ್ಮ ಅಂದವನ್ನು ಇನ್ನಷ್ಟು ಇಮ್ಮಡಿಗೊಳಿಸಬೇಕು ಎಂದು ಕಾಯುತ್ತಿರುತ್ತಾರೆ. ಅಂಥವರಿಗೆ ಮೇಕಪ್ ಮಾಡಿಕೊಳ್ಳಲು ಸ್ಟೆಪ್ ಬೈ ಸ್ಟೆಪ್ ವಿಧಾನ ಇಲ್ಲಿದೆ.

ಮೊದಲಿಗೆ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿ. ಇದರಿಂದ ತ್ವಚೆ ಹೈಡ್ರೇಟ್ ಆಗುತ್ತದೆ ಮತ್ತು ತ್ವಚೆಯನ್ನು ನೈಜವಾಗಿ ಕಾಣಿಸುತ್ತದೆ. ನಂತರ ಬಿಬಿ ಕ್ರೀಮ್ ಹಚ್ಚಿಕೊಂಡು, ಬ್ಲಂಡಿಂಗ್ ಸ್ಪಾಂಜ್ ಇಲ್ಲವೇ ಬ್ರಶ್ ಬಳಸಿ ನವಿರಾಗಿ ಲೇಪಿಸಿ. ಮುಖದಲ್ಲಿ ಯಾವುದೇ ಗೆರೆಗಳು ಉಳಿಯದಂತೆ ಬ್ಲೆಂಡ್ ಮಾಡಿಕೊಳ್ಳಬೇಕು, ಕಣ್ಣಿನ ಕೆಳಗೆ ಕನ್ಸೀಲರ್ ಹಚ್ಚಿ. ಹಣೆ, ಮೂಗು, ಕೆನ್ನೆಯನ್ನು ಚೆನ್ನಾಗಿ ಬ್ಲೆಂಡ್ ಮಾಡಿಕೊಳ್ಳಿ.

ಕನ್ಸೀಲರ್ ಬಳಕೆ ಸೂಕ್ತವಾಗಿಲ್ಲದೇ ಇದ್ದಾಗ ಮುಖದ ಸುಕ್ಕು ನೆರಿಗೆ ಚೆನ್ನಾಗಿ ಎದ್ದುಕಾಣುತ್ತದೆ. ಕ್ರೀಮ್ ಕನ್ಸೀಲರ್‌ಗಳನ್ನೇ ಹೆಚ್ಚು ಬಳಸಿ. ಸ್ವಲ್ಪ ಕ್ರೀಮ್ ಅನ್ನು ನಂತರ ಅದನ್ನು ಪಸರಿಸಿಕೊಳ್ಳಿ. ಕೆನ್ನೆಗೆ ಬ್ರಶ್‌ನಿಂದ ಚೆನ್ನಾಗಿ ತೀಡಿ. ಕೆನ್ನೆಯ ಭಾಗದಲ್ಲಿ ಮೇಕಪ್ ಚೆನ್ನಾಗಿ ಕೂರುವಂತೆ ಸೆಟ್ ಮಾಡಿ. ಕೆನ್ನೆಯ ಮೂಳೆಗಳು, ದವಡೆಯ ಭಾಗಕ್ಕೂ ಬ್ಲೆಂಡರ್ ಇಲ್ಲವೇ ಬ್ರಶ್‌ನ ಮೂಲಕ ಬಿಬಿ ಕ್ರೀಮ್‌ ಅನ್ನು ಪಸರಿಸಿ

ಹುಬ್ಬಿಗೆ ಬಣ್ಣ ಹಚ್ಚುವಾಗ ಗಾಢ ಬಣ್ಣವನ್ನು ಆಯ್ಕೆಮಾಡಿಕೊಳ್ಳಿ. ಆದಷ್ಟು ಪೆನ್ಸಿಲ್ ಬಳಸಿ ಹುಬ್ಬನ್ನು ತೀಡಿ. ಕಣ್ಣಿನ ಮೇಕಪ್ ಮಾಡುವಾಗ ತುಸು ಜಾಗರೂಕತೆಯಿಂದ ಮಾಡಿ. ನೈಸರ್ಗಿಕ ಬಣ್ಣ ಬಳಸಿ ಬ್ಲೆಂಡ್ ಮಾಡಿ. ಕಂದು ಬಣ್ಣವನ್ನು ಆರಿಸಿ. ಮಸ್ಕರಾದ ಸಿಂಗಲ್ ಕೋಟ್ ಅನ್ನು ಕಣ್ರೆಪ್ಪೆಯ ಮೇಲೆ ಹಾಗೂ ಕೆಳಭಾಗಕ್ಕೆ ಹಚ್ಚಿ.

ಇನ್ನು ತುಟಿಗೆ ಬಣ್ಣ ಹಚ್ಚುವಾಗ ಗಾಢ ವರ್ಣದ ಲಿಪ್‌ಸ್ಟಿಕ್ ಶೇಡ್ ಬಳಸಿ ಇದರಿಂದ ಮೇಕಪ್ ಲುಕ್ ಅಂದವಾಗಿ ಕಾಣುತ್ತದೆ. ಹೆಚ್ಚು ಸಮಯ ಮೇಕಪ್ ಮುಖದಲ್ಲಿ ಉಳಿಯಬೇಕು ಎಂದಾದಲ್ಲಿ ಉತ್ತಮ ಗುಣಮಟ್ಟದ ಬೇಸ್ ಆರಿಸಿ. ಪ್ರೈಮರ್ ಆಯ್ಕೆಮಾಡುವಾಗ ಕೂಡ ಕೊಂಚ ದುಬಾರಿ ಪ್ರೈಮರ್‌ಗೆ ಆದ್ಯತೆ ನೀಡಿ. ಮೇಕಪ್ ಆದಷ್ಟು ಸರಳವಾಗಿರಲಿ. ಡ್ಯಾಂಪನ್ಡ್ ಮೇಕಪ್ ಸ್ಪಾಂಜು ಬಳಸಿ ಫೌಂಡೇಶನ್ ಕ್ರೀಮ್ ಹಚ್ಚಿಕೊಳ್ಳಿ.

ಐ ಶ್ಯಾಡೋಗಳು ಹಲವು ಬಣ್ಣಗಳಲ್ಲಿ ದೊರೆಯುತ್ತದೆ. ಪೌಡರ್ ಶ್ಯಾಡೋಗಳ ಬದಲು ಕ್ರೀಮಿ ಶ್ಯಾಡೋಗಳನ್ನು ಬಳಸಿ. ಬ್ರಾನ್ಸರ್ ಬಳಸುವಿಕೆಯಿಂದ ಕಣ್ಣುಗಳನ್ನು ಹೆಚ್ಚು ಗಾಢವಾಗಿಯೂ ಹಲ್ಲುಗಳು ಹೆಚ್ಚು ಬಿಳಿಯಾಗಿ ಕಾಣುವಂತೆ ಮಾಡಬಹುದು. ಬ್ರೋನ್ಸ್ ಅನ್ನು ಹೆಚ್ಚಾಗಿ ಹಣೆ, ಕೆನ್ನೆ, ಮೂಗು ಹಾಗೂ ಗಲ್ಲಕ್ಕೆ ಬಳಸಿ. ಇದರಿಂದ ಸೂರ್ಯನ ಬಿಸಿಲಿನಿಂದ ಸಂರಕ್ಷಣೆಯನ್ನು ಪಡೆಯಬಹುದು. ಕೂದಲು ಚಿಕ್ಕದಾಗಿದ್ದರೆ ಇಲ್ಲವೇ ತುರುಬು ಮಾದರಿಯ ಹೇರ್ ಸ್ಟೈಲ್ ಮಾಡಿದ್ದರೆ ಕುತ್ತಿಗೆ ಹಾಗೂ ಕಿವಿಯೆಲುಬುವಿಗೆ ಬ್ರಾನ್ಸರ್ ಹಚ್ಚಿದಲ್ಲಿ ಲುಕ್ ಇನ್ನಷ್ಟು ಸ್ಟೈಲಿಶ್ ಆಗುತ್ತದೆ.

ಮೇಕಪ್ ಆದಷ್ಟು ತೆಳುವಾಗಿರಲಿ ಅಂತೆಯೇ ತುಟಿಗೆ ಬಣ್ಣ ಹಾಗೂ ಐಶ್ಯಾಡ್‌ಗಳನ್ನು ಬಳಸಿ ತೆಳುವಾದ ಐಶೇಡುಗಳನ್ನು ಬಳಸಿ. ತುಟಿಗೆ ಲಿಪ್ ಲೈನರ್‌ಗಳಿಂದ ಆಕಾರ ನೀಡಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು