News Karnataka Kannada
Sunday, April 14 2024
Cricket
ಅಂಕಣ

ಕ್ಯಾಶುವಲ್ ಮತ್ತು ಪಾರ್ಟಿ ವೇರ್‌ಗಳಿಗೆ ಲೆದರ್ ಶೂ ಸೂಕ್ತ

Shoe
Photo Credit : IANS

ಇಂದಿನ ಫ್ಯಾಶನ್ ಜಗತ್ತಿನಲ್ಲಿ ಜನರು ಬದಲಾವಣೆಗಳಿಗೆ ಭಾರಿ ಬೇಗನೆ ಒಗ್ಗಿಕೊಂಡು ಮುಂದೆ ಸಾಗುತ್ತಾರೆ. ಹಿಂದೆ ಯುವಕರು ಚಪ್ಪಳಿಗೆ ಹೆಚ್ಚು ಆಕರ್ಷಿತರಾದರೆ, ಇಂದು ಎಲ್ಲರ ಚಿತ್ತ ಶೂಗಳತ್ತ. ಹೊಸ ಹೊಸ ವಿನ್ಯಾಸದ ಶೂಗಳಿಗೆ ಅತಿ ಹೆಚ್ಚು ಒಳವು ತೋರುತ್ತಿದ್ದಾರೆ. ಮಾತ್ರವಲ್ಲದೆ ಪಾದರಕ್ಷೆಗಳಲ್ಲಿ ಆರಾಮ ಮತ್ತು ಕಾರ್ಯಕ್ಷಮತೆಯ ವಿಷಯದಲ್ಲಿ ಶೂಗಳು ಬೆಸ್ಟ್ , ಅದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಬ್ರಾಂಡೆಡ್ ಶೂಗಳು ಟ್ರೆಂಡ್ ನಲ್ಲಿವೆ. ಇವು ಮೆತ್ತೆ ಅಥವಾ ಪ್ಯಾಡೆಡ್ ಇನ್ ಸೋಲ್ ಗಳನ್ನು ಹೊಂದಿವೆ, ಇದರಿಂದ ಕಾಲುಗಳಲ್ಲಿ ತುಂಬಾ ಆರಾಮದಾಯಕವಾಗಿದೆ. ಇದು ಬಲವಾದ ಹಿಡಿತವನ್ನು ಸಹ ಪಡೆಯುತ್ತದೆ, ಇದರಿಂದ ನೀವು ಯಾವುದೇ ರೀತಿಯಲ್ಲಿ ಮೇಲ್ಮೀಯಲ್ಲಿ ಸುಲಭವಾಗಿ ನಡೆಯಬಹುದು.

ಇನ್ನು ಪಾರ್ಟಿಗೆ ಹೋಗಲು ಅಥವಾ ಪ್ರಯಾಣಕ್ಕೆ ಹೋಗಲು ಬಯಸುವವರಿಗೆ ಉತ್ತಮ ಗುಣಮಟ್ಟದ ಕ್ಯಾಶುಯಲ್ ಶೂಗಳು ಎಲ್ಲೆಡೆ ಸೂಕ್ತವಾಗಿ ಬರುತ್ತವೆ. ಅವುಗಳು ಲುಕ್ಕ್ ಹೆಚ್ಚಿಸುತ್ತವೆ ಮತ್ತು ಇದರಿಂದ ಡ್ರೆಸ್ಸಿಂಗ್ ಶೈಲಿಯು ಉತ್ತಮವಾಗಿರುತ್ತದೆ.

ತುಂಬಾ ಐಷಾರಾಮಿ ತುಕ್ಕು ಬಣ್ಣದ ಶೂಗಳಾಗಿವೆ. ಮಾತ್ರವಲ್ಲದೆ, ಚರ್ಮದ ವಸ್ತುಗಳಿಂದ ಮಾಡಲ್ಪಟ್ಟಿದೆ. ಈ ಶೂ ತುಂಬಾ ಆಕರ್ಷಕ ನೋಟವನ್ನು ನೀಡುತ್ತದೆ. ಇದನ್ನು ಕಪ್ಪು ಮತ್ತು ಗಾಢ ನೀಲಿ ಬಣ್ಣಗಳ ಜೀನ್ಸ್ ಜೊತೆ ಧರಿಸಬಹುದು. ಪಾರ್ಟಿ ಸಮಯದಲ್ಲಿ ಧರಿಸಲು ಇದು ಉತ್ತಮ ಆಯ್ಕೆಯಾಗಿದೆ.

ಕ್ಯಾಶುವಲ್ ಮತ್ತು ಪಾರ್ಟಿ ವೇರ್‌ಗಳಿಗೆ ಲೆದರ್ ಶೂ ಸೂಕ್ತ. ಲೇಸ್ ಅಪ್ ಕ್ಲೋಸರ್ ಶೂಗಳನ್ನು ಯಾವುದೇ ಮದುವೆ ಸಮಾರಂಭದಲ್ಲಿ ಅಥವಾ ಇತರ ಪಾರ್ಟಿಯಲ್ಲಿ ಧರಿಸಬಹುದು. ಇದನ್ನು ಪ್ಯಾಂಟ್ ಮತ್ತು ಜೀನ್ಸ್ ಜೊತೆ ಧರಿಸಿದರೆ ಒಳ್ಳೆಯ ಲುಕ್ ಬರುತ್ತದೆ. ಇದು ಎಲ್ಲಾ ಗಾತ್ರದ ಆಯ್ಕೆಯಲ್ಲಿ ಲಭ್ಯವಿದೆ.

ಟ್ಯಾನ್ ಕಲರ್ ಲೆದರ್ ಕ್ಯಾಶುಯಲ್ ಲೋಫರ್ಸ್ ಶೂಸ್ ಗಳಲ್ಲಿ ಕಪ್ಪು ಬಣ್ಣವನ್ನು ಸಹ ಪಡೆಯಬಹುದು, ಕಂದು ಬಣ್ಣ ಕೂಡ ಪಡೆಯಬಹುದು. ಇದನ್ನು ಕುರ್ತಾ ಪೈಜಾಮಾ, ಜೀನ್ಸ್ ಮತ್ತು ಪ್ಯಾಂಟ್‌ಗಳೊಂದಿಗೆ ಧರಿಸಲು ವಿನ್ಯಾಸಗೊಳಿಸಲಾಗಿದೆ. ಈ ಫ್ಲಾಟ್ ಹೀಲ್ಡ್ ಲೆದರ್ ಶೂಗಳು ನಿಮಗೆ ಪರ್ಫೆಕ್ಟ್ ಪಾರ್ಟಿ ಲುಕ್ ನೀಡುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು