News Karnataka Kannada
Friday, April 19 2024
Cricket
ಅಂಕಣ

ಆಮೆ ಉಂಗುರ ಧರಿಸುವ ಮೊದಲು ಈ ವಿಚಾರವನ್ನು ತಿಳಿದುಕೊಳ್ಳಿ

 Tutle
Photo Credit :

ನಾವು ಪ್ರತಿ ದಿನ ಹಲವರ ಕೈ ಬೆರಳಿನಲ್ಲಿ ಆಮೆ ಆಕಾರದ ಉಂಗುರವನ್ನು ಧರಿಸಿರುವ ನೋಡಿರುತ್ತೇವೆ. ಆಮೆಯ ಉಂಗುರವನ್ನು ಧರಿಸುವುದರಿಂದ ಸಂಪತ್ತಿನ ದಾರಿ ತೆರೆಯುತ್ತದೆ ಎಂಬ ನಂಬಿಕೆ ಇದೆ.

ಪುರಾಣದ ಕಥೆಗಳ ಪ್ರಕಾರ ಸಮುದ್ರ ಮಂಥನದ ವೇಳೆ ಆಮೆಗಳು ಉದ್ಭವವಾದವು ಅದೇ ವೇಳೆಗೆ ಮಹಾಲಕ್ಷ್ಮಿ ಕೂಡ ಉದ್ಬವವಾದಳು. ಹಾಗಾಗಿ ಆಮೆ ಉಂಗುರವನ್ನು ಲಕ್ಷ್ಮಿ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ನಮ್ಮ ಬದುಕಿನಲ್ಲಿ ಹಣಕಾಸಿನ ತೊಂದರೆ ಇದ್ದರೆ ಆಮೆ ಉಂಗುರವು ಅದಕ್ಕೆ ಪರಿಹಾರ ಎಂದು ಹೇಳಲಾಗುತ್ತದೆ. ವಾಸ್ತು ವಿಜ್ಞಾನದ ಪ್ರಕಾರವೂ ಆಮೆ ಉಂಗುರಕ್ಕೆ ಪ್ರಾಮುಖ್ಯತೆ ಇದೆ. ಈ ಉಂಗುರ ಧರಿಸುವುದರಿಂದ ನಮ್ಮ ನಡೆ, ನುಡಿಯಲ್ಲಿ ಬದಲಾವಣೆಯಾಗಲಿದೆ ಎಂದು ಹೇಳಲಾಗುತ್ತದೆ. ನಮ್ಮ ಗ್ರಹಗತಿಗಳಿಂದ ದೋಷ ಇದ್ದರೂ ಸಹ ಆಮೆ ಉಂಗುರದಿಂದ ಪರಿಹಾರವಾಗುತ್ತದೆ. ಆದರೆ ವಾಸ್ತು ಪ್ರಕಾರ ಯಾವಾಗಲೂ ಆಮೆಯ ಮುಖ ನಮ್ಮನ್ನು ನೋಡುವಂತೆ ಇರಬೇಕು.

ಇನ್ನೂ ಈ ಆಮೆ ಉಂಗುರ ಎಲ್ಲ ರಾಶಿಯವರಿಗೂ ಆಗಿ ಬರುವುದಿಲ್ಲ. ಅಗ್ನಿ ತತ್ವದವರು ಈ ಜಲ ತತ್ವದ ಪ್ರಾಣಿಯ ಉಂಗುರ ಧರಿಸುವುದರಿಂದ ವಿರೋಧಾಭಾಸಗಳಾಗಬಹುದು. ಸಿಂಹ ಮತ್ತು ತುಲಾ ರಾಶಿಯವರು ಆಮೆ ಉಂಗುರ ಧರಿಸುವ ಮುನ್ನ ನುರಿತ ಜ್ಯೋತಿಷಿಗಳ ಬಳಿ ವಿಚಾರಿಸಿಯೇ ಮುಂದುವರಿಯಬೇಕು.

ಟರ್ಟಲ್ ರಿಂಗ್ ಧರಿಸಿದಾಗ ಆಮೆಯ ಮುಖವು ನಿಮ್ಮ ಕಡೆ ಮುಖ ಮಾಡಿರಬೇಕು. ಅದು ನಿಮಗೆ ಬೆನ್ನು ಹಾಕಿರಕೂಡದು. ಹಾಗಿದ್ದಾಗ ಮಾತ್ರ ಅದು ಸಂತೋಷ ಹಾಗೂ ಸಮೃದ್ಧಿಯನ್ನು ನಿಮ್ಮತ್ತ ಎಳೆದು ತರುತ್ತದೆ. ಅದೇ ಆಮೆಯ ಮುಖ ನಿಮಗೆ ವಿರುದ್ಧವಾಗಿದ್ದರೆ, ಆಗ ಹಣಕಾಸಿನ ತೊಂದರೆಗಳು ಹೆಚ್ಚುತ್ತವೆ. ಸಾಲ ಮಾಡಬೇಕಾದ ಪರಿಸ್ಥಿತಿ ಉಂಟಾಗುತ್ತದೆ.

ಆಮೆ ಉಂಗುರ ಧರಿಸುವ ಮುಂಚಿತವಾಗಿ ಕೆಲವೊಂದು ವಿಚಾಲದ ಬಗ್ಗೆ ಗಮನ ಹರಿಸುವುದು ಬಹುಮುಖ್ಯ, ಯಾವಾಗಲೂ ಆಮೆ ಉಂಗುರವನ್ನು ಬಲಗೈಯ ಮಧ್ಯದ ಬೆರಳಿಗೇ ಧರಿಸಬೇಕು. ಶುಕ್ರವಾರದ ದಿನವೇ ಕೈಗೆ ಉಂಗುರ ಹಾಕಿಕೊಳ್ಳಬೇಕು. ಏಕೆಂದರೆ ಶುಕ್ರವಾರವು ತಾಯಿ ಲಕ್ಷ್ಮೀಯ ದಿನವಾಗಿದೆ.  ಬೆಳ್ಳಿಯಿಂದ ತಯಾರಿಸಿದ ಆಮೆ ಉಂಗುರವನ್ನು ಮಾತ್ರ ಧರಿಸಬೇಕು. ಉಂಗುರದ ಹಿಂಬದಿಯಲ್ಲಿ ‘ಶ್ರೀ’ ಎಂದು ಬರೆಸಬೇಕು.

ಕೈಗೆ ಧರಿಸಿದ ಉಂಗುರವನ್ನು ಏನೋ ಯೋಚಿಸುವಾಗ, ಸುಮ್ಮನೆ ಕುಳಿತಾಗ ತೆಗೆಯುವುದು, ಹಾಕುವುದು ಮಾಡುತ್ತಿರಬಾರದು. ಅದರಲ್ಲಿ ಆಟವಾಡಬಾರದು. ಜೊತೆಗೆ, ಪದೇ ಪದೆ ನಾನಾ ಕಾರಣಗಳಿಗಾಗಿ ಅದನ್ನು ಬಿಚ್ಚಿಡುವುದು ಮತ್ತೆ ಧರಿಸುವುದು ಉತ್ತಮ ಅಭ್ಯಾಸವಲ್ಲ.

ಒಂದು ವೇಳೆ ಆಮೆ ಉಂಗುರವನ್ನು ಕೆಲ ದಿನಗಳಿಗೆ ತೆಗೆದಿಡಲೇಬೇಕಾದ ಸಂದರ್ಭ ಬಂದರೆ ಅದನ್ನು ದೇವರ ಮನೆಯಲ್ಲಿ ಲಕ್ಷ್ಮೀದೇವಿಯ ಪಾದದ ಬುಡದಲ್ಲೇ ಕಳಚಿಡಬೇಕು. ಒಮ್ಮೆ ತೆಗೆದಿಟ್ಟ ಉಂಗುರ ಮತ್ತೆ ಧರಿಸಬೇಕೆಂದರೆ ಅದನ್ನು ಹಾಲಿನ ಬಟ್ಟಲಿನೊಳಗೆ ಹಾಕಿಟ್ಟು, ಲಕ್ಷ್ಮೀ ದೇವಿಯ ಕಾಲಿಗೆ ನಮಸ್ಕರಿಸಿ ಬಳಿಕ ಧಾರಣೆ ಮಾಡಬೇಕು.  ಕಟಕ, ಮೇಷ, ವೃಸ್ಚಿಕ ಹಾಗೂ ಮೀನ ರಾಶಿಯ ಜನರು ಜ್ಯೋತಿಷಿಗಳ ಸಲಹೆ ಕೇಳದೆ ಆಮೆ ಉಂಗುರವನ್ನು ಧರಿಸಕೂಡದು. ಒಂದು ವೇಳೆ ಬೇಕಾಬಿಟ್ಟಿ ಧರಿಸಿದರೆ ಅವರ ಗ್ರಹದೋಷ ಹೆಚ್ಚುವುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು