Categories: ವಿಶೇಷ

ತುಳುನಾಡಿನಲ್ಲೊಂದು ಅಪರೂಪದ ನವಗುಳಿಗ ದೈವದ ಗಗ್ಗರ ಸೇವೆ…!

ದೈವಸ್ಥಾನಗಳಲ್ಲಿ ಕ್ಷೇತ್ರಪಾಲ ದೈವವಾಗಿ ಒಂದು ಅಥವಾ ಎರಡು ಗುಳಿಗ ದೈವದ ಸಾನಿಧ್ಯವಿರುವುದು ಮಾಮೂಲಿ. ಗುಳಿಗ ನೀಚನೂ, ಉಗ್ರನೂ ಆದ ದೈವ. ಇಂತಹ ಗುಳಿಗನ ಕೋಲ ನೋಡಲೆಂದು ಭಾರೀ ಜನಸ್ತೋಮವೇ ಸೇರುತ್ತದೆ. ಆದರೆ ಇಲ್ಲೊ‌ಂದು ಕಡೆಗಳಲ್ಲಿ ಒಂಬತ್ತು ಗುಳಿಗ ದೈವಗಳಿಗೆ ಒಂದೇ ಬಾರೀ ಕೋಲ ನಡೆಯುತ್ತದೆ.

ಏನಿದರ ವಿಶೇಷ..

ಹೌದು.. ದೇವಿಯ ದೂತನಾಗಿರುವ ಗುಳಿಗನಿಗೆ ದೇವಿ ಆಲಯಗಳಲ್ಲಿ ಪ್ರತ್ಯೇಕ ಸಾನಿಧ್ಯವಿರುತ್ತದೆ‌. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಟ್ಟೆಡೆ ಗ್ರಾಮದ ಬರ್ಕಜೆಯಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ನವಗುಳಿಗ ಕ್ಷೇತ್ರದಲ್ಲಿ ಒಂಬತ್ತು ಗುಳಿಗ ದೈವಗಳು ನೆಲೆಯಾಗಿದೆ. ವಿಶೇವೆಂದರೆ ಈ ಒಂಬತ್ತು ಗುಳಿಗ ದೈವಗಳಿಗೆ ಒಂದೇ ಬಾರಿ ಕೋಲ ನಡೆಯುತ್ತದೆ. ಈ ಒಂಬತ್ತು ಗುಳಿಗ ದೈವಗಳ ಅಪರೂಪದ ಕೋಲ ನೋಡಲು ಭಾರೀ ಭಕ್ತ ಜನ ಸಂದೋಹವೇ ಸೇರುತ್ತದೆ‌.

ಇದು ತುಳುನಾಡಿನಲ್ಲಿ ನವಗುಳಿಗ ನೆಲೆಯಾದ ಏಕೈಕ ಸ್ಥಳ ಇದಾಗಿದೆ. ಈ ಬಾರಿಯ 8ನೇ ವರ್ಷದ ವಾರ್ಷಿಕ ಉತ್ಸವವೂ ಅತ್ಯಂತ ಯಶಸ್ವಿಯಾಗಿ ನಡೆಯಿತು. ಈ ವೇಳೆ ಏಕಕಾಲದಲ್ಲಿ ಒಂಬತ್ತು ದೈವಗಳಿಗೆ ಕೋಲ ಸೇವೆ ಜರಗಿತು.

ಶ್ರೀ ದುರ್ಗಾಪರಮೇಶ್ವರಿ ದೇವಿಯ ಸನ್ನಿಧಿಯ ಮುಂಭಾಗದಲ್ಲೇ ಈ ನವ ಗುಳಿಗನ ಸಾನಿಧ್ಯ ಇದ್ದು, ಈ ಹಿಂದೆ ಒಂದು ಗುಳಿಗ ದೈವಕ್ಕೆ ಮಾತ್ರ ನೇಮೋತ್ಸವ ನಡೆಯುತ್ತಿತ್ತು. ಆದ್ರೆ ಪ್ರಶ್ನಾ ಚಿಂತನೆಯಲ್ಲಿ ನವಗುಳಿಗ ದೈವ ಇಲ್ಲಿ ನೆಲೆಯೂರಿದೆ ಎಂದು ತಿಳಿದುಬಂದಿತ್ತು. ಹೀಗಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ನವಗುಳಿಗ ದೈವಗಳಿಗೆ ಕೋಲ ನಡೆಯುತ್ತದೆ.

ಈ ನವ ಗುಳಿಗ ದೈವಗಳೇ ಕ್ಷೇತ್ರದ ರಕ್ಷಣೆಯನ್ನು ಮಾಡುತ್ತಿದ್ದು ನಂಬಿ ಬರುವ ಭಕ್ತರ ಸಂಕಷ್ಟಗಳನ್ನು ಸಹ ದೂರ ಮಾಡುತ್ತಿದೆ. ಕೇವಲ ಜಿಲ್ಲೆ ಮಾತ್ರವಲ್ಲದೇ ಹೊರೆ ಜಿಲ್ಲೆಯ ಭಕ್ತರು ಸಹ ಇಲ್ಲಿ ಬಂದು ಪ್ರಾರ್ಥನೆ ಮಾಡಿಕೊಂಡು ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳುತ್ತಿದ್ದಾರೆ.

Sneha Gowda

Recent Posts

ಪ್ಲೇ-ಆಫ್​ ರೇಸ್​ನಿಂದ ಹೊರ ಬಿದ್ದ ಪಂಜಾಬ್ ​: ಆರ್‌ಸಿಬಿ ಪಾಯಿಂಟ್ಸ್ ಎಷ್ಟು ?

ಐಪಿಎಲ್​ ಟೂರ್ನಿಯಲ್ಲಿ ಆರ್​ಸಿಬಿ ತಂಡ ಪ್ಲೇ-ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ನಿನ್ನೆ ಪಂಜಾಬ್ ಕಿಂಗ್ಸ್ ತಂಡವನ್ನು 60 ರನ್​ಗಳಿಂದ ಸೋಲಿಸುವ ಮೂಲಕ,…

8 seconds ago

ಉಡುಪಿ: ಇಂದಿನಿಂದ ಮೂರು ದಿನಗಳ ಕರಾವಳಿ ಕಲಾವಿದೆರ್ ತುಳು ನಾಟಕೋತ್ಸವ

ಮಲ್ಪೆಯ ಕರಾವಳಿ ಕಲಾವಿದೆರ್ ತಂಡದಿಂದ ಮೂರು ದಿನಗಳ ತುಳು ನಾಟಕೋತ್ಸವ ಇದೇ ಇಂದಿನಿಂದ (ಮೇ 10) ತೊಟ್ಟಂ ಸಾರ್ವಜನಿಕ ಗಣೇಶೋತ್ಸವ…

6 mins ago

ಇರಾನ್‌ ವಶಪಡಿಸಿಕೊಂಡ ಹಡಗಿನಲ್ಲಿದ್ದ 5 ಭಾರತೀಯ ನಾವಿಕರ ಬಿಡುಗಡೆ

ಟೆಹ್ರಾನ್ ವಶಪಡಿಸಿಕೊಂಡ ಇಸ್ರೇಲಿ-ಸಂಬಂಧಿತ ಹಡಗಿನಲ್ಲಿದ್ದ ಐವರು ಭಾರತೀಯ ನಾವಿಕರನ್ನು ಬಿಡುಗಡೆ ಮಾಡಲಾಗಿದೆ.

21 mins ago

ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ 99 ಬ್ಯಾಚ್ ನ 25ನೇ ವರ್ಷಾಚರಣೆ

ಪ್ರತಿಷ್ಠಿತ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ತನ್ನ ಮೊದಲ ಎಂ.ಬಿ.ಬಿ. ಎಸ್. ಬ್ಯಾಚ್ 99 ರ ಗುರುವಂದನ ಮತ್ತು 25ನೇ…

32 mins ago

ಹಿಂದೂಗಳ ಪವಿತ್ರ ಚಾರ್ ಧಾಮ್‌ ಯಾತ್ರೆ ಇಂದಿನಿಂದ ಆರಂಭ

ಹಿಂದೂಗಳ ಪವಿತ್ರ ಯಾತ್ರೆ ಆಗಿರುವ ಚಾರ್ ಧಾಮ್‌ ಯಾತ್ರೆ ಇಂದಿನಿಂದ ಆರಂಭವಾಗಲಿದೆ. ಕೇದಾರನಾಥ ಮತ್ತು ಯಮುನೋತ್ರಿ ದೇವಾಲಯಗಳು ಬೆಳಿಗ್ಗೆ 7…

46 mins ago

ಜೈಲಿನಲ್ಲಿರುವ ಮಾಜಿ ಸಚಿವ ಎಚ್‌.ಡಿ ರೇವಣ್ಣ ಅವರನ್ನು 3 ದಿನ ಯಾರು ಭೇಟಿ ಮಾಡುವಂತಿಲ್ಲ

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಚಿವ ಎಚ್‌.ಡಿ ರೇವಣ್ಣ ಅವರು ನಿನ್ನೆ ಜಾಮೀನು ಸಿಗದ ಹಿನ್ನೆಲೆಯಲ್ಲಿ,…

1 hour ago