Categories: ವಿಶೇಷ

ನಮ್ಮ ನಾಯಕರು ಗಾಂಧಿ ತತ್ವ ಪಾಲಿಸುತ್ತಿದ್ದಾರೆಯೇ?

ನಾವು ಈ ಪ್ರಶ್ನೆಗಳನ್ನು ನಮಗೆ ಕೇಳಿಕೊಳ್ಳುವ ದಿನಗಳು ಬಂದಿವೆ. ಸ್ವಾತಂತ್ರ್ಯ ನಂತರದ ಭಾರತ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಯಲ್ಲಿ ದಾಪುಗಾಲಿಡುತ್ತಿದೆ. ಆದರೆ ಅದರ ಜತೆಗೆ ನಮ್ಮ ನಾಯಕರು ಮಹಾತ್ಮಗಾಂಧೀಜಿಯವರ ತತ್ವಾದರ್ಶಗಳನ್ನು ಪಾಲಿಸಿದ್ದರೆ ಇವತ್ತು ದೇಶ ಜಗತ್ತು ತಿರುಗಿ ನೋಡುವಂತೆ ಮಾಡಬಹುದಿತ್ತು. ಆದರೆ..?

ದೇಶದಲ್ಲಿ ಆಗುತ್ತಿರುವ ಬೆಳವಣಿಗೆಗಳು, ಲಂಚಾವತಾರ, ಭ್ರಷ್ಟಚಾರ, ನಿರುದ್ಯೋಗ ಸಮಸ್ಯೆ, ವಂಚನೆ, ಕಳ್ಳತನ ಹೀಗೆ ಹತ್ತು ಸಮಸ್ಯೆಗಳು ದೇಶಕ್ಕೆ ಕಳಂಕವಾಗುತ್ತಿದೆ. ನಮ್ಮ ನಾಯಕರ ಅಧಿಕಾರದ ಲಾಲಸೆ, ಹಣಗಳಿಸುವ, ಆಸ್ತಿ ಮಾಡಿಡುವ, ಹಣ ಕೂಡಿಡುವ ದುಷ್ಟ ಬುದ್ದಿಗಳಿಂದಾಗಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಶ್ರೀಮಂತರು ಶ್ರೀಮಂತರಾಗಿಯೇ, ಬಡವರು ಬಡವರಾಗಿಯೇ ಉಳಿಯುವಂತಾಗಿದೆ.

ನಾಯಕರು ಗಾಂಧಿಯ ಸ್ಮರಣೆ ಮಾಡುವ ಮೂಲಕ ಗಾಂಧಿಯ ಭಾವಚಿತ್ರಗಳಿಗೆ, ಪ್ರತಿಮೆಗಳಿಗೆ ಹಾರ ಹಾಕಿ, ಪೂಜಿಸುವ ಮೂಲಕ ನಮನ ಸಲ್ಲಿಸಿಗಾಂಧಿಯ ಗುಣಗಾನ ದೊಂದಿಗೆ ಅವರ ತತ್ವಾ ದರ್ಶನ ಪಾಲನೆಯ ಬಗ್ಗೆ ಮಾತನಾಡುತ್ತಾರೆ. ಆದರೆ ಅದರಲ್ಲಿ ಎಳ್ಳಷ್ಟು ತಾವು ಪಾಲಿಸಿದ್ದರೆ ಬಹುಶಃ ದೇಶದ ಪ್ರಗತಿಯ ವೇಗ ಇನ್ನಷ್ಟು ಹೆಚ್ಚಾಗುತ್ತಿತ್ತೇನೋ? ಆದರೆ ಗಾಂಧಿಯ ತತ್ವಾದರ್ಶ ಕೇವಲ ಓಟು ಬ್ಯಾಂಕ್ ಗಳಾಗಿ ಬಳಕೆಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಬರೀ ಸ್ವಾತಂತ್ರ್ಯ ಹೋರಾಟಗಾರ ಮಾತ್ರವಲ್ಲದೆ ಸರಳ ಜೀವನದ ಮೂಲಕ ಮಹಾತ್ಮರಾಗಿ ಬದುಕಿದ ಗಾಂಧಿಯ ನಡೆಯನ್ನು ಎಷ್ಟು ಜನ ಪಾಲಿಸುತ್ತಿದ್ದಾರೆ?

ಒಂದು ವೇಳೆ ಗಾಂಧಿ ಇವತ್ತಿನ ರಾಜಕಾರಣಿಗಳಂತೆ ಸ್ವಾರ್ಥಿಯಾಗಿದ್ದರೆ ಖಂಡಿತಾ ಅವರು ದೇಶದ ಮೊದಲ ರಾಷ್ಟ್ರಪತಿಯಾಗುತ್ತಿದ್ದರು. ಆದರೆ ಅವರಿಗೆ ಅಧಿಕಾರ ಬೇಕಿರಲಿಲ್ಲ. ದೇಶದ ಜನತೆ ಬ್ರಿಟೀಷರ ದಾಸ್ಯದಿಂದ ಮುಕ್ತಿ ಕಾಣಬೇಕೆಂಬ ಒಂದೇ ಒಂದು ಹೆಬ್ಬಯಕೆಯಾಗಿತ್ತು. ಅಹಿಂಸೆಯನ್ನೇ ಮಂತ್ರವನ್ನಾಗಿಸಿಕೊಂಡು ಇಡೀ ದೇಶವನ್ನೇ ಮುನ್ನಡೆಸಿ ಬ್ರಿಟೀಷರಿಂದ ಸ್ವಾತಂತ್ರ್ಯವನ್ನು ಭಾರತೀಯರಿಗೆ ಕೊಟ್ಟ ಭಾರತಾಂಭೆಯ ಸಂಜಾತ ಗಾಂಧಿ. ಇಂತಹ ಗಾಂಧಿಯವರ ತತ್ವ, ಆದರ್ಶ, ಅವರ ಹೋರಾಟಕ್ಕೆ ನಾವೂ ಈಗ ಸ್ವಲ್ಪವಾದರೂ ಬೆಲೆ ಕೊಡುತ್ತಿದ್ದೇವೆಯೇ?

ಇವತ್ತು ಗಾಂಧಿ ಬಗ್ಗೆ ನಮ್ಮ ನಾಯಕರಲ್ಲಿ ಎಷ್ಟು ಜನ ತಿಳಿದುಕೊಂಡಿದ್ದಾರೆ? ಯಾರೋ ಬರೆದುದನ್ನು ಓದಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ ನಾಯಕರು ಗಾಂಧಿ ಬಗ್ಗೆ ಅಧ್ಯಯನ ಮಾಡಿದ್ದಾರಾ? ಅವರ ಸರಳತೆ ಮತ್ತು ಆದರ್ಶಗಳನ್ನು ತಮ್ಮ ಬದುಕಿನಲ್ಲಿ ರೂಢಿಸಿಕೊಂಡಿದ್ದಾರಾ? ತಮಗೆ ತಮ್ಮ ಮೊಮ್ಮಕ್ಕಳು ಸೇರಿದಂತೆ ತಲೆ ಮಾರಿಗೆ ಆಸ್ತಿ ಮಾಡಿಡುವ, ಸ್ವಿಸ್ ಬ್ಯಾಂಕ್ ನಲ್ಲಿ ಹಣವಿಟ್ಟು ಸದಾ ವಿದೇಶಿ ಪ್ರವಾಸದ ಮೂಲಕ ಐಷಾರಾಮಿ ಬದುಕು ನಡೆಸುತ್ತಿರುವ ನಾಯಕರಿಗೆ ವಿದೇಶಿ ಬಟ್ಟೆಗಳನ್ನು ತ್ಯಜಿಸಿದ, ದೇಶದ ಬಡ ಜನತೆಗೆ ಮೈಮುಚ್ಚಿಕೊಳ್ಳುವಷ್ಟು ಬಟ್ಟೆ ಸಿಗದಿರುವಾಗ ನಾನೇಕೆಉಡುಪುಗಳನ್ನು ಧರಿಸಬೇಕೆಂದು ತುಂಡುಡುಗೆ ತೊಟ್ಟ ಗಾಂಧಿ ಏಕೆ ನೆನಪಾಗುವುದಿಲ್ಲ?

ಸ್ವದೇಶಿ ಬಟ್ಟೆಗಳನ್ನು ತ್ಯಜಿಸಿ ಖಾದಿ ಬಟ್ಟೆಗಳನ್ನೇ ಧರಿಸಿ ಆ ಮೂಲಕ ತಮ್ಮ ದೇಶದ ನೇಕಾರರಿಗೆ ಅನ್ನಕೊಡಿ ಎಂದು ಪ್ರೆರೇಪಿಸಿದ ಗಾಂಧಿ ಅವರಲ್ಲಿದ್ದ ಕಾಳಜಿ ಇವತ್ತಿನ ನಾಯಕರಲ್ಲಿ ಏಕಿಲ್ಲ? ಪ್ರಶ್ನೆಗಳು ಉತ್ತರ ಸಿಗದೆ ನಮ್ಮಲ್ಲಿಯೇ ಉಳಿದುಬಿಡುತ್ತಿದೆ.

 

Raksha Deshpande

Recent Posts

ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಅತ್ಯಾಚಾರ ಕೇಸ್ ದಾಖಲು !

ಈಗಾಗಲೇ ಲೈಂಗಿಕ ದೌರ್ಜನ್ಯ, ಕಿರುಕುಳ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಹೆಚ್​. ಡಿ ರೇವಣ್ಣ ಪುತ್ರ, ಸಂಸದ ಪ್ರಜ್ವಲ್​​ ರೇವಣ್ಣಗೆ…

5 mins ago

ವಿಪರೀತ ಸೆಖೆಯಿದೆ ಎಂದು ಟೆರೇಸ್ ನಲ್ಲಿ ಮಲಗಿದ್ದ ಶಿಕ್ಷಕ ಸಾವು

ವಿಪರೀತ ಸೆಖೆಯಿದೆ ಎಂದು ಮನೆಯ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.

10 mins ago

ತಮಿಳಿನ ಯುವ ಸಂಗೀತ ನಿರ್ದೇಶಕ ಪ್ರವೀಣ್ ಕುಮಾರ್ ನಿಧನ

ಹೊಸ ಹೊಸ ಆಲೋಚನೆಗಳ ಮೂಲಕ ಸಂಗೀತ ಪ್ರಿಯರನ್ನು ರಂಜಿಸಿದ್ದ ತಮಿಳಿನ ಯುವ ಸಂಗೀತ ನಿರ್ದೇಶಕ ಪ್ರವೀಣ್ ಕುಮಾರ್ ನಿಧನರಾಗಿದ್ದಾರೆ.

25 mins ago

ಕೋವಿಶೀಲ್ಡ್ ಪಡೆದ ಬಳಿಕ ಭಾರತದ ಇಬ್ಬರು ಹೆಣ್ಮಕ್ಕಳು ಸಾವು !

ಕೊರೊನಾ ಸಮಯದಲ್ಲಿ ಭಾರೀ ಸುದ್ದಿಯಲ್ಲಿದ್ದ ಔಷಧಿಗಳ ತಯಾರಿಕಾ ಸಂಸ್ಥೆ Oxford-AstraZeneca, ಆಘಾತಕಾರಿ ಮಾಹಿತಿ ಒಂದನ್ನು ಕೊನೆಗೂ ಕೋರ್ಟ್​ ಮುಂದೆ ಒಪ್ಪಿಕೊಂಡಿದೆ.

31 mins ago

ಏಳು ವರ್ಷಗಳ ಬಳಿಕ ಲಕ್ಷದ್ವೀಪದಿಂದ ಮಂಗಳೂರಿಗೆ ಬಂದ ಪ್ರಯಾಣಿಕ ಹಡಗು

ಏಳು ವರ್ಷಗಳ ಬಳಿಕ ಮತ್ತೆ ಮಂಗಳೂರು ಲಕ್ಷದ್ವೀಪದ ನಡುವೆ ಹೈಸ್ಪೀಡ್ ಹಡಗು ಸಂಚಾರ ಆರಂಭವಾಗಿದ್ದು, ಗುರುವಾರ ಸಂಜೆ ಲಕ್ಷದ್ವೀಪದಿಂದ 150ಕ್ಕೂ…

40 mins ago

ಬೃಹತ್ ಗಾತ್ರದ ಮರ ಬಿದ್ದು ಹೊಸ ಕಾರು ಜಖಂ

ನಿಂತಿದ್ದ ಹೋಂಡಾ ಎಲಿವೇಟ್ SUV ಬ್ರಾಂಡ್ ಹೊಸ ಕಾರಿನ ಮೇಲೆ ಬೃಹತ್ ಮರವೊಂದು ಬಿದ್ದ ಘಟನೆ ಲಾವೆಲ್ಲೇ ರೋಡ್​ನಲ್ಲಿ ನಡೆದಿದೆ.

59 mins ago