ವಿಡಿಯೊ

ಭಾರತೀಯ ಸೇನೆ ಸೇರುವ ಕನಸಿನಲ್ಲಿ ಮ್ಯಾಕ್ಡೊನಾಲ್ಡ್ ಹುಡುಗನ ಅರ್ಧರಾತ್ರಿ ಓಟ!

ನೊಯ್ಡಾದ ಸೆಕ್ಟರ್ 16ರ ಮ್ಯಾಕ್ಡೊನಾಲ್ಡ್ ಘಟಕವೊಂದರಲ್ಲಿ ಕೆಲಸ ಮಾಡುವ ಹುಡುಗ ರಾತ್ರಿ 12ರ ಸುಮಾರಿಗೆ ತನ್ನ ಶಿಫ್ಟ್ ಮುಗಿಸಿ ರಸ್ತೆಯಲ್ಲಿ ಓಡಿಕೊಂಡೇ ಮನೆ ಸೇರುತ್ತಾನೆ. ಅರ್ಧರಾತ್ರಿಯಲ್ಲಿ ಈತನ ಓಟವನ್ನು ಗಮನಿಸಿ ವಾಹನದಲ್ಲಿ ಸಾಗುತ್ತಿರುವವರು ಲಿಫ್ಟ್ ಕೊಡುವುದಕ್ಕೆ ಮುಂದಾದರೂ ಈತ ನಯವಾಗಿ ನಿರಾಕರಿಸುತ್ತಾನೆ.

ಏಕೆಂದರೆ ಭಾರತೀಯ ಸೇನೆ ಸೇರುವುದು ಈತನ ಗುರಿ. ಅದಕ್ಕಾಗಿಯೇ ಈತ ಫಿಟ್ನೆಸ್ ಶುರುಮಾಡಿದ್ದಾನೆ. ಬೆಳಗ್ಗೆ ತನ್ನೆಲ್ಲ ಕೆಲಸಗಳ ನಡುವೆ ಬಿಡುವು ಸಿಗುವುದಿಲ್ಲವಾದ್ದರಿಂದ ರಾತ್ರಿ ಕೆಲಸ ಮುಗಿಸಿ ಓಡುತ್ತಲೇ ಮನೆ ಸೇರುವುದಾಗಿ ಪ್ರದೀಪ್ ಮೆಹ್ರಾ ಎಂಬ ಈ ಹುಡುಗ ಹೇಳಿಕೊಂಡಿದ್ದಾನೆ.

ವಿನೋದ್ ಕಪ್ರಿ ಎಂಬ ಪತ್ರಕರ್ತ ಈತನ ಜತೆಗಿನ ಸಂಭಾಷಣೆಯನ್ನು ರೆಕಾರ್ಡ್ ಮಾಡಿ ಟ್ವಿಟ್ಟರಿನಲ್ಲಿ ಹಾಕಿದ್ದು, ಇದೀಗ ಅದು ಭಾರಿ ಟ್ರೆಂಡ್ ಆಗಿದೆ. ಜೀವನೋತ್ಸಾಹ ಮತ್ತು ಕನಸು ಬೆಂಬತ್ತುವುದನ್ನು ಈ ಹುಡುಗನಿಂದ ಕಲಿಯಬೇಕು ಎಂದು ಲಕ್ಷಾಂತರ ಜನ ಪ್ರಶಂಸಿಸಿದ್ದಾರೆ.

Sneha Gowda

Recent Posts

ಬೀದರ್: ಗಡಿಭಾಗದಲ್ಲಿ ಮಾದರಿ ಸರ್ಕಾರಿ ಪ್ರೌಢಶಾಲೆ

ಶಿಕ್ಷಕರು ಮತ್ತು ಸಾರ್ವಜನಿಕರು ಒಗ್ಗಟ್ಟಿನಿಂದ ಶ್ರಮಿಸಿದರೆ, ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳನ್ನು ಮೀರಿಸುವಂತೆ ಬೆಳೆಯುತ್ತವೆ. ಇದಕ್ಕೆ ಪಟ್ಟಣದ ಸರ್ಕಾರಿ ಪ್ರೌಢಶಾಲೆ…

5 seconds ago

ಜೊಮ್ಯಾಟೊದಲ್ಲಿ ಆರ್ಡರ್‌ : ಪನೀರ್‌ ಬಿರಿಯಾನಿಯಲ್ಲಿ ಚಿಕನ್‌ ಪೀಸ್‌

ಜೊಮ್ಯಾಟೊದಿಂದ ಆರ್ಡರ್‌ ಮಾಡಿದ ಪನೀರ್‌ ಬಿರಿಯಾನಿಯಲ್ಲಿ ಚಿಕನ್‌ ಪೀಸ್‌ ಸಿಕ್ಕಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

13 mins ago

ಅಂಜಲಿ‌ ಕೊಲೆಗೆ ಪೊಲೀಸರೇ ಹೊಣೆ : ದಿಂಗಾಲೇಶ್ವರ ಸ್ವಾಮೀಜಿ ಆರೋಪ

ಅಂಜಲಿ ಕೊಲೆಗೆ ಪೊಲೀಸರೆ ಹೊಣೆ ಅವರ ನಿರ್ಲಕ್ಷ್ಯದಿಂದ ಈ ದುರ್ಘಟನೆ ನಡೆದಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಕಿಡಿ ಕಾರಿದ್ದಾರೆ. ಅಂಜಲಿ…

17 mins ago

ಗೆಲ್ಲುತ್ತೀ ಎಂದು ಪಂಜುರ್ಲಿ ದೈವ ಹೇಳಿದೆ, ಹಿಂದೆ ಸರಿಯೊಲ್ಲ: ರಘುಪತಿ ಭಟ್

ಮೂರು ಬಾರಿ ಶಾಸಕನಾಗಿದ್ದ ತಮಗೆ ಪಕ್ಷದಲ್ಲಿ ಸಿಗಬೇಕಾಗಿದ್ದ ಮನ್ನಣೆ ಗೌರವ ಸಿಕ್ತಿಲ್ಲ. ಆದ್ದರಿಂದ ತಾನು ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ…

26 mins ago

ಕಾರಿನಲ್ಲಿ ಮಗು ಮರೆತು ಮದ್ವೆಗೆ ಹೋದ ದಂಪತಿ : ನರಳಿ ಪ್ರಾಣ ಬಿಟ್ಟ ಕಂದಮ್ಮ

ನಗರದ ಕೋಟದಲ್ಲಿ ಕಾರಿನಲ್ಲೇ ಮಗುವನ್ನು ಮರೆತು ದಂಪತಿ ಮದುವೆಗೆ ತೆರಳಿದ್ದು ಮಗು ನರಳಿ ನರಳಿ ಕಾರಿನಲ್ಲೆ ಪ್ರಾಣ ಬಿಟ್ಟಿರುವ ದಾರುಣ…

36 mins ago

ʼಸಮಸ್ಯೆ ಬಗೆಹರಿಸಿ ಇಲ್ಲ ಒಂದು ತೊಟ್ಟು ವಿಷ ಕೊಡಿʼ ಎಂದ ಗ್ರಾಮಸ್ಥರು

ಕಳೆದ 20 ವರ್ಷಗಳಿಂದ ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಮಳೆ ಬಂದರೆ ಮನೆಗಳಿಗೆ ನೀರು ನುಗ್ಗುತ್ತದೆ. ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದ್ದು,…

36 mins ago