Categories: ಸಮುದಾಯ

ಬಂಟ್ವಾಳ : ಬ್ರಹ್ಮಕಲಶದಿಂದ ಮನಸ್ಸಿನ ಶುದ್ಧತೆ, ಕೊಂಡೆವೂರು ಶ್ರೀ ಆಶೀರ್ವಚನ

ಬಂಟ್ವಾಳ : ಬ್ರಹ್ಮಕಲಶದೊಂದಿಗೆ ಭಕ್ತರ ಮನಸ್ಸು ಶುದ್ಧವಾಗುತ್ತದೆ. ನಮ್ಮ ಅಂತರಂಗವನ್ನು‌ ಶುದ್ಧಿ ಕರಿಸುವ ಜೊತೆಗೆ ಜ್ಞಾನದ ಬೆಳಕನ್ನು ನೀಡುವ ಕೆಲಸ ಶ್ರೀಕೃಷ್ಣ ಗುರೂಜಿಯವರಿಂದ ಆಗುತ್ತಿದೆ ಎಂದು ಉಪ್ಪಳ ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ನುಡಿದರು.

ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದಲ್ಲಿ ಮಾ.೯ರ ವರೆಗೆ ನಡೆಯಲಿರುವ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು‌.

ರಾಮನಗರ ಸೋಲೂರು ಆರ್ಯ ಈಡಿಗ ಸಂಸ್ಥಾನದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಭಜನೆಯ ಶಕ್ತಿ ಅಪಾರ. ಪುಣ್ಯ ಕ್ಷೇತ್ರಗಳ ಬಗ್ಗೆ ಭಕ್ತಿ ಅಗತ್ಯ. ಧೈರ್ಯದಿಂದ ಬದುಕುವ ಮನಸ್ಸು ನಮ್ಮದಾಗಬೇಕು. ವೈದಿಕ ಪರಂಪರೆಯ ಪಾಲನೆ ಅಗತ್ಯ ಎಂದರು.

ನಿಪ್ಪಾಣಿಯ ಶ್ರೀ ಅರುಣಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಮನುಷತ್ವ ನಮ್ಮಲ್ಲಿರಬೇಕು. ದೈವಾನುಗ್ರಹವಿದ್ದರೆ ಎಲ್ಲವೂ ಪ್ರಾಪ್ತಿಯಾಗಲು ಸಾಧ್ಯ. ಭಕ್ತಿಯ ಪರಾಕಾಷ್ಠೆ ನಮ್ಮಲ್ಲಿರಬೇಕು. ನಮ್ಮೊಳಗಿನ ಜ್ಞಾನ ವೃದ್ಧಿಯಾಗಬೇಕು. ಭಕ್ತಿಯ ಮೂಲಕ ಸಂಚರಿಸಿದರೆ ಎಲ್ಲವನ್ನು ಗೆಲ್ಲಬಹುದು. ಪಂಚ ಯಜ್ಞದೊಂದಿಗೆ ಜೀವನ ಸಾರ್ಥಕ್ಯ ಮಾಡುವ ಮನಸ್ಸು ನಮ್ಮದಾಗಬೇಕು ಎಂದರು.

ವಾಂತಿಚಾಲ್ ಶ್ರೀ ಮಂತ್ರಗುಳಿಗ ದೈವಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ವಾಂತಿಚಾಲ್  ಧಾರ್ಮಿಕ ಉಪನ್ಯಾಸ ನೀಡಿದರು. ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಶ್ರೀಕೃಷ್ಣ ಗುರೂಜಿ, ವಿಟ್ಲ ಬಿಲ್ಲವ ಸಂಘದ ಅಧ್ಯಕ್ಷರಾದ ಹರೀಶ್ ಸಿ.ಹೆಚ್. , ಬಾಲಕೃಷ್ಣ ಕಾರಂತ ಎರುಂಬು, ಉದ್ಯಮಿ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೆ.ಎಸ್. ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದ ಸಾಧನೆಗೆ ಯಶೋಧರ ಬಂಗೇರ ಅಳಿಕೆ, ಭಜನಾ ಕ್ಷೇತ್ರದ ಸಾಧನೆಗೆ ನಾರಾಯಣ ಶೆಟ್ಟಿ ಉಕ್ಕುಡ, ಖ್ಯಾತ ಯಕ್ಷಗಾನ ಕಲಾವಿದ ಗುಡ್ಡಪ್ಪ ಸುವರ್ಣ, ಕಲಾಕ್ಷೇತ್ರದ ಸಾಧನೆಗಾಗಿ ಗಣೇಶ್ ಆಚಾರ್ಯ ಕೊಂದಲಕೋಡಿ ಹಾಗೂ ಚಂದ್ರಶೇಖರ ಕುಕ್ಕಾಜೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಶ್ರಾವಣ್ ಉಳ್ಳಾಲ ಹಾಗೂ ಭರತನಾಟ್ಯ ಗುರು ಕಿರಣ್ ಉಳ್ಳಾಲ್ ಅವರನ್ನು ಸನ್ಮಾನಿಸಲಾಯಿತು. ಪೆರುವಾಯಿ ಹಾಗೂ ಮಾಣಿಲ ಗ್ರಾಮದ ಆಶಾ ಕಾರ್ತೆಯರಾದ ರೇವತಿ ಪೆರುವಾಯಿ, ಸುರೇಖ ಎಸ್., ವನಮಾಲ ಓಣಿಬಾಗಿಲು, ಬೇಬಿ ಪೆರುವಾಯಿ, ರತ್ನಾವತಿ ತಾರಿದಳ, ಜಾನಕಿ ಕಕ್ವೆ ರವರನ್ನು ಗೌರವಿಸಲಾಯಿತು. ಸುಶ್ಮಿತಾ ಕೆ., ಸ್ವಾತಿ, ಸುಕನ್ಯ, ಕಾವ್ಯ ಶ್ರೀ, ದೀಕ್ಷ, ಶ್ರೀಜ ಅವರು ಸನ್ಮಾನ ಪತ್ರ ವಾಚಿಸಿದರು. ಸುಕನ್ಯಾ,  ಕಾವ್ಯಶ್ರೀ ಪ್ರಾರ್ಥಿಸಿದರು.

ಕ್ಷೇತ್ರದ ಬ್ರಹ್ಮಕಲಶೋತ್ಸವದ ಅಧ್ಯಕ್ಷ ಡಾ. ಗೀತಪ್ರಕಾಶ್ ಸ್ವಾಗತಿಸಿದರು. ಕುಕ್ಕಾಜೆ ಕಾಳಿಕಾ ಮಹಿಳಾ ಸಮಿತಿಯ ಅಧ್ಯಕ್ಷರಾದ ಅನುರಾಧ ಪಳನೀರು ವಂದಿಸಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.

Sneha Gowda

Recent Posts

ಆತ್ಮಹತ್ಯೆಗೆ ಮುನ್ನ ನಟ ಚಂದು ಲಾಸ್ಟ್​ ಮೆಸೇಜ್​ ಇದು

ಇದು ತೆಲುಗು ಕಿರುತೆರೆ ನಟ ಚಂದು ಆತ್ಮಹತ್ಯೆಗೂ ಮುನ್ನ ಬರೆದ ಸಂದೇಶ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚಂದುವಿನ ಕೊನೆಯ ಮೆಸೇಜ್​…

3 mins ago

ಕರ್ನಾಟಕದ ಹಲವೆಡೆ ಮೇ 19ರಿಂದ 21 ರವರೆಗೆ ಭಾರೀ ಮಳೆ ಸಾಧ್ಯತೆ

ಕರ್ನಾಟಕದ ಹಲವೆಡೆ ಮೇ 19ರಿಂದ 21 ರವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

4 mins ago

ಜೀವ -ಜಲ ಉಳಿಸಲು ಸ್ವಯಂ ಪ್ರೇರಣೆಯ ಪಾಲ್ಗೊಳ್ಳುವಿಕೆ ಮುಖ್ಯ: ಪ್ರಭಾಕರ ಶರ್ಮಾ

ನೀರಿನ ಮಿತ ಬಳಕೆ, ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರು  ಸ್ವಯಂ ಪ್ರೇರಿತರಾಗಿ ತಮ್ಮ ಇತಿ ಮಿತಿಯಲ್ಲಿ ಸಣ್ಣ ಕೊಡುಗೆಗಳನ್ನು ನೀಡುವ ಮೂಲಕ…

6 mins ago

ತಲೆ ಮೇಲೆ ಇಟ್ಟಿಗೆ ಎತ್ತಿ ಹಾಕಿ ಗೆಳೆಯನಿಂದಲೇ ಕೊಲೆ

ಮದ್ಯ ಸೇವನೆಗೆಂದು ಕರೆದೊಯ್ದು ಕೊಲೆ ಮಾಡಿರುವ ಘಟನೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

19 mins ago

ಏನು ಕ್ರಮ ತೆಗೆದುಕೊಳ್ಳಬೇಕೋ ಅದು ಸರ್ಕಾರದ ಜವಾಬ್ದಾರಿ: ಹೆಚ್.ಡಿ ದೇವೇಗೌಡ

ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಹೋಗಿದ್ದಾರೆ. ಆದ್ರೆ ನೆಲದ ಕಾನೂನು ವ್ಯಾಪ್ತಿಯಲ್ಲಿ ಏನೇನು ಕ್ರಮ ತೆಗೆದುಕೊಳ್ಳಬೇಕೋ ಅದು ಸರ್ಕಾರದ ಜವಾಬ್ದಾರಿ.…

28 mins ago

ಎವರೆಸ್ಟ್ ಚಿಕನ್ ಮಸಾಲಾ ನಿಷೇದಕ್ಕೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ

ಎವರೆಸ್ಟ್ ಚಿಕನ್ ಮಸಾಲಾದಲ್ಲಿ ಎಥಿಲಿನ್ ಆಕ್ಸೈಡ್ ಪ್ರಮಾಣ ಹೆಚ್ಚಾಗಿರುವುದರಿಂದ ಇದನ್ನು ಬಳಸದಂತೆ ಅಧಿಕಾರಿಗಳಿಂದ ಉತ್ತರ ಕನ್ನಡ ಜಿಲ್ಲೆ ಆಹಾರ ಸುರಕ್ಷತಾ…

32 mins ago