Categories: ಸಮುದಾಯ

ಕುಂದಾಪುರ: ಮಾರಿ ಕೋಣನ ವೈಭವದ ಮೆರವಣಿಗೆ ಸಂಪನ್ನ

ಕುಂದಾಪುರ: ಹಕ್ಲಾಡಿ ಗ್ರಾಮದ ಕೆಳಾಕಳಿ ಶ್ರೀ ಮಾರಿಕಾಂಬಾ ದೇವಿ ಜಾತ್ರಾಮಹೋತ್ಸವದ ಪ್ರಯುಕ್ತ ಕಳೆದ ಮಂಗಳವಾರದಿಂದ ಆರಂಭಗೊಂಡಿದ್ದ ಮಾರಿ ಕೋಣನ ಭವ್ಯ ಮೆರವಣಿಗೆ ಮಂಗಳವಾರ ಸಂಪನ್ನಗೊಂಡಿತು.

ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿ ಅಂತೆ ಕೆಳಾಕಳಿ ಅಮ್ಮನವರ ಜಾತ್ರಮಹೋತ್ಸವದ ಒಂದು ಮಂಗಳವಾರದ ಮೊದಲು ದೈವ ಸ್ವರೂಪವನ್ನು ಹೊಂದಿರುವ ಮಾರಿ ಕೋಣನ ಮೆರವಣಿಗೆ ಚಂಡೆ,ಕೊಳಲು ಸದ್ದಿನೊಂದಿಗೆ ಗ್ರಾಮದಲ್ಲಿ ಸಾಗುತ್ತದೆ.ಗ್ರಾಮದ ಜನರು ಕೋಣನಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಿ ಕಾಣಿಕೆಯನ್ನು ನೀಡುತ್ತಾರೆ.ಮಾರಿ ಕೋಣನ ಮೆರವಣಿಗೆ ಆರಂಭಗೊಂಡ ಮುಂದಿನ ಮಂಗಳವಾರದಂದು ಅಮ್ಮನವರ ಜಾತ್ರೆ ನಡೆಯುತ್ತದೆ.ಅಮ್ಮನವರ ಜಾತ್ರೆ ದಿನದಂದು ಒಂದು ವಾರಗಳ ಕಾಲ ಗ್ರಾಮದ ಸುತ್ತಾ ಪ್ರದಕ್ಷಿಣೆ ಹಾಕಿ ಬಂದ ಮಾರಿ ಕೋಣನಿಗೆ ದೇವಸ್ಥಾನ ಎದುರುಗಡೆ ಆರತಿ ಬೆಳಗಿ ತೀರ್ಥವನ್ನು ಪ್ರೋಕ್ಷಣೆ ಮಾಡಿದಾಗ ಮಾರಿಕೋಣ ಮೆರವಣಿಗೆ ಅಲ್ಲಿಗೆ ಸಂಪನ್ನಗೊಳ್ಳುತ್ತದೆ.

ಶಿರಸಿ ಕೆಳಾಕಳಿಗೂ ಅವಿನಾಭವ ಸಂಬಂಧ:ಕೆಳಾಕಳಿ ಶ್ರೀ ಮಾರಿಕಾಂಬಾ ದೇವಿಯನ್ನು ಗ್ರಾಮದ ಜನರು,ನಂಬಿದ ಭಕ್ತರು ಅಮ್ಮ ಎಂದು ಕರೆಯುತ್ತಾರೆ.ಕೆಳಾಕಳಿ ಅಮ್ಮನವರ ಸನ್ನಿಧಾನಕ್ಕೆ ಶತ ಶತಮಾನದ ಇತಿಹಾಸವಿದೆ.ಶಿರಸಿ ಮಾರಿಕಾಂಬಾ ದೇವಿ ಅಕ್ಕನಾದರೆ,ಕೆಳಾಕಳಿ ಅಮ್ಮ ತಂಗಿ ಎನ್ನೋದು ಭಕ್ತರ ನಂಬಿಕೆ ಆಗಿದೆ. ಶಿರಸಿ ಮಾರಮ್ಮನ ಜಾತ್ರೆಯಲ್ಲಿ ನಡೆಯುವ ನೇವ ನಿಯಮಗಳು ಕೆಳಾಕಳಿ ಅಮ್ಮನವರ ಜಾತ್ರೆಯಲ್ಲಿ ನಡೆಯುವುದು ವಿಶೇಷವಾದ ಸಂಗತಿ.

ಎರಡು ವರ್ಷಕ್ಕೊಮ್ಮೆ ಜಾತ್ರೆ:ಕೆಳಾಕಳಿ ಮಾರಿಕಾಂಬಾ ದೇವಿ ಜಾತ್ರಮಹೋತ್ಸವ ಕಾರ್ಯಕ್ರಮ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ಕಷ್ಟ ಕಾಲದಲ್ಲಿ ಹೇಳಿಕೊಂಡ ಹರಕೆಯನ್ನು ಸಲ್ಲಿವುದಕ್ಕೆ ಭಕ್ತರಿಗೆ ಜಾತ್ರೆ ಸಮಯದಲ್ಲಿ ಅವಕಾಶವಿದೆ.ತನ್ನ ಆಲಯದಿಂದ ವೈಭವದ ಮೆರವಣಿಗೆ ಮೂಲಕ ಬೀಡಿಕೆಯಲ್ಲಿ ನಿಂತ ಅಮ್ಮನವರು,ಮೂರು ದಿನಗಳ ಕಾಲ ಬೀಡಿಕೆಯಲ್ಲಿ ನೆಲೆ ನಿಂತು ಭಕ್ತರು ಸಲ್ಲಿಸುವ ವಿಶೇಷವಾದ ಹರಕೆಯನ್ನು ಸ್ವೀಕಾರ ಮಾಡುತ್ತಾಳೆ. ಬೇವು ಊಡಿಸುವುದು,ಸುತ್ತಕ್ಕಿ ಸೇವೆ, ಕಸ ಗುಡಿಸುವ ಸೇವೆಯನ್ನು ಭಕ್ತರು ಜಾತ್ರೆ ಸಮಯದಲ್ಲಿ ಮಡಿಮೈಲಿಗೆಯಲ್ಲಿದ್ದು ಅಮ್ಮನವರಿಗೆ ಸಮರ್ಪಣೆ ಮಾಡುತ್ತಾರೆ. ಮೂರು ದಿನಗಳ ಬೀಡಿಕೆಯಲ್ಲಿ ನೆಲೆ ನಿಂತ ಅಮ್ಮನವರು ಗುರುವಾರ ಮಧ್ಯರಾತ್ರಿ ವೈಭವದ ಮೆರವಣಿಗೆ ಮೂಲಕ ಪುರಪ್ರವೇಶ ನೆರವೇರುತ್ತದೆ.

Sneha Gowda

Recent Posts

ಆರ್ಭಟಿಸಿ ಬಂದ ಮಳೆಗೆ ಸಿಡಿಲು ಬಡಿದು ಆರು ಮಂದಿ ಬಲಿ

ನೆನ್ನ ದೇಶದ ಹಲವೆಡೆ ಧಾರಕಾರ ವಾಗಿ ಮಳೆ ಸುರಿದಿದೆ. ಬಹಳ ದಿನಗಳ ನಂತರ ವರುಣ ಭೂಮಿಗೆ ತಂಪೆರದಿದ್ದಾನೆ. ಆದರೆ ಬಂಗಾಳದಲ್ಲಿ…

18 mins ago

ಮಕ್ಕಳಾಗದ ದಂಪತಿಗೆ ಗುಡ್ ನ್ಯೂಸ್ : ಐವಿಎಫ್‌ ಈಗ ಸರ್ಕಾರಿ ಆಸ್ಪತ್ರೆಯಲ್ಲೂ ಲಭ್ಯ

ಹಲವು ದಂಪತಿಗಳಿಗೆ ಮಕ್ಕಳ್ಳಿಲ್ಲದ ಕೊರತೆ ಕಾಡುತ್ತಿವೆ. ಕೆಲವು ದಂಪತಿಗಳು ಹರಕೆ ಹೊರುತ್ತಾರೆ ಇನ್ನೂ ಕೆಲವರು ಐವಿಎಫ್ ನಂತಹ ಚಿಕಿತ್ಸೆ ಮೊರೆ…

50 mins ago

ದೇಶದ 93 ಲೋಕಸಭಾ ಕ್ಷೇತ್ರಗಳಲ್ಲಿ 3ನೇ ಹಂತದ ಮತದಾನ ಶುರು

ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದ ಆರಂಭಗೊಂಡಿದೆ. ದೇಶಾದ್ಯಂತ ಇಂದು 93 ಲೋಕಸಭಾ ಸ್ಥಾನಗಳಿಗೆ…

1 hour ago

ಬೆಳಗ್ಗೆ ಖಾಲಿ ಹೊಟ್ಟೆಗೆ ಹಣ್ಣಿನ ಜ್ಯೂಸ್ ಕುಡಿಯಬಾರದು ಯಾಕೆ?

ಬೆಳಿಗ್ಗೆ ಎದ್ದ ಬಳಿಕ ಖಾಲಿಹೊಟ್ಟೆಯಲ್ಲಿ ಪ್ರಥಮ ಆಹಾರವಾಗಿ ಹಣ್ಣಿನ ರಸಗಳನ್ನು ಸೇವಿಸಿದರೆ ಇದರಿಂದ ರಕ್ತದಲ್ಲಿರುವ ಸಕ್ಕರೆಯ ಮಟ್ಟ ಥಟ್ಟನೇ ಏರುವುದು,…

2 hours ago

ಇಂದಿನ ರಾಶಿ ಫಲ : ಈ ರಾಶಿಯವರಿಗೆ ದಿಢೀರ್ ಪ್ರಯಾಣ ಸಾಧ್ಯತೆ

ಆರೋಗ್ಯ ಮಧ್ಯಮವಾಗಿರಲಿದೆ. ಹಣಕಾಸು ಬಾಕಿ ವ್ಯವಹಾರಗಳು ಪೂರ್ಣವಾಗಲಿದೆ. ಸಂಗಾತಿಯ ಆರೋಗ್ಯದ ಕಡೆಗೆ ಗಮನ ಇರಲಿ. ಆಮಂತ್ರಣ ಸಿಗುವ ಸಾಧ್ಯತೆ ಇದೆ.…

2 hours ago

ಇಂದು 2ನೇ ಹಂತದ ಮತದಾನ : ಮತದಾರರ ಪಟ್ಟಿಯ ಹೆಸರನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನವು ಇಂದು (ಮೇ 7) ನಡೆಯಲಿದೆ. ಕರ್ನಾಟದಲ್ಲಿ ಎರಡನೇ ಅಥವಾ ಕೊನೆಯ ಹಂತದ ಮತದಾನವೂ…

2 hours ago