Categories: ಸಮುದಾಯ

ಕೆ.ಆರ್.ಪೇಟೆ: ಮಾದಾರ ಚನ್ನಯ್ಯ ದಾಳದ ಹಬ್ಬ ಆಚರಣೆ

ಕೆ.ಆರ್.ಪೇಟೆ: ಕೊರೋನಾ ಹಿನ್ನಲೆಯಲ್ಲಿ ಕಳೆದ ಮೂರು ವರ್ಷಗಳಿಂದ ನಿಂತು ಹೋಗಿದ್ದ ತಾಲೂಕಿನ ಹೊಸಹೊಳಲು ಮಾದಾರ ಚನ್ನಯ್ಯ ದಾಳದ ಹಬ್ಬವನ್ನು ಎರಡು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲಾಯಿತು.

ಹಬ್ಬದ ಹಿನ್ನಲೆಯಲ್ಲಿ ಯುವತಿಯರು, ಮಹಿಳೆಯರು ತಂಬಿಟ್ಟು ಆರತಿ ಹಾಗೂ ಪೂರ್ಣ ಕುಂಭ ಕಳಸದೊಂದಿಗೆ ಗ್ರಾಮದಿಂದ ಹೊರಟು ಊರಿನ ಹೊರಗೆ ಇರುವ ಕೆರೆಯ ಪಕ್ಕದಲ್ಲಿರುವ ಜಮೀನಿನಲ್ಲಿ ಒಂದು ಚರ್ಮದಾಳ ಹಾಗೂ ಇನ್ನೊಂದು ಬಟ್ಟೆದಾಳವನ್ನು ತಯಾರು ಮಾಡಿ ಅದನ್ನು ಐದು ಹೆಣ್ಣುಮಕ್ಕಳಿಂದ ವಿಶೇಷ ಪೂಜೆಯನ್ನು ಮಾಡಿಸಿದರು. ಇದೇ ವೇಳೆ ಯುವಕರು ಪಟಾಕಿ‌ ಸಿಡಿಸಿ ಕುಣಿದು ಕುಪ್ಪಳಿಸಿದರೆ. ಇಡೀ ಗ್ರಾಮವೇ ಸಡಗರ ಸಂಭ್ರಮದಿಂದ ಹಬ್ಬವನ್ನು ಆಚರಿಸಿತು.

ಹಬ್ಬದಲ್ಲಿ ಪಾಲ್ಗೊಂಡು ಹಬ್ಬದ ಮಾಹಿತಿ ನೀಡಿದ ಯಜಮಾನರಾದ ಎಚ್ ಎಂ ಪುಟ್ಟರಾಜು ಅವರು, ಗ್ರಾಮೀಣ ಪ್ರದೇಶಗಳಲ್ಲಿ ಆಚರಿಸುವ ಹಬ್ಬಹರಿದಿನಗಳು ಹಳ್ಳಿಗಳ ಸೊಗಡಿನ ಮಹತ್ವವನ್ನು ಹೆಚ್ಚಿಸುತ್ತವೆ. ನಮ್ಮ ಗ್ರಾಮದಲ್ಲಿ ಪ್ರತಿವರ್ಷವೂ ಮಾದಾರ ಚನ್ನಯ್ಯ ದಾಳದ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಮಹಾಮಾರಿ ಕೊರೋನಾ ವೈರಸ್ ನ ಉಪಟಳದಿಂದ ಎರಡ್ಮೂರು ವರ್ಷಗಳಿಂದ ಹಬ್ಬವನ್ನು ಆಚರಿಸಲಾಗಲಿಲ್ಲ‌ ಎಂದರು.

ಈ ವೇಳೆ ಎಸ್ ಶಿವಣ್ಣ, ಗಣೇಶ್, ಹೆಚ್ ಬಿ ಬಸವರಾಜು, ಹೆಚ್ ಎಂ ಪುಟ್ಟರಾಜು, ಶಿವನಂಜಯ್ಯ, ನಾಗರಾಜು, ಹೆಚ್ ಪುಟ್ಟರಾಜು, ರಾಜು, ಸೊಸೈಟಿ ಉಪಾಧ್ಯಕ್ಷ ಸಿದ್ದಯ್ಯ, ಹೆಚ್ ಬಿ ಚಂದ್ರಶೇಖರ್, ಅನಸೂಯಾ ರಾಜು, ಕಲಾವಿದ ಪುಟ್ಟಸ್ವಾಮಿ, ಸುರೇಶ್ ಹರಿಜನ, ಪೂಜಾರಿ ಯಾಲಕ್ಕಯ್ಯ, ದೇವರಾಜು, ಅರ್ಜುನ, ನಾಗೇಶ್ ಸೇರಿದಂತೆ ಗ್ರಾಮದ ಹಿರಿಯರು, ಯುವಕರು ಯುವತಿಯರು, ಮಹಿಳೆಯರು ಮಕ್ಕಳು ಶ್ರದ್ದಾ ಭಕ್ತಿಯಿಂದ ಪಾಲ್ಗೊಂಡಿದ್ದರು.

Sneha Gowda

Recent Posts

ಸಿಟಿ ಸೆಂಟರ್ ಮಾಲ್ ಗೆ ಬಂದಿದ್ದ ಮಹಿಳೆ ನಾಪತ್ತೆ

ತನ್ನ ತಾಯಿಯೊಂದಿಗೆ ನಗರದ ಸಿಟಿ ಸೆಂಟರ್ ಮಾಲ್ ಗೆ ಬಂದಿದ್ದ ಯುವತಿ ಕಾಣೆಯಾದ ಬಗ್ಗೆ ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.…

8 mins ago

ಪ್ರಜ್ವಲ್‌ ವಿಡಿಯೋ ಪ್ರಕರಣ: ಸಂತ್ರಸ್ತೆಯರ ನೆರವಿಗೆ ನಿಲ್ಲುವಂತೆ ಸಿದ್ದರಾಮಯ್ಯಗೆ ರಾಹುಲ್‌ ಪತ್ರ

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರಿಂದ ಅತ್ಯಾಚಾರಕ್ಕೊಳಗಾಗಿರುವ ಸಂತ್ರಸ್ತೆಯರ ನೆರವಿಗೆ ನಿಲ್ಲಿ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು…

17 mins ago

ಪ್ರವಾಸಕ್ಕೆ ಬಂದಿದ್ದ ಬಾಲಕಿ ಭದ್ರಾ ನದಿಯಲ್ಲಿ ಮುಳುಗಿ ದಾರುಣ ಸಾವು

ಪೋಷಕರೊಂದಿಗೆ ಪ್ರವಾಸಕ್ಕೆ ಬಂದಿದ್ದ ಬಾಲಕಿಯೊಬ್ಬಳು ಸ್ನಾನ ಮಾಡಲೆಂದು ನದಿಗೆ ಇಳಿದಿದ್ದಾಗ ನೀರಿನಲ್ಲಿ ಮುಳುಗಿ ಸಾವನಪ್ಪಿರುವ ದಾರುಣ ಘಟನೆ ಕಳಸ ತಾಲೂಕಿನ…

21 mins ago

ರೋಹಿತ್‌ ವೇಮುಲ ದಲಿತನಲ್ಲ : ಮರು ತನಿಖೆಗೆ ತೆಲಂಗಾಣ ಸಿಎಂ ಭರವಸೆ

2016 ರಲ್ಲಿ ನಡೆದ ರೋಹಿತ್‌ ವೇಮುಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರು ಸಲ್ಲಿಸಿರುವ ಅಂತಿಮ ವರದಿಗೆ ವೇಮುಲ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದು…

37 mins ago

ಗರ್ಭಿಣಿಯ ಮರ್ಯಾದೆ ಗೇಡು ಹತ್ಯೆ: ಇಬ್ಬರು ಆರೋಪಿಗಳಿಗೆ 4.19 ಲಕ್ಷ ರೂ. ದಂಡ, ಗಲ್ಲು ಶಿಕ್ಷೆ

ಗರ್ಭಿಣಿಯನ್ನು ಮರ್ಯಾದೆ ಗೇಡು ಹತ್ಯೆ ಮಾಡಿದ್ದ ಇಬ್ಬರು ಆರೋಪಿಗಳಿಗೆ ವಿಜಯಪುರ ಜಿಲ್ಲೆಯ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ…

43 mins ago

ಆಯೋಗದ ನಿಯಮ ಉಲ್ಲಂಘಿಸಿದಲ್ಲಿ ಪ್ರಜಾಪ್ರತಿನಿಧಿ ವಿರುದ್ಧ ಕ್ರಮ ಖಚಿತ : ಡಿಸಿ

ಚುನಾವಣಾ ಆಯೋಗವು ಮೇ. 5, 2024 ರ ಸಾಯಂಕಾಲ 6 ಗಂಟೆಯಿಂದ ಮತದಾನ ದಿನವಾದ ಮೇ. 07, 2024ರಂದು ಮತದಾನ…

1 hour ago