News Karnataka Kannada
Monday, April 22 2024
Cricket
ಸಮುದಾಯ

ಬಂಟ್ವಾಳ: ಶ್ರೀ ಮಹಿಷಮರ್ದಿನಿ ಸಿಂಗಾರಿ ಮೇಳದ ರಂಗ ಪ್ರವೇಶ

Bantwal: Sri Mahishamardini Singari Mela stage entry
Photo Credit : News Kannada

ಬಂಟ್ವಾಳ: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶ್ರೀ ಮಹಿಷಮರ್ದಿನಿ ಸಿಂಗಾರಿ ಮೇಳದ ರಂಗ ಪ್ರವೇಶ ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮವನ್ನು ದೇಗುಲದ ಪ್ರಧಾನ ಅರ್ಚಕ ಕೃಷ್ಣ ಬನ್ನಿಂತಾಯ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ ಮಾತನಾಡಿ ಇಚ್ಛಾ ಶಕ್ತಿ, ನಿರಂತರ ಸಾಧನೆ, ಪರಿಶ್ರಮ ಇದ್ದಾಗ ಮಾತ್ರ ಯಾವುದೇ ಕಾರ್ಯವನ್ನು ಸಾಧಿಸಬಹುದು. ಸಿಂಗಾರಿ ಮೇಳದ ಸಾಧಕರ ಉತ್ಸಾಹಕ್ಕೆ ಆಡಳಿತ ಮಂಡಳಿ ಸದಾ ಸಹಕಾರ ನೀಡಲಿದೆ. ತಂಡದ ಕ್ರಿಯಾಶೀಲತೆ, ಯಶಸ್ಸು ನಮ್ಮ ಊರಿನ ದೇಗುಲದ ಹೆಸರನ್ನು ಇನ್ನೂ ಉತ್ತುಂಗಕ್ಕೆ ಏರಿಸುವಂತಾಗಲಿ ಎಂದು ಶುಭ ಹಾರೈಸಿದರು.

ಸಭೆಯಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಮಾರಪ್ಪ ಶೆಟ್ಟಿ , ಪ್ರಧಾನ ಕಾರ್ಯದರ್ಶಿ ಶ್ರೀಧರ ಶೆಟ್ಟಿ ದೇವರಗುಂಡಿ, ಬೈಲುಗುತ್ತು, ಕೋಶಾಧಿಕಾರಿ ಮಲ್ಯ ಶಂಕರನಾರಾಯಣ ಭಟ್, ಸದಸ್ಯರಾದ ಹರ್ಷ ಎ.ಎಸ್, ರವಿಶಂಕರ್ ಶಾಸ್ತ್ರಿ ಮಣಿಲ, ಉದಯಕುಮಾರ್ ದಂಬೆ, ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು, ಸಿಂಗಾರಿ ಮೇಳದ ಮುಖ್ಯ ಗುರು ಚಂದ್ರಹಾಸ ಮಣಿಯಾಣಿ ಅಗಲ್ಪಾಡಿ, ಅಧ್ಯಾಪಕ ಲೋಕೇಶ್ ಬೆಳ್ಳಿಗೆ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ದೇವಸ್ಥಾನದ ಮ್ಯಾನೇಜರ್ ಲೋಹಿತ್ ಅಜ್ಜಿನಡ್ಕ ಅವರನ್ನು ಸನ್ಮಾನಿಸಲಾಯಿತು. ಜಯಲಕ್ಷ್ಮಿ ಪ್ರಾರ್ಥನೆ ಹಾಡಿದರು. ರೇಶ್ಮಾ ಸ್ವಾಗತಿಸಿದರು. ಜಗನ್ನಾಥ ಅಜ್ಜಿನಡ್ಕ ಕಾರ್ಯಕ್ರಮ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು