Categories: ಸಮುದಾಯ

`ಗಾಂಧಿ ಸಾಗರದ ಬಿಂದುಗಳು ; ಕೃತಿ ಅವಲೋಕನ

ಮೂಡುಬಿದಿರೆ: ಸ್ವಾಸ್ಥ ಸಮಾಜಕ್ಕೆ ಗಾಂಧಿ ತತ್ವಗಳು ಅವಶ್ಯ ಎಂದು ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದಪ್ರಾಧ್ಯಾಪಕ ಡಾ. ಕೃಷ್ಣರಾಜ ಕರಬ ಹೇಳಿದರು. ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ನಡೆದ ಸದಾನಂದ ನಾರಾವಿಯವರ `ಗಾಂಧಿ ಸಾಗರದ ಬಿಂದುಗಳು  ಕೃತಿ ಅವಲೋಕನ ಕಾರ್ಯಕ್ರಮದಲ್ಲಿ ಕೃತಿಯನ್ನು ವಿಮರ್ಶಿಸಿ ಮಾತನಾಡಿದ ಅವರು, ಸಮಾಜದಲ್ಲಿ ಶೋಷಣೆಗೆ ಒಳಾಗಾದ ಪಂಗಡ ಮತ್ತು ಗ್ರಾಮೀಣ ಜನರ ನೋವಿಗೆ ಸ್ಪಂದಿಸುವ ಗುಣ ಬೆಳಸಿಕೊಂಡರೆ, ಜಗತ್ತಿನ ಕಷ್ಟಗಳಿಗೆ ಸ್ಪಂದಿಸುವ ಸಾಮರ್ಥ್ಯ ಬೆಳೆಯುತ್ತದೆ. ಜಾತಿ ಲೆಕ್ಕಾಚಾರ ಇರದೇ ಸರ್ವ ಧರ್ಮ ಸಹಿಷ್ಣು ಭಾವನೆ ಎಲ್ಲರಲ್ಲೂ ಇರಬೇಕು, ಗಾಂಧೀಜಿಯು ಎಲ್ಲ ಧರ್ಮವನ್ನು ಗೌರವಿಸುವವರು, ಗಾಂಧಿ ತತ್ವಗಳಿಂದ ಸಮಾಜದ ಸ್ವಾಸ್ಥ ಹೆಚ್ಚುತ್ತದೆ. ಇಂತಹ ಕೃತಿಗಳನ್ನು ಪಠ್ಯ ಪುಸ್ತಕಕ್ಕೆ ಸೇರಿಸಿದರೆ ವಿದ್ಯಾರ್ಥಿಗಳಲ್ಲಿ ರಾಷ್ಟ್ರ ನಿರ್ಮಾಣದ ಚಿಂತನೆಗಳು ಬೆಳೆಯುತ್ತದೆ ಎಂದು ಹೇಳಿದರು.

ಇದೇ ಸಂರ್ದಭದಲ್ಲಿ  “ಗಾಂಧಿ ಸಾಗರದ ಬಿಂದುಗಳು” ಪುಸ್ತಕದ ಲೇಖಕರಾದ ಸದಾನಂದ ನಾರವಿ, ಬದುಕಿನಲ್ಲಿ ಮೌಲ್ಯಗಳು ಬಹಳ ಮುಖ್ಯ ಹಾಗೂ ಅವುಗಳು ಮನುಷ್ಯನ ಜೀವನದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಮೌಲ್ಯಗಳಿಲ್ಲದ ಮತ್ತು ವಿದ್ಯೆಯಿಲ್ಲದ ಮನುಷ್ಯರಿಗೆ, ಬೆಲೆ ಇರುವುದಿಲ್ಲ. ಕೆಲವೊಮ್ಮೆ ವಿದ್ಯೆ ಇರುವವನಿಗೆ ಹೆದರಿಕೆಯಿಂದಲೂ ಗೌರವ ಕೊಡುತ್ತಾರೆ, ಅದೇ ಮೌಲ್ಯಗಳಿರುವ ಮನುಷ್ಯರಿಗೆ ಅವರ ಆದರ್ಶಗಳೇ ಗೌರವ ತಂದು ಕೊಡುತ್ತದೆ. ಮಾನವೀಯ ಮೌಲ್ಯಗಳ ಚಿಂತನೆಗಳು ನಶಿಸಿ ಹೋಗದಂತೆ ನೋಡಿಕೊಂಡು ಮುOದಿನ ಪೀಳಿಗೆಗೆ ತಲುಪುವಂತೆ ಮಾಡಬೇಕು ಎಂದು ತಮ್ಮ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕನ್ನಡ ವಿಭಾಗ ಮುಖ್ಯಸ್ಥ ಡಾ. ಯೋಗಿಶ್ ಕೈರೋಡಿ, ಉಪನ್ಯಾಸಕ ಹರೀಶ್ ಟಿ ಜಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಉಮಾಶ್ರೀ ವಂದಿಸಿದರು, ಉಪನ್ಯಾಸಕಿ ಡಾ. ಜ್ಯೋತಿ ರೈ ನಿರೂಪಿಸಿದರು.

Raksha Deshpande

Recent Posts

ಪರೀಕ್ಷೆ ಫಲಿತಾಂಶಕ್ಕೆ ಹೆದರಿ ನಾಪತ್ತೆಯಾದ ವಿದ್ಯಾರ್ಥಿ : ಪೋಷಕರ ಹುಡುಕಾಟ

ಇಂದು ರಾಜ್ಯದೆಲ್ಲಡೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಬಿಡುಗಡೆಯಾದ ಹಿನ್ನಲೆ ವಿದ್ಯಾರ್ಥಿನೋರ್ವ ಪರೀಕ್ಷೆ ಫಲಿತಾಂಶಕ್ಕೆ ಭಯಪಟ್ಟು ನಾಪತ್ತೆಯಾಗಿದ್ದಾನೆ. ಘಟನೆ ಬೆಂ.ಗ್ರಾಮಾಂತರ ಜಿಲ್ಲೆ…

4 mins ago

ಮಧ್ಯರಾತ್ರಿ ಸ್ನೇಹಿತರ ಎಣ್ಣೆ ಪಾರ್ಟಿ : ಬಾಟಲಿಯಿಂದ ಹೊಡೆದು ಓರ್ವನ ಕೊಲೆ

ಬಾಟಲಿಯಿಂದ ಹೊಡೆದು ಯುವಕನೋರ್ವನ ಕೊಲೆ ಮಾಡಿರುವ ಘಟನೆ ಮುಂಡರಗಿ ತಾಲೂಕಿನ ಕೆಎಚ್​ಬಿ ಹೊಸ ಕಾಲೊನಿಯಲ್ಲಿ ನಡೆದಿದೆ.ಕೊಪ್ಪಳದ ಹೈದರ್ ತಾಂಡಾದ ನಿವಾಸಿ…

22 mins ago

ಪಾಕ್ ಬಂದರಿನಲ್ಲಿ ಉಗ್ರರ ದಾಳಿ; 7 ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ

ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗ್ವಾದರ್​ನಲ್ಲಿ ಉಗ್ರ ದಾಳಿ ನಡೆದಿದ್ದು 7 ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

38 mins ago

ಬೋಯಿಂಗ್ ನ್ಯಾಷನಲ್ ಏರೋ ಮಾಡೆಲಿಂಗ್ ಸ್ಪರ್ಧೆ: ಎನ್ಎಂಎಎಂ ಇನ್ಸ್ಟಿಟ್ಯೂಟ್‌ಗೆ ಪ್ರಥಮ

ಭಾರತದ 855 ಸಂಸ್ಥೆಗಳ 2,350 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸಿದ ಒಂಬತ್ತನೇ ವಾರ್ಷಿಕ ಬೋಯಿಂಗ್ ರಾಷ್ಟ್ರೀಯ ಏರೋ ಮಾಡೆಲಿಂಗ್ ಸ್ಪರ್ಧೆಯಲ್ಲಿ…

39 mins ago

ಏರ್‌ ಇಂಡಿಯಾ 30 ಸಿಬ್ಬಂದಿಗಳ ವಜಾ : 74 ವಿಮಾನಗಳ ಹಾರಾಟ ರದ್ದು

ಸಾಮೂಹಿಕ ಅನಾರೋಗ್ಯದ ರಜೆ ತೆಗೆದುಕೊಂಡ ಏರ್‌ ಇಂಡಿಯಾದ 30 ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಬುಧವಾರ (ಮೇ 9)ದಿಂದ ಸುಮಾರು 300 ಸಿಬ್ಬಂದಿ…

57 mins ago

ಎಸ್​ಎಸ್​ಎಲ್​​​ಸಿ ಫಲಿತಾಂಶ; ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ಬೆಳ್ತಂಗಡಿ ವಿದ್ಯಾರ್ಥಿ

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟವಾಗಿದ್ದು, ಶೇ 73.4 ಮಂದಿ ತೇರ್ಗಡೆಯಾಗಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು…

1 hour ago