News Karnataka Kannada
Tuesday, April 23 2024
Cricket
ಸಮುದಾಯ

ಎ. 23ರಂದು ‘ಗಿವ್ ಲೈಫ್ ಎ ಚಾನ್ಸ್’ ಸೊಸೈಡ್‌ ಲೈಫ್‌ಲೈನ್‌ ಕಾರ್ಯಕ್ರಮ

Helpline
Photo Credit :

ಕೆಲವು ದಿನಗಳ ಹಿಂದೆ ನಾನು ವಾಟ್ಸಾಪ್‌ನಲ್ಲಿ ಒಂದು ವೀಡಿಯೊ ನೋಡಿದೆ. ಅದರಲ್ಲಿ ಮಾರ್ಕ್ ಎಂಬ ಯುವ ಕ್ರೀಡಾಪಟು. ಹೀಗೆ ಹೇಳುತ್ತಾನೆ: ‘ನನ್ನ ಸ್ನೇಹಿತರಿಂದಾಗಿ ನನ್ನ ಬಾಲ್ಯದ ಕನಸುಗಳೆಲ್ಲವೂ ನಚ್ಚುನೂರಾದವು, ನಾವು ಮದ್ಯಪಾನಿಗಳು ಮತ್ತು ಮಾದಕದ್ರವ್ಯ ವ್ಯಸನಿಗಳ ಸ್ನೇಹ ಬೆಳೆಸಿದರೆ ನಮ್ಮ ಜೀವನ ಕೊನೆಗೊಂಡಂತೆ! ನಮ್ಮ ಸ್ನೇಹಿತರನ್ನು ನೋಡಿದರೆ ನಾವು ಯಾರೆಂದು ತಿಳಿಯುತ್ತದೆ. ಮಾರ್ಕ್‌ಗೆ ತನ್ನ ಜೀವನದಲ್ಲಿ ಇನ್ನೇನೂ ಉಳಿದಿಲ್ಲ ಎಂದು ಅನಿಸುತ್ತಿತ್ತು. ಜೀವನವೇ ಬೇಡ ಎಂದು ಎನಿಸಿದ ಅವನಿಗೆ ಆತ್ಮಹತ್ಯೆ ಮಾಡಲು ಮನಸ್ಸಾಗುತ್ತಿತ್ತು, ಆತನ ತಾಯಿಯ ಆಕಸ್ಮಿಕ ಸಾವು ಆತನನ್ನು ವಾಸ್ತವಕ್ಕೆ ತಂದಿತು. ಆತನಿಗೆ ಬದುಕಬೇಕು ಅನಿಸಿತು. ಬೇರೆಯವರ ಸಹಾಯ ಪಡೆದು ಆತ್ಮಹತ್ಯೆಯ ಯೋಚನೆಯನ್ನು ಬಿಟ್ಟು ಹೊಸ ಜೀವನವನ್ನು ಆರಂಭಿಸಿದನು. ಇವತ್ತು ಅವನಿಗೆ ಒಳ್ಳೆಯ ಕೆಲಸವಿದೆ, ಆತ್ಮೀಯ ಕುಟುಂಬವಿದೆ ಮಾತ್ರವಲ್ಲ ಆತನು ಯುವಕರಿಗೆ ಹೊಸ ಜೀವನ ನಡೆಸಲು ಸಹಾಯ ಮಾಡುತ್ತಾನೆ. ಈ ವಿಡಿಯೋ ನನ್ನ ಮೇಲೆ ಬಹಳಷ್ಟು ಪ್ರಭಾವ ಬೀರಿ “ವ್ ಲೈಫ್ ಎ ಚಾನ್ಸ್” ಎಂಬ ಧೈಯಕ್ಕೆ ಆದ್ಯತೆ ನೀಡಲು ಯೋಚಿಸಿದೆ. ಇಂದಿನ ಪ್ರಪಂಚದಲ್ಲಿ ಎಲ್ಲವೂ ತದ್ವಿರುದ್ಧವಾಗಿ ನಡೆಯುತ್ತಿದೆ. ಬದುಕಿಗಿಂತ ಸಾವಿನ ಕಡೆ ಜನರು ವಾಲುತ್ತಿದ್ದಾರೆ. ದಿನಪತ್ರಿಕೆಗಳಲ್ಲಿ ಆತ್ಮಹತ್ಯೆಯ ಸುದ್ದಿಗಳಿಗೆ ಬರಗಾಲವಿಲ್ಲ. ಎಂತಹ ಮರದೃಷ್ಟ! ಮೃತ್ಯುವಿನ ಮೇಲೆ ಜಯ ಸಾಧಿಸಿ ಬದುಕಲು ಕಲಿಯುದ್ಧದಕ್ಕೆ ಇದು ಸಕಾಲ.

ಈ ನಿಟ್ಟಿನಲ್ಲಿ, ಸುಶೆಗ್ ಚ್ಯಾರಿಟೆಬಲ್ ಟ್ರಸ್ಟ್‌ನ ಅಂಗ ಸಂಸ್ಥೆಯಾದ ಸೊಸೈಡ್‌ ಲೈಫ್‌ಲೈನ್‌ ಶನಿವಾರ ಎಪ್ರಿಲ್ 23, 2022ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಆಯೋಜಿಸಿರುವ ‘ಗಿವ್ ಲೈಫ್ ಎ ಜಾನ್ಸ್’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿಮ್ಮೆಲ್ಲರನ್ನು ಆಹ್ವಾನಿಸುತ್ತೇವೆ. ಆತ್ಮಹತ್ಯೆಯನ್ನು ತಡೆಗಟ್ಟುವ ಬಗ್ಗೆ ಹಾಗೂ ಆತ್ಮಹತ್ಯೆಗೆ ಅಂಟಿಕೊಂಡಿರುವ ಕಳಂಕವನ್ನು ತೊಡೆದು ಹಾಕುವ ಬಗ್ಗೆ ಜನರಿಗೆ ತಿಳುವಳಿಕೆ ನೀಡಿ ಅವರಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ, ಇಡೀ ದಿನದ ಕಾರ್ಯಕ್ರಮದಲ್ಲಿ ವಿವಿಧ ವಿನೋದಾವಳಿಗಳು ಮತ್ತು ಮಾನಸಿಕ ಆರೋಗ್ಯದ ತಪಾಸಣೆಯ ಜೊತೆಗೆ ವಿವಿಧ ವಸ್ತುಗಳ ಮಾರಾಟವೂ ಇರುವುದು,

ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳನ್ನು ನೀವು ಪತ್ತೆ ಹಚ್ಚಬಹುದು. ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಇರುವವರು ಅದರ ಲಕ್ಷಣಗಳನ್ನು ತಮ್ಮ ಜೊತೆಗೆ ಇರುವವರೊಡನೆ ತೋರ್ಪಡಿಸುತ್ತಾರೆ. ಇವಗಳನ್ನು ಗಮನಿಸುವುದರಿಂದ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇದೆಯೇ ಎಂಬುದನ್ನು ಮನೆಯವರಿಗೆ ಕಂಡು ಹಿಡಿಯಲು ಸಾಧ್ಯವಾಗುತ್ತದೆ. ಮನಸ್ಸಿಗೆ ನೋವು ಉಂಟು ಮಾಡುವ ಘಟನೆ ನಡೆದಲ್ಲಿ ಅದನ್ನು ಪತ್ತೆ ಹಚ್ಚುವುದು ಸುಲಭ. ಇಂತಹ ಲಕ್ಷಣಗಳನ್ನು ತೋರ್ಪಡಿಸುವ ವ್ಯಕ್ತಿ ನಿಮಗೆ ಎದುರಾದರೆ ತಕ್ಷಣ ಇಂತಹ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯವಿರುವ ವ್ಯಕ್ತಿಗಳನ್ನು ಸಂಪರ್ಕಿಸಿ

ಆತ್ಮಹತ್ಯೆ ಮಾಡಿಕೊಳ್ಳುವವರು ತೋರ್ಪಡಿಸುವ ಕೆಲವು ಲಕ್ಷಣಗಳು ಹೀಗಿವೆ: ಖಿನ್ನತೆಯಿಂದ ಅಥವಾ ಬೇಸರದಿಂದ ಇರುವುದು, ಸಾವು ಅಥವಾ ಆತ್ಮಹತ್ಯೆಯ ಬಗ್ಗೆ ಬರೆಯುವುದು ಅಥವಾ ಮಾತನಾಡುವುದು, ಯಾರೊಡನೆಯೂ ಬೆರೆಯದೇ ಇರುವುದು, ನಿರಾಶೆ ಅಥವಾ ಹತಾಶೆಯಿಂದ ಇರುವುದು, ಸಣ್ಣಪುಟ್ಟ ವಿಷಯಗಳಿಗೆ ಸಿಟ್ಟಾಗುವುದು, ಮನೋಸ್ಥಿತಿಯಲ್ಲಿ ಹಠಾತ್ ಬದಲಾವಣೆಗಳಾಗುವುದು, ಮದ್ಯಪಾನ ಅಥವಾ ಮಾದಕ ದ್ರವ್ಯ ವ್ಯಸನ ವ್ಯಕ್ತಿತ್ವದಲ್ಲಿ ಬದಲಾವಣೆ, ದುಡುಕು ಸ್ವಭಾವ, ಯಾವುದೇ ಕೆಲಸಕಾರ್ಯಗಳಲ್ಲಿ ಆಸಕ್ತಿ ತೋರಿಸದಿರುವುದು, ನಿದ್ರೆ ಮತ್ತು ಊಟ-ತಿಂಡಿಯಲ್ಲಿ ಬದಲಾವಣೆ, ಕೆಲಸಕ್ಕೆ ಸರಿಯಾಗಿ ಹೋಗದೇ ಇರುವುದು, ಕಲಿಕೆಯಲ್ಲಿ ಹಿಂದೆ ಬೀಳುವುದು ಇತ್ಯಾದಿ.

ನೀವೇನು ಮಾಡಬಹುದು?

ಯಾತನಾಮಯ ಪರಿಸ್ಥಿತಿ ಇರುವುದನ್ನು ಗಂಭೀರವಾಗಿ ಪರಿಗಣಿಸಿ: ನಿಮ್ಮ ಆತ್ಮೀಯ ವ್ಯಕ್ತಿಯ ಮೇಲಿನ ಲಕ್ಷಣಗಳನ್ನು ತೋರ್ಪಡಿಸುವಾಗ ಅವುಗಳನ್ನು ಗಂಭೀರವಾಗಿ ಪರಿಗಣಿಸಿ ಅವರು ಹೇಳುವುದನ್ನು ಗಮನ ಕೊಟ್ಟು ಕೇಳಿ, ಇದರಿಂದ ಅವರು ತಮ್ಮ ಮನಸ್ಸನ್ನು ಬಿಚ್ಚಿ ಮಾತನಾಡುವುದರಿಂದ ಅವರಿಗೆ ನುರಿತ ತಜ್ಞರ ಸಹಾಯ ದೊರೆಯುವಂತೆ ಮಾಡಲು ಸಾಧ್ಯವಾಗುತ್ತದೆ.

ಸಾಂತ್ವನ ನೀಡುವುದು: ಆ ವ್ಯಕ್ತಿಗೆ ಆತ್ಮಹತ್ಯೆ ಮಾಡುವ ಯೋಚನೆ ಬರುತ್ತದೆಯೇ ಎಂದು ಕೇಳಿ, ಆತ್ಮಹತ್ಯೆಯ ಬಗ್ಗೆ ಬೇರೆಯವರೊಡನೆ ಮಾತನಾಡುವುದರಿಂದ ಆತ್ಮಹತ್ಯೆ ಮಾಡುವ ಯೋಚನೆ ಕಡಿಮೆಯಾಗುತ್ತದೆ. ಆದರೆ ಅಂತಹ ವ್ಯಕ್ತಿಯ ಸುರಕ್ಷತೆಯ ಕಡೆಗೂ ಗಮನ ಕೊಡಬೇಕಾಗುತ್ತದೆ.

ಆತನಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ನಿರ್ದಿಷ್ಟವಾದ ಯೋಚನೆಗಳಿವೆಯೇ ಎಂದು ಗಮನಿಸಿ, ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿರುವ ಔಷಧಗಳು, ಪರಿತವಾದ ಆಯುಧಗಳು ಮುಂತಾದವುಗಳು ಅವರ ಕೈಗೆ ಸಿಗದಂತೆ ಅಡಗಿಸಿ ಇಡಿ, ಯಾವಾಗಲೂ ಅವರ ಜೊತೆಗೆ ಇದ್ದು ಅವರಿಗೆ ಸಾಂತ್ವನ ನೀಡಿ, ಆತ್ಮಹತ್ಯೆಯ ಬಗ್ಗೆ ಮಾತನಾಡುವಾಗ ನಿಮಗೆ ಗಾಬರಿಯಾದರೂ ಮನಸ್ಸನ್ನು ಶಾಂತವಾಗಿಟ್ಟು ಅವರಿಗೆ ಬೇಕಿರುವ ಎಲ್ಲಾ ಸಹಾಯ ನೀಡುವುದಾಗಿ ಆಶ್ವಾಸನೆ ನೀಡಿ, ಮನೆಯ ಯಾವುದಾದರೂ ಒಬ್ಬ ಸದಸ್ಯರು, ಧರ್ಮಗುರುಗಳು ಅಥವಾ ಮನೋರೋಗ ತಜ್ಞರೊಡನೆ ಅವರು ಆತ್ಮೀಯವಾಗಿ ಸಂಬಂಧ ಬೆಳೆಸುವಂತೆ ಮಾಡಿ

ಪರಿಸ್ಥಿತಿ ತಾನಾಗಿಯೇ ಸರಿ ಹೋಗುತ್ತದೆ ಎಂದು ಯೋಚಿಸಿ ಅಂತಹ ಯೋಚನೆಗಳನ್ನು ಬಿಟ್ಟುಬಿಡು” ಎಂದು ಅವರೊಡನೆ ಹೇಳಬೇಡಿ. ಅವರು ಹೇಳಿದ್ದನ್ನು ಗೌಪ್ಯವಾಗಿ ಇಡಬೇಡಿ ಯಾಕೆಂದರೆ ಅವರ ಪ್ರಾಣ ಉಳಿಸುವುದು ಗೌಪ್ಯತೆ ಕಾಪಾಡುವುದಕ್ಕಿಂತ ಹೆಚ್ಚು ಅಗತ್ಯ. ಅವರು ನಿಮ್ಮ ಮೇಲೆ ದೈಹಿಕ ಹಲ್ಲೆ ಮಾಡದೇ ಇದ್ದಲ್ಲಿ ಅವರ ಜೊತೆಗೆಯೇ ಇರಿ. ಅವರು ನಿಮ್ಮ ಮೇಲೆ ಹಲ್ಲೆ ನಡೆಸಿದರೆ 108ಗೆ ಕರೆ ಮಾಡಿ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಿ,

ಚಿಕಿತ್ಸೆ: ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುವವರಿಗೆ ಪ್ರಪ್ರಥಮವಾಗಿ ಬೇಕಾಗಿರುವುದು ಏನೆಂದರೆ ತಕ್ಷಣದ ಚಿಕಿತ್ಸೆ. ಆತ್ಮಹತ್ಯೆಯನ್ನು ಖಂಡಿತವಾಗಿಯೂ ತಡೆಗಟ್ಟಬಹುದು. ಇದಕ್ಕೆ ಪೂರಕವಾದ ಮಾಹಿತಿ ಇಲ್ಲಿದೆ:

ಮಾನಸಿಕ ಒತ್ತಡಕ್ಕೆ ಒಳಗಾದವರಿಗೆ ಸಹಾಯ ಮಾಡಲು ಸೊಸೈಡ್ ಹೆಲೈನ್‌ 2017ರಿಂದ ನುರಿತ ಸ್ವಯಂಸೇವಕರ ಸಹಾಯದಿಂದ ಹಗಲಿರುಳು ಶ್ರಮಿಸುತ್ತಿದೆ. ಯಾರಿಗಾದರೂ ನಮ್ಮಿಂದ ಸಹಾಯವಾಗಬೇಕು ಎಂದು ನಿಮಗೆ ಅನಿಸಿದರೆ 0824-2983444ಗೆ ಕರೆ ಮಾಡಿ, ವೃತ್ತಿಪರ ತರಬೇತಿ ಪಡೆದ ಹಲವಾರು ಭಾಷೆಗಳನ್ನು ಮಾತನಾಡಲು ತಿಳಿದಿರುವ ಸ್ವಯಂಸೇವಕರು ತುರ್ತು ಕರೆಗಳನ್ನು ಸ್ವೀಕರಿಸುತ್ತಾರೆ. ಈ ಕರೆಗಳನ್ನು ತಕ್ಷಣ ಆತ್ಮಹತ್ಯೆ ತಡೆಯುವಲ್ಲಿ ತರಬೇತಿ ಪಡೆದ ಸ್ವಯಂಸೇವಕರಿಗೆ ವರ್ಗಾಯಿಸಲಾಗುತ್ತದೆ. ಈ ಸ್ವಯಂಸೇವಕರು ಹಗಲಿರುಳೂ ನಿಮ್ಮ ಸೇವೆಗೆ ಲಭ್ಯವಿರುತ್ತಾರೆ. ಸಲಹೆ ಸೂಚನೆಗಳನ್ನು ನೀಡಲು ಒಬ್ಬ ತಜ್ಞ ವೈದ್ಯರು ಯಾವಾಗಲೂ ಲಭ್ಯವಿರುತ್ತಾರೆ, ಇಡೀ ಪ್ರಕ್ರಿಯೆಯನ್ನು ಗೌಪ್ಯವಾಗಿ ಮಾಡಲಾಗುತ್ತದೆ.

ನಿಮಗೆ ಸ್ವಯಂಸೇವಕರಾಗಲು ಮನಸ್ಸಿದ್ದಲ್ಲಿ susheelifelineagmail.comಗೆ ಸಂಪರ್ಕಿಸಿ, ಸ್ವಯಂಸೇವಕರ ತರಬೇತಿಯ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ನೀಡಲಾಗುವುದು.

ಸಮಾಪ್ತಿ

ಜೀವನದಲ್ಲಿ ಯಾತನೆ ಅನುಭವಿಸುತ್ತಿರುವ ವ್ಯಕ್ತಿಗೆ ಭಾವನಾತ್ಮಕ ಸಾಂತ್ವನ ನೀಡುವುದು ನಮ್ಮೆಲ್ಲರ ಕರ್ತವ್ಯ. ನಾವೆಲ್ಲರೂ ಕೈಜೋಡಿಸಿ ಆತ್ಮಹತ್ಯೆಯನ್ನು ತಡೆಗಟ್ಟೋಣ! “ಬದುಕಲು ಕಲಿಯೋಣ” ಎಂಬುದು ನಮ್ಮ ಧೈಯವಾಕ್ಯವಾಗಿರಲಿ, ಶನಿವಾರ ಎಪ್ರಿಲ್ 22, 2022ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಂಗಳೂರಿನ ವೆಲೆನ್ಸಿಯಾದ ರೋಶನಿ ನಿಲಯದಲ್ಲಿ ಭೇಟಿಯಾಗೋಣ.

ನಮ್ಮ ಸೇವೆಗೆ ನಿಮ್ಮ ದೇಣಿಗೆಯನ್ನು ನಾವು ಸಂತೋಷದಿಂದ ಸ್ವೀಕರಿಸುತ್ತೇವೆ. ನಿಮ್ಮ ದೇಣಿಗೆಯನ್ನು ಕೆಳಗಿನ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು:

Account name: Susheg Charitable Trust – Susheg Lifeline
Account No.: 520101022731532
IFSC: UNIBN0935069
Address: Union Bank of India, Narmada Building, Falnir, Mangalore – 575 001

ಲಿಡ್ವಿನ್  ಸಿಕ್ವೇರಾ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು