Categories: ಉದ್ಯೋಗ

ಏಮ್ಸ್‌ನಲ್ಲಿ ಉದ್ಯೋಗವಕಾಶ : ಆಸ್ತಕರು ಆನ್‌ ಲೈನ್‌ ನಲ್ಲಿ ಅರ್ಜಿ ಸಲ್ಲಿಸಿ

ನವದೆಹಲಿ:  ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಡಿ.1ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ (ಎಐಐಎಂಎಸ್), ನವದೆಹಲಿಯು ಗುತ್ತಿಗೆ ಆಧಾರದ ಮೇಲೆ ಬೋಧಕೇತರ ಗ್ರೂಪ್ ಬಿ ಮತ್ತು ಸಿ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕ ಮಾಡಲಿದೆ.
ಸಹಾಯಕ ಆಡಳಿತಾಧಿಕಾರಿ, ಸಹಾಯಕ ಆಹಾರ ತಜ್ಞರು, ಸಹಾಯಕ ಇಂಜಿನಿಯರ್ (ಸಿವಿಲ್/(ಎಲೆಕ್ಟ್ರಿಕಲ್), ಸಹಾಯಕ ಲಾಂಡ್ರಿ ಮೇಲ್ವಿಚಾರಕರು, ಸಹಾಯಕ ಮಳಿಗೆ ಅಧಿಕಾರಿ, ಶ್ರವಣಶಾಸ್ತ್ರಜ್ಞ ಮತ್ತು ಸ್ಪೀಚ್ ಥೆರಪಿಸ್ಟ್/ಕಿರಿಯ ಶ್ರವಣಶಾಸ್ತ್ರಜ್ಞ/ ತಾಂತ್ರಿಕ ಸಹಾಯಕ, ಆಡಿಯಾಲಜಿಸ್ಟ್, ಬಯೋ ಮೆಡಿಕಲ್ ಇಂಜಿನಿಯರ್, ಕ್ಯಾಷಿಯರ್, ಕೋಡಿಂಗ್ ಕ್ಲರ್ಕ್/ಮೆಡಿಕಲ್ ರೆಕಾರ್ಡ್ ತಂತ್ರಜ್ಞರು/ಜೂನಿಯರ್ ಮೆಡಿಕಲ್ ರೆಕಾರ್ಡ್ ಅಧಿಕಾರಿ)/ವೈದ್ಯಕೀಯ ದಾಖಲೆ ತಂತ್ರಜ್ಞರು (ರೆಕಾರ್ಡ್ ಕ್ಲರ್ಕ್) , ಡಾರ್ಕ್ ರೂಮ್ ಅಸಿಸ್ಟೆಂಟ್ ಗ್ರೇಡ್ 2, ಡಯಟಿಶಿಯನ್, ಡ್ರೈವರ್, ಭ್ರೂಣಶಾಸ್ತ್ರಜ್ಞ, ಆರೋಗ್ಯ ಶಿಕ್ಷಣತಜ್ಞ (ಸಾಮಾಜಿಕ ಮನಶ್ಶಾಸ್ತ್ರಜ್ಞ) , ಹಿಂದಿ ಅಧಿಕಾರಿ, ಜೂನಿಯರ್ ಅಡ್ಮಿನಿಸ್ಟ್ರೇಟಿವ್ ಆಫೀಸರ್/ಆಫೀಸ್ ಅಸಿಸ್ಟೆಂಟ್ (ಎನ್.ಎಸ್.)/ಕಾರ್ಯನಿರ್ವಾಹಕ ಸಹಾಯಕ , ಜೂನಿಯರ್ ಫಿಸಿಯೋಥೆರಪಿಸ್ಟ್, ಲ್ಯಾಬ್ ಟೆಕ್ನಿಷಿಯನ್, ಮ್ಯಾನೇಜರ್/ಸೂಪರ್ವೈಸರ್/ಗ್ಯಾಸ್ ಆಫೀಸರ್, ಮೆಡಿಕಲ್ ರೆಕಾರ್ಡ್ ಆಫೀಸರ್, ಮಲ್ಟಿ ಟಾಸ್ಕಿಂಗ್ ಸ್ಟಾಫ್, ಫಿಸಿಯೋಥೆರಪಿಸ್ಟ್, ಸೀನಿಯರ್ ನರ್ಸಿಂಗ್ ಆಫೀಸರ್/ಸ್ಟಾಫ್ ನರ್ಸ್ ಗ್ರೇಡ್-1, ಸ್ಟೆನೋಗ್ರಾಫರ್, ಯೋಗ ಬೋಧಕ ಮುಂತಾದ ಒಟ್ಟು 3036 ವಿವಿಧ ಹುದ್ದೆಗಳ ನೇಮಕಾತಿ ನಡೆಯಲಿದೆ.

ಪ್ರಮುಖ ದಿನಾಂಕಗಳು

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01-12-2023

ಪ್ರವೇಶ ಪತ್ರ ನೀಡುವ ದಿನಾಂಕ: 12-12-2023

ಪರೀಕ್ಷೆಯ ದಿನಾಂಕ

18-12-2023 ರಿಂದ 20-12-2023 ವರೆಗೆ

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ/ಒಬಿಸಿಗೆ ಅಭ್ಯರ್ಥಿಗಳಿಗೆ : ರೂ. 3,000

ಎಸ್‌ ಸಿ/ ಎಸ್‌ ಟಿ/ ಇಡಬ್ಲ್ಯೂಸಿ ಅಭ್ಯರ್ಥಿಗಳಿಗೆ : ರೂ. 2,400

ವಯಸ್ಸಿನ ಮಿತಿ: ಗರಿಷ್ಠ 35 ವರ್ಷ

ಶೈಕ್ಷಣಿಕ ವಿದ್ಯಾರ್ಹತೆಗಳು: ( ಸಾಮಾನ್ಯ ಅರ್ಹತೆಗಳು)

1. ಅಭ್ಯರ್ಥಿಗಳು ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಯಿಂದ ಎಸ್‌ ಎಸ್‌ ಎಲ್‌ ಸಿ ಮತ್ತು ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿಯನ್ನು ತೇರ್ಗಡೆ ಹೊಂದಿರಬೇಕು.

2. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮ್ಯಾನೇಜಮೆಂಟ್‌ ವಿಭಾಗದಲ್ಲಿ ಎಂ ಬಿ ಎ/ ಡಿಪ್ಲೊಮಾ ಅಥವಾ ಅದಕ್ಕೆ ತತ್ಸಮಾನ ಪದವಿಯನ್ನು ಪಡೆದಿರಬೇಕು.

3. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ / ಎಲೆಕ್ಟ್ರಿಕಲ್/ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು.

4. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಎಂ ಎ/ಎಂ ಎಸ್ಸಿ / ಎಂ ಫಿಲ್‌ ಪದವಿ ಪಡೆದಿರಬೇಕು.

5. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ. ಜೀವ ವಿಜ್ಞಾನ/ ಪ್ರಾಣಿಶಾಸ್ತ್ರ/ ಸೂಕ್ಷ್ಮ ಜೀವಶಾಸ್ತ್ರ/ ಜೆನೆಟಿಕ್ಸ್/ ಶರೀರಶಾಸ್ತ್ರ/ ಬಯೋಟೆಕ್ನಾಲಜಿ/ ಬಯೋಕೆಮಿಸ್ಟ್ರಿ/ ಅನ್ಯಾಟಮಿ/ ಎಂಡೋಕ್ರೈನಾಲಜಿ ಪದವಿ ಅಥವಾ ಎಂ ಡಿ/ಪಿ ಹೆಚ್‌ ಡಿ/ ಎಂ ವಿ ಎಸ್ಸಿ ಪದವಿ ಪಡೆದಿರಬೇಕು.

6. ಕಡ್ಡಾಯವಾಗಿ ಕಂಪ್ಯೂಟರ್‌ ಜ್ಞಾನ ಹೊಂದಿರಬೇಕು.

Ramya Bolantoor

Recent Posts

ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್‌ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂ‍ಸ್ಥೆಗಳ…

2 hours ago

ಜಿಯೋ ಬಂಪರ್‌ ಆಫರ್‌ : 15 ಒಟಿಟಿ ಆ್ಯಪ್ಲಿಕೇಷನ್‌ ಜೊತೆ ಅನ್‌ಲಿಮಿಟೆಡ್ ಡೇಟಾ ಪ್ಲಾನ್

ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…

2 hours ago

ಕಾರಿನಲ್ಲಿ ಆಕಸ್ಮಿಕ ಬೆಂಕಿ : ವ್ಯಕ್ತಿ ಸಜೀವ ದಹನ

ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…

3 hours ago

ವಿಧಾನಪರಿಷತ್ ಚುನಾವಣೆ : ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 6 ಕ್ಷೇತ್ರಗಳ…

3 hours ago

ಹಾಡಹಗಲೇ ಚಾಕುವಿನಿಂದ ಇರಿದು ಯುವಕನ ಭೀಕರ ಹತ್ಯೆ

ಚಾಕುವಿನಿಂದ ಇರಿದು ಹಾಡಹಗಲೇ ಯುವಕನ ಭೀಕರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ‌ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಪ್ರೀತಿ…

3 hours ago

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಬಿತ್ತು ಧರ್ಮದೇಟು

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ ಘಟನೆ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಇಂದು ಸಂಭವಿಸಿದೆ

3 hours ago