ಮೈಸೂರು

ಜಿಮ್ ನಲ್ಲಿ ಹೃದಯಸ್ತಂಭನ ತಡೆಗೆ ಏನು ಮಾಡಬೇಕು?

ಮೈಸೂರು: ಜಿಮ್ ಮಾಡಿದರೆ ಹೃದಯಸ್ತಂಭನವಾಗುತ್ತದೆ ಎಂಬ ಮಾತುಗಳು ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದ್ದು, ಇದರಿಂದ ಬಹಳಷ್ಟು ಮಂದಿ ಜಿಮ್ ನಿಂದ ಹಿಂದೆ ಸರಿಯಲು ಕಾರಣವಾಗಿದೆ. ಹಾಗಾದರೆ ನಿಜವಾಗಿಯೂ ಜಿಮ್ ನಿಂದ ಹೃದಯ ಸ್ತಂಭನವಾಗುತ್ತದೆಯಾ ಎಂಬ ಪ್ರಶ್ನೆಗೆ ಉತ್ತರವಿಲ್ಲ. ವೈದ್ಯರು ಇದನ್ನು ನಿಜವೆಂದು ನಂಬುವುದಿಲ್ಲ.

ಹಾಗಾದರೆ ಹೃದಯ ಸ್ತಂಭನವಾಗಲು ಕಾರಣವೇನು ಎಂಬುದಕ್ಕೆ ವೈದ್ಯರು ನೀಡುವ ಉತ್ತರ ಏನೆಂದರೆ ಕೆಲವರು ಡಯಾಬಿಟೀಸ್, ರಕ್ತದೊತ್ತಡ ದಂತಹ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಅಂತಹವರು ಅತಿ ಹೆಚ್ಚಾಗಿ ವ್ಯಾಯಾಮ ಅಥವಾ ಜಿಮ್ ಮಾಡುವುದರಿಂದ ಕೆಲವೊಮ್ಮೆ ಹೃದಯ ಸ್ತಂಭನ ವಾಗುವ ಸಾಧ್ಯತೆಗಳಿವೆ. ಹಾಗೆಂದು ಜಿಮ್ ಮಾಡುವವರಿಗೆಲ್ಲ ಹೃದಯಸ್ತಂಭನವಾಗುತ್ತದೆ ಎಂಬುದು ನಿಜವಲ್ಲ ಎಂಬುದಾಗಿ ಅಭಿಪ್ರಾಯಪಡುತ್ತಾರೆ.

ಜಿಮ್ ತರಬೇತಿದಾರರು ಮುಖ್ಯವಾಗಿ ಸಿಪಿಆರ್ (ಕಾರ್ಡಿಯೋ ಪಲ್ಮನರಿ ರಿಸಕ್ಸಿಟೇಷನ್) ತಿಳಿದುಕೊಳ್ಳಬೇಕು. ಏಕೆಂದರೆ ಕಾರ್ಡಿಯೋ ಪಲ್ಮನರಿ ರಿಸಕ್ಸಿಟೇಷನ್ (CPR) ಎನ್ನುವುದು ಜೀವರಕ್ಷಕ ತಂತ್ರವಾಗಿದ್ದು, ಹೃದಯಾಘಾತವಾದಾಗ ಮತ್ತು ಇನ್ನು ಅನೇಕ ತುರ್ತು ಸಂದರ್ಭಗಳಲ್ಲಿ, ಹೃದಯ ಬಡಿತವು ನಿಂತು ಹೋದರೆ ಮತ್ತೆ ಹೃದಯವನ್ನು ಎಚ್ಚರಿಸಲು ಇದು ಸಾಧ‍್ಯವಾಗುತ್ತದೆ. ಆದ್ದರಿಂದ ಪ್ರತಿ ಜಿಮ್ ಕೇಂದ್ರಗಳಲ್ಲಿ ಜಿಮ್ ತರಬೇತಿದಾರರು ಸಿಪಿಆರ್ ಬಗ್ಗೆ ತರಬೇತಿ ಪಡೆಯುವುದು ಬಹುಮುಖ್ಯವಾಗಿದೆ.

ಈ ಕುರಿತಂತೆ ನಮ್ಮ ಮೈಸೂರು ಫಿಟ್ ಮೈಸೂರು ಕಾರ್ಯಕ್ರಮದಲ್ಲಿ ನಗರದ ಪ್ರತಿಷ್ಠಿತ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾ. ಕೇಶವಮೂರ್ತಿ ವಿ. ಅವರ ನೇತೃತ್ವದ ವೈದ್ಯಕೀಯ ತಂಡವು ಮೈಸೂರು ನಗರದ ಸುಮಾರು 200 ಕ್ಕೂ ಹೆಚ್ಚು ಜಿಮ್ ತರಬೇತುದಾರರಿಗೆ ಸಿಪಿಆರ್ ವಿಧಾನದ ಬಳಕೆಯ ಕುರಿತು ಮಾಹಿತಿ ಮತ್ತು ಈ ವೈದ್ಯಕೀಯ ವಿಧಾನದ ಮಹತ್ವದ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಜಿಮ್ ಮಾಡುವವರಲ್ಲಿ ಜಿಮ್ ಮಾಡುವ ಸಮಯದಲ್ಲಿ ಹೃದಯ ಸ್ತಂಭನ ವಾಗುತ್ತಿದೆ ಎಂಬ ಅಂಶವು ಚಾಲ್ತಿಯಲ್ಲಿದ್ದು, ಜಿಮ್ ಮಾಡುವುದರಿಂದ ಹೃದಯ ಸ್ತಂಭನವಾಗುತ್ತದೆ ಎಂಬುದು ಸತ್ಯವಲ್ಲ ಎಂದು ಹೃದ್ರೋಗ ತಜ್ಞರಾದ ಡಾ. ಕೇಶವಮೂರ್ತಿ ತಿಳಿಸಿದರು. ತಮ್ಮ ದೇಹದ ಸಾಮರ್ಥ್ಯಕ್ಕನುಗುಣವಾಗಿ ನಿಯಮಿತವಾಗಿ ಜಿಮ್ ಮಾಡುವುದರಿಂದ ಆರೋಗ್ಯಕರ ಜೀವನವನ್ನು ನಡೆಸಬಹುದಾಗಿದೆ. ಪ್ರತಿಯೊಬ್ಬ ಜಿಮ್ ತರಬೇತುದಾರು ಈ ಜೀವ ರಕ್ಷಣಾ ವಿಧಾನದ ತರಬೇತಿ ಪಡೆದುಕೊಳ್ಳುವುದು ಅತ್ಯವಶ್ಯಕ ವಾಗಿದೆ ಎಂದು ಸಲಹೆ ನೀಡಿದ್ದಾರೆ.

Gayathri SG

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

7 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

8 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

9 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

9 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

9 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

9 hours ago