News Karnataka Kannada
Saturday, April 13 2024
Cricket
ಮಂಗಳೂರು

ಮಂಗಳೂರು ಕೆಎಂಸಿ ಆಸ್ಪತ್ರೆ ವೈದ್ಯರಿಂದ ಸಾಧನೆ: 13ರ ಬಾಲಕನ ಹೊಟ್ಟೆಯಿಂದ ಗೆಡ್ಡೆ ಹೊರತೆಗೆದ ತಜ್ಞರು

Mangaluru: Doctors at KMC Hospital in Mangaluru remove tumour from 13-year-old boy's stomach
Photo Credit : News Kannada

ಮಂಗಳೂರು: ಕಾಸರಗೋಡಿನ ಹದಿಮೂರು ವರ್ಷದ ಬಾಲಕ ವಿವಿನ್ (ಹೆಸರು ಬದಲಾಯಿಸಲಾಗಿದೆ) ಎಂಬಾತನಿಗೆ ಉರಿಯೂತದ ಮೈಯೋಫೈಬ್ರೊಬ್ಲಾಸ್ಟಿಕ್ ಟ್ಯೂಮರ್ (ಐಎಂಟಿ) ಸಮಸ್ಯೆ ಎದುರಾಗಿತ್ತು. ಇದು ಮಕ್ಕಳು ಮತ್ತು ಯುವ ವಯಸ್ಕರಲ್ಲಿ ಪ್ರಧಾನವಾಗಿ ಪರಿಣಾಮ ಬೀರುವ, ಅಸಾಧಾರಣ ಹಾಗೂ ಅಪರೂಪದ ನಿಯೋಪ್ಲಾಸಂ ತೊಂದರೆಯಾಗಿದೆ.

ಈ ನಿಟ್ಟಿನಲ್ಲಿ ಬಾಲಕನ ಪೋಷಕರು ಆತನನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕರೆತಂದಿದ್ದರು. ಆಸ್ಪತ್ರೆ ತಜ್ಞ ವೈದ್ಯರ ತಂಡ ಕೂಲಂಕಷವಾಗಿ ಪರಿಶೀಲಿಸಿ ಶಸ್ತ್ರಚಿಕಿತ್ಸೆಗೆ ಸೂಚಿಸಿತ್ತು. ಪೋಷಕರ ಒಪ್ಪಿಗೆ ಮೇರಗೆ ರೋಗಿಯಲ್ಲಿದ್ದ ಗೆಡ್ಡೆಯನ್ನು ಯಶಸ್ವಿಯಾಗಿ ಲ್ಯಾಪರೊಸ್ಕೋಪಿಕ್ ವಿಧಾನದ ಮೂಲಕ ತೆಗೆಯಲಾಯಿತು. ವಿವಿನ್ ಈಗ ಪೂರ್ಣವಾಗಿ ಚೇತರಿಕೆಯ ಹಾದಿಯಲ್ಲಿದ್ದಾರೆ.

ಈ ಹಿಂದೆ ವಿವಿನ್‌ ವಿವಿ ತೂಕ ಗಮನಾರ್ಹವಾಗಿ ಕಡಿಮೆಯಾಗಲು ಆರಂಭವಾಗಿದ್ದು, ಈ ಸಂಬಂಧ ನಡೆಸಲಾದ ಅಲ್ಟ್ರಾಸೌಂಡ್ ಪರೀಕ್ಷೆಯ ಸಮಯದಲ್ಲಿ ಹೊಟ್ಟೆಯಲ್ಲಿ ಗೆಡ್ಡೆ ಪತ್ತೆಹಚ್ಚಲಾಗಿತ್ತು. ತಮ್ಮ ಮಗನ ಆರೋಗ್ಯದ ಬಗ್ಗೆ ತೀವ್ರ ಕಾಳಜಿ ಹೊಂದಿದ್ದ ಆತನ ಪೋಷಕರು ಕಾಸರಗೋಡಿನಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಆತನನ್ನು ಚಿಕಿತ್ಸೆಗಾಗಿ ಕರೆತಂದಿದ್ದರು.

ಆಸ್ಪತ್ರೆಯ ಸಮರ್ಥ ವೈದ್ಯಕೀಯ ವೃತ್ತಿಪರರ ತಂಡವು ಯಾವುದೇ ಸಮಯ ವ್ಯರ್ಥಮಾಡದೇ ವಿವಿನ್ ಅವರ ಸ್ಥಿತಿಯ ಸಮಗ್ರ ವೈದ್ಯಕೀಯ ಮೌಲ್ಯೀಕರಣ ನಡೆಸಿತ್ತು. ಅತ್ಯಾಧುನಿಕ ತಂತ್ರಜ್ಞಾನ ಬಳಸಿ, ಅವರ ಹೊಟ್ಟೆಯ ಕಾಂಟ್ರಾಸ್ಟ್-ಎನ್‍ಹ್ಯಾನ್ಸ್‍ಡ್ಕಂಪ್ಯೂಟೆಡ್ ಟೊಮೊಗ್ರಫಿ (ಸಿಇಸಿಟಿ) ಸ್ಕ್ಯಾನ್ ನಡೆಸಲಾಯಿತು. ಗ್ಯಾಸ್ಟ್ರಿಕ್ ಫಂಡಸ್ ಮತ್ತು ಸ್ಪ್ಲೇನಿಕ್ಹಿಲಮ್ ನಡುವೆ ಇರುವ 7 x 8 ಸೆಂ. ಮೀ ಗಾತ್ರದಲ್ಲಿ ಗಾಯವಾಗಿರುವುದನ್ನು ಸ್ಕ್ಯಾನ್ ಹೊರಗೆಡವಿತ್ತು. ಜಠರಗರುಳಿನ ಸ್ಟ್ರೋಮಲ್ ಗೆಡ್ಡೆಯ ಇರುವುದು ಅದರಲ್ಲಿ ದೃಢಪಟ್ಟಿತ್ತು. ರೋಗದ ವ್ಯಾಪ್ತಿ ಮೌಲ್ಯೀಕರಿಸಲು, ಪಾಸಿಟ್ರಾನ್ಎಮಿಷನ್ ಟೊಮೊಗ್ರಫಿ (ಪಿಇಟಿ) ಸ್ಕ್ಯಾನ್ ನಡೆಸಲಾಯಿತು. ಇದು ರೋಗ ದೇಹದ ಇತರೆ ಭಾಗಗಳಿಗೆ ಹರಡಿಲ್ಲ ಎಂಬುದನ್ನು ದೃಢಪಡಿಸಿತು.

ಈ ಪ್ರಕರಣವು ನಿಖರವಾದ ರೋಗನಿರ್ಣಯದಲ್ಲಿ ಶಸ್ತ್ರಚಿಕಿತ್ಸಕ, ಶಿಶುವೈದ್ಯರು, ಹೆಮಟೊ ಆನ್ಕೊಲೊಜಿಸ್ಟ್(ರಕ್ತಮತ್ತು ಕ್ಯಾನ್ಸರ್ ರೋಗ ತಜ್ಞರು), ಬಹು ಎಚ್ಚರಿಕೆ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಇದರಿಂದಾಗಿಯೇ ವಿವಿನ್‍ಗೆ ಉರಿಯೂತದ ಮೈಯೊಫೈಬ್ರೊಬ್ಲಾಸ್ಟಿಕ್ ಟ್ಯೂಮರ್ (ಐಎಂಟಿ) ಇರುವುದು ನಿಖರವಾಗಿ ಪತ್ತೆಯಾಗಿತ್ತು. ಇದು ಅತ್ಯಂತ ಅಪರೂಪದ ನಿಯೋಪ್ಲಾಸಂ ಆಗಿದ್ದು, ಪ್ರಾಥಮಿಕವಾಗಿ ಮಕ್ಕಳು ಮತ್ತು ಯುವ ವಯಸ್ಕರ ಮೇಲೆ ದುಷ್ಪರಿಣಾಮ ಬೀರುತ್ತದೆ.

ಕೆಎಂಸಿ ಆಸ್ಪತ್ರೆ ತಂಡದ ಶ್ರಮ: ಕೆಎಂಸಿ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ತಂಡವು ಲ್ಯಾಪರೊಸ್ಕೋಪಿಕ್ ವಿಧಾನದಿಂದ ಗೆಡ್ಡೆಯನ್ನು ತೆಗೆದುಹಾಕಿದೆ. ಮೆಸೆಂಟರಿಯಿಂದ 7 x 8 ಸೆಂ.ಮೀ ಗೆಡ್ಡೆಬೆಳೆದಿತ್ತಲ್ಲದೇ ಇದು ಹೊಟ್ಟೆ ಮತ್ತುಗುಲ್ಮದ ನಡುವೆ ಇತ್ತು. ಶಸ್ತ್ರ ಚಿಕಿತ್ಸೆಯ ನಂತರ, ವಿವಿನ್ ಉತ್ತಮ ಚೇತರಿಕೆ ಕಂಡುಕೊಂಡಿದ್ದು, 2 ನೇ ದಿನದಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಈ ಕುರಿತು ಕೆಎಂಸಿ ಆಸ್ಪತ್ರೆಯ ಪಚನಾಂಗ ರೋಗ ಶಸ್ತ್ರಚಿಕಿತ್ಸಾ ಸಲಹಾ ತಜ್ಞರಾದ ಡಾ. ವಿದ್ಯಾ ಭಟ್ ಅವರು ಮಾತನಾಡಿ, “ಈ ಪ್ರಕರಣವು ಆಸ್ಪತ್ರೆ ಅಂತರ ವಿಭಾಗೀಯ ಸಹಭಾಗಿತ್ವದ ಪ್ರಾಮುಖ್ಯತೆಯನ್ನು ಜ್ಞಾಪಿಸುವ ಪ್ರಬಲ ನಿದರ್ಶನವಾಗಿದೆ. ಒಟ್ಟಾಗಿ ಕೆಲಸ ಮಾಡುವ ಮೂಲಕ, ನಿಖರವಾದ ರೋಗನಿರ್ಣಯ ಮತ್ತು ಸೂಕ್ತರೀತಿಯಲ್ಲಿ ರೋಗಿಯ ನಿರ್ವಹಣೆಯ ಖಾತ್ರಿಯನ್ನು ಈ ಮೂಲಕ ಮತ್ತೊಮ್ಮೆ ಖಾತ್ರಿಪಡಿಸಿದ್ದೇವೆ. ಅಲ್ಲದೆ ಮಗುವಿನ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆಬಯಸಿದ ಪೋಷಕರ ದೃಢ ನಿಶ್ಚಯದಿಂದ ಪ್ರೇರಿತರಾಗಿದ್ದೇವೆ. ಹೊಟ್ಟೆಯಲ್ಲಿನ ಗೆಡ್ಡೆಯ ಯಶಸ್ವಿ ಚಿಕಿತ್ಸೆಯಲ್ಲಿ ಅವರ ಸಕ್ರಿಯ ಮಾರ್ಗದ ಅನುಸರಣೆ ಪ್ರಮುಖ ಎಲ್ಲರಿಗೂ ಮಾದರಿ ಎಂದು ತಿಳಿಸಿದ್ದಾರೆ.

ರೋಗ ಮರುಕಳಿಸದಂತೆ ಎಚ್ಚರಿಕೆ ವಹಿಸಿದ ವೈದ್ಯರ ತಂಡ: ರೋಗ ಮರುಕಳಿಸುವ ಸಾಧ್ಯತೆ ಮತ್ತು ಅದು ದೇಹದ ಇತರೆ ಭಾಗಗಳಿಗೆ ಹರಡುವ (ಮೆಟಾಸ್ಟಾಸಿಸ್) ಸಂಭವನೀಯ ಅಪಾಯ ಗುರುತಿಸಿ, ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ತಂಡವು ವಿವಿನ್‍ಗೆ ಶಸ್ತ್ರಚಿಕಿತ್ಸೆ ನಂತರದ ಸಮಯದಲ್ಲಿ ವೈದ್ಯರೊಂದಿಗೆ ನಿಗದಿತ ಭೇಟಿಗಳ ಪ್ರಾಮುಖ್ಯತೆಯನ್ನುಒತ್ತಿಹೇಳಿತ್ತು ಎಂದು ತಜ್ಞ ವೈದ್ಯರ ತಂಡ ವಿವರಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು