Categories: ಆರೋಗ್ಯ

ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ

ನಮ್ಮ ಹೃದಯದ ಆರೋಗ್ಯವನ್ನು ಕಾಪಡಿಕೊಳ್ಳಲು ನಾವು ಉತ್ತಮವಾದ ಹಾಗೂ ಸಮತೋಲಿತ ಆಹಾರವನ್ನು ಸೇವಿಸುವುದರ ಜೊತೆಗೆ ಅಗತ್ಯಕ್ಕೆ ತಕ್ಕಷ್ಟು ದೈಹಿಕವಾಗಿ ದೇಹವನ್ನು ದಣಿಸುವುದರಿಂದ ಕೂಡ ನಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ನಾವು ಸೇವಿಸುವ ಆಹಾರದಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸುವುದು ಬಹಳ ಉತ್ತಮ ಎಂದು ಆಯುರ್ವೇದಿಕ್ ವೆಲ್ ನೆಸ್ ಕ್ಲಿನಿಕ್‌ನ ವೈದ್ಯೆ ಡಾ. ಅನುರಾಧ ಹೇಳುತ್ತಾರೆ.

ಬದಲಾದ ಕಾಲಕ್ಕೆ ಅನುಗುಣವಾಗಿ ನಮ್ಮ ಆಹಾರ ಪದ್ದತಿಯೂ ಸಹ ಬದಲಾಗಿದೆ. ಮೈದಾ, ಪ್ರೊಸೆಸ್ಡ್ ಆಹಾರಗಳನ್ನು ಸೇವಿಸುವ ಬದಲು ಹೋಲ್ ಗ್ರೇನ್ ಗಳನ್ನು ಬಳಸುವುದು ನಮ್ಮ ಹೃದಯದ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ.

ಉತ್ತಮ ಆಹಾರದ ಜೊತೆಗೆ ಪ್ರೋಟಿನ್‌ಗಾಗಿ ಮಾಂಸಹಾರಿಗಳಿಗೆ ಪ್ರೋಟಿನ್ ಮೂಲವಾಗಿ ಮೀನು ಮಾಂಸಗಳಲ್ಲಿ ಸಿಗುವುದರಿಂದ ಸಸ್ಯಹಾರಿಗಳು ಒಣ ದ್ರಾಕ್ಷಿ, ಬಾದಾಮಿ, ವಾಲ್‌ನಟ್ಸ್, ಸೂರ್ಯಕಾಂತಿ ಬೀಜಗಳು, ಹಣ್ಣುಗಳಾದ ಅವಕಾಡೋ ಮುಂತಾದ ಉತ್ತಮ ಹಣ್ಣುಗಳನ್ನು ಸೇವಿಸಬೇಕು.

ಆಹಾರದ ಜೊತೆಗೆ ಎಣ್ಣೆಯು ಸಹ ನಮ್ಮ ಹೃದಯವನ್ನು ಆರೋಗ್ಯಕರವಾಗಿರಿಸುವಲ್ಲಿ ಉತ್ತಮ ಪಾತ್ರ ನಿರ್ವಹಿಸುತ್ತದೆ. ರೀಫೈಡ್ ಎಣ್ಣೆಯನ್ನು ಬಳಸುವ ಬದಲು ತೆಂಗಿನ ಎಣ್ಣೆ, ಕಡ್ಲೆ ಎಣ್ಣೆ, ಅಥವಾ ಸಾಸಿವೆ ಎಣ್ಣೆಯನ್ನು ನಮ್ಮ ಆಹಾರದಲ್ಲಿ ಬಳಸಿಕೊಳ್ಳಬಹುದು.

ಪ್ರೊಸೆಸ್ಡ್ ಆಹಾರಗಳು, ರೆಡಿ ಟು ಈಟ್ ಆಹಾರಗಳು, ಹಾಗೂ ಫ್ರೋಝನ್ ಆಹಾರಗಳನ್ನು ಸಾಧ್ಯವಾದಷ್ಟು ನಿಲ್ಲಿಸುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದು.

ಮುಖ್ಯವಾಗಿ ಸಕ್ಕರೆ ಅಂಶ ನಮ್ಮ ದೇಹಕ್ಕೆ ಇರುವುದರಲ್ಲಿ ಬಹಳಷ್ಟು ಹಾನಿಕಾರಕ. ಈ ಸಕ್ಕರೆ ಅಂಶವು ನಮ್ಮ ದೇಹಕ್ಕೆ ಕಾಫಿ, ಜೂಸ್, ಟಿ, ಕೆಚಪ್ ಮುಂತಾದ ರೂಪದಲ್ಲಿ ಸಕ್ಕರೆಯು ನಮ್ಮ ದೇಹ ಸೇರುತ್ತಿದೆ ಇವುಗಳಿಂದ ಸಾಧ್ಯವಾದಷ್ಟು ದೂರವಿರುವುದರಿಂದ ನಮ್ಮ ಹೃದಯದ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬಹುದು.

Ashika S

Recent Posts

ಕರೆಂಟ್ ಕಟ್‌ನಿಂದಾಗಿ ಜನರ ಜೀವನ ಕತ್ತಲು: ವಿದ್ಯುತ್ ಸರಬರಾಜು ಕಚೇರಿಗೆ ಮುತ್ತಿಗೆ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಒಂದು ಚಿಕ್ಕ ಮಳೆ ಬಂದರೆ ಸಾಕು ಕೆಲವೊಂದು ಭಾಗಗಳಲ್ಲಿ ಕರೆಂಟ್ ಇಲ್ಲದೆ, ಕತ್ತಲಲ್ಲಿ ಜೀವನ ನಡೆಸುವಂತಾಗಿದೆ.…

7 mins ago

ತೋಟಗಾರಿಕೆ ಇಲಾಖೆಯಿಂದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ

ಜಿಲ್ಲೆಯಾದ್ಯಂತ 8 ಸಾವಿರ ಎಕರೆ ಮಾವು ಬೆಳೆಯನ್ನು ಬೆಳೆಯಲಾಗುತ್ತಿದ್ದು, ಸಾರ್ವಜನಿಕರಿಗೆ ಹಾಗೂ ಗ್ರಾಹಕರಿಕೆಗೆ ಉತ್ತಮ ಗುಣಮಟ್ಟದ ಮಾವು ನೀಡಬೇಕೆನ್ನುವ ಉದ್ದೇಶದಿಂದ…

23 mins ago

ಕಬಿನಿ ಹಿನ್ನೀರಿನಲ್ಲಿ ‘ಜ್ಯೂನಿಯರ್‌ ಅರ್ಜುನ’ ಪ್ರತ್ಯಕ್ಷ !

ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮದವೇರಿದ ಸಲಗ ನಡೆಸಿದ ದಾಳಿಗೆ ಉಸಿರು ನಿಲ್ಲಿಸಿದ ದಸರಾ ಆನೆ ಅರ್ಜುನನ ನೆನಪು ಮಾಸುವ…

32 mins ago

ಎಣ್ಣೆ ಸಾಲ ಕೊಡಲಿಲ್ಲ ಎಂದು ಬಾರ್ ಮಾಲೀಕನ ಮೇಲೆ ಹಲ್ಲೆ: ಆರೋಪಿ ವಶಕ್ಕೆ

ಮದ್ಯದಂಗಡಿಯಲ್ಲಿ ಎಣ್ಣೆ ಸಾಲ ಕೊಡದಿದಕ್ಕೆ ಬಾರ್ ಮಾಲೀಕನ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ.

37 mins ago

ಆರ್​​​ಸಿಬಿ ತಂಡಕ್ಕೆ ಕೈ ಕೊಟ್ಟ​ ವಿಲ್ ಜಾಕ್ಸ್​​

ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್​​ ಮುಕ್ತಾಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಿಗ್​ ಶಾಕ್​ ಕಾದಿದೆ. ಪ್ಲೇ…

37 mins ago

ಉಡುಪಿ ಶ್ರೀಕೃಷ್ಣಮಠಕ್ಕೆ ಮಾಜಿ ಕ್ರಿಕೆಟ್ ಆಟಗಾರ ರವಿಶಾಸ್ತ್ರಿ ಭೇಟಿ

ಉಡುಪಿ ಶ್ರೀಕೃಷ್ಣ ಮಠಕ್ಕೆ ಇಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರವಿಶಾಸ್ತ್ರಿ ಅವರು ಭೇಟಿ ನೀಡಿ ದೇವರ ದರ್ಶನ…

1 hour ago