News Karnataka Kannada
Saturday, April 20 2024
Cricket
ಆರೋಗ್ಯ

ನಿಮ್ಮ ವಸಡು ಮತ್ತು ಹಲ್ಲುಗಳ ಆರೈಕೆ ಹೀಗಿದ್ದರೆ ಒಳ್ಳೆಯದು

healthy teeth
Photo Credit : Pexels

ಆರೋಗ್ಯ ಉತ್ತಮವಾಗಿರಬೇಕೆಂದರೆ ಬಾಯಿಯ ಆರೋಗ್ಯ ಅತ್ಯಂತ ಮುಖ್ಯವಾಗುತ್ತದೆ. ಆದರೆ, ಸಾಕಷ್ಟು ಜನರು ಬಾಯಿಯ ಆರೋಗ್ಯವನ್ನು ಲಘುವಾಗಿ ಪರಿಗಣಿಸುವುದುಂಟು. ಆದರೆ, ಬಾಯಿಯ, ಹಲ್ಲಿನ ಸಮಸ್ಯೆಗಳನ್ನು ತಡೆಗಟ್ಟಲು ನಮ್ಮ ಬಾಯಿ, ಹಲ್ಲು ಮತ್ತು ವಸಡುಗಳನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ಮುಖ್ಯವಾಗಿದೆ.

ಬಾಯಿಯ ಒಳಗಿನ ಬಣ್ಣ, ಹುಣ್ಣುಗಳ ಕುರಿತು ಗಮನಹರಿಸಿ. ಪ್ರತಿದಿನ ಹಲ್ಲುಜ್ಜುವಾಗ ಪರೀಕ್ಷಿಸಿಕೊಳ್ಳಿ. ಯಾವಾಗಲೂ ಸಕ್ಕರೆ ರಹಿತ ಮತ್ತು ಆಲ್ಕೋಹಾಲ್ ರಹಿತ ಮೌತ್‌ವಾಶ್‌ಗಳನ್ನು ಬಳಸಿ. ಬ್ರಷ್ ಮಾಡಿದ ಬಳಿಕ ಕನಿಷ್ಠ 30 ನಿಮಿಷಗಳ ಬಳಿಕ ಇದನ್ನು ಬಳಿಸಿ.

ದೇಹದಲ್ಲಿ ಕಂಡು ಬರುವ ಬದಲಾವಣೆಗಳು, ಲಕ್ಷಣಗಳ ಮೇಲೆ ಎಚ್ಚರಿಕೆ ವಹಿಸಿ. ದೀರ್ಘಕಾಲದ ತಲೆನೋವು, ಕುತ್ತಿಗೆ ಮತ್ತು ಭುಜದ ನೋವು, ಪರಿಹರಿಸಲಾಗದ ಬೆನ್ನು ನೋವು ಬಾಯಿಯ ಕ್ಯಾನ್ಸರ್’ಗೆ ಕಾರಣವಾಗಿರಬಹುದು.

ಆಹಾರ ಸೇವನೆ ವೇಳೆ ಆಹಾರ ಹಲ್ಲುಗಳ ನಡುವೆ ಸಿಲುಕಿಕೊಳ್ಳುವುದು ಸಾಮಾನ್ಯ. ಆದರೆ, ಬಹುತೇಕ ಮಂದಿ ಇದನ್ನು ತೆಗೆಯಲು ಟೂತ್ ಪಿಕ್, ಸೇಫ್ಟಿ ಪಿನ್ ಗಳನ್ನು ಬಳಕೆ ಮಾಡುತ್ತಾರೆ. ಆದರೆ, ಹಲ್ಲುಗಳ ಆರೋಗ್ಯಕ್ಕೆ ಇದು ಉತ್ತಮವಲ್ಲ. ಇವುಗಳನ್ನು ತಪ್ಪಿಸಿ ಫ್ಲೋಸ್’ಗಳು, ಇಂಟರ್ ಡೆಂಟಲ್ ಬ್ರಷ್ ಗಳನ್ನು ಬಳಕೆ ಮಾಡಿ.

ಹಲ್ಲುಜ್ಜಲು 3-3-3-3 ನಿಯಮವನ್ನು ಅವುಸರಿಸಿ. ಹಲ್ಲುಗಳನ್ನು ಉಜ್ವಲು ಮೃದುವಾದ ಬ್ರಷ್ ಗಳನ್ನು ಬಳಸಿ. ಮೂರು ಸೆಕೆಂಡುಗಳ ಕಾಲ ಮೂರು ಹಲ್ಲುಗಳನ್ನು ಉಜ್ಜಿ. ಎಲ್ಲಾ ಹಲ್ಲುಗಳ ಉಜ್ಜುವ ಅವಧಿ ಮೂರು ನಿಮಿಷಗಳಾಗಿರಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಬ್ರಷ್ ಗಳನ್ನು ಬದಲಿಸಿ.

ಇತ್ತೀಚಿನ ದಿನಗಳಲ್ಲಿ ಕಚೇರಿಗಳಲ್ಲಿ ಎಸಿ ಕೆಳಗೆ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿರುವ ಜನತೆ ಸೂರ್ಯನ ಬೆಳಕಿಗೆ ಮೈಯೊಡ್ಡುವುದನ್ನೇ ಮರೆತುಬಿಡುತ್ತಿದ್ದಾರೆ. ಇಂತಹವರು ದೇಹದಲ್ಲಿ ವಿಟಮಿನ್ ಡಿ ಮಟ್ಟವನ್ನು ಪರಿಶೀಲಿಸಿಕೊಳ್ಳುವುದು ಮುಖ್ಯವಾಗುತ್ತದೆ. ಇಂತಹವರು ಹೆಚ್ಚೆಚ್ಚು ವ್ಯಾಯಾಮ ಮಾಡಿ, ವಿಟಿಮಿನ್ ಡಿ ಭರಿತ ಆಹಾರ ಸೇವನೆ ಮಾಡಬೇಕು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು